PM Modi: ಜನವರಿ 3 ರಿಂದ 15ರಿಂದ 18ವರ್ಷದ ಮಕ್ಕಳಿಗೆ ಲಸಿಕೆ; ಪ್ರಧಾನಿ ಮೋದಿ ಘೋಷಣೆ

ದೇಶದಲ್ಲೆಡೆ ಓಮೈಕ್ರಾನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
    ನವದೆಹಲಿ (ಡಿ. 25):  ದೇಶದಲ್ಲೆಡೆ ಓಮೈಕ್ರಾನ್ (omicron) ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ದಿಢೀರ್​​ ಭಾಷಣ ಮಾಡಿದರು. ಈ ವೇಳೆ ಅವರು , ಜನವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್​ ಲಸಿಕೆ (Covid vaccine children between 15 to 18) ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

    ಸೋಂಕಿನ ವಿರುದ್ಧ ದೇಶದ ಜನರು ಸುರಕ್ಷಾ ಕ್ರಮ ಅನುಸರಿಸಿ ಹೋರಾಡಬೇಕು. ಇನ್ನೊಂದು ವಾರದಲ್ಲಿ ನಾವು 2022ರ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಸಂದರ್ಭದಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳು ಓಮೈಕ್ರಾನ್ ಸೋಂಕಿನ ಸಮಸ್ಯೆ ಎದುರಿಸುತ್ತಿದೆ. ಕೋವಿಡ್ ಎರಡನೇ ಅಲೆ ಬಳಿಕ ನಾವು ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಇದಕ್ಕೆ ಎಲ್ಲಾ ವ್ಯವಸ್ಥೆ ನಡೆಸಿದ್ದೇವೆ. ನಾವು ಇಂದು 18 ಲಕ್ಷ ಬೆಡ್​ ಹೊಂದಿದ್ದು, 5 ಲಕ್ಷ ಬೆಡ್​ಗಳು ಆಕ್ಸಿಜನ್​ ವ್ಯವಸ್ಥೆ ಹೊಂದಿವೆ.



    ಆರೋಗ್ಯ ಮುಂಚೂಣಿ ಕಾರ್ಯಕರ್ತರು ಮತ್ತು 60 ಮೇಲ್ಪಟ್ಟವರಿಗೆ ಬೂಸ್ಟರ್​ ಡೋಸ್​

    ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಬೂಸ್ಟರ್​ ಡೋಸ್  (precautionary doses)  ನೀಡಲಾಗುವುದು. 2022ರ ಜನವರಿ 10ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಈ ಬೂಸ್ಟರ್​​ ಡೋಸ್​ ವಿತರಣೆ ಮಾಡಲಾಗುವುದು. ಭಾರತದ ತಜ್ಞರು ಮತ್ತು ವಿಜ್ಞಾನಿಗಳ ಸಲಹೆ ಪಡೆದು ಈ ಕ್ರಮಕ್ಕೆ ಮುಂದಾಗಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಈ ಮುನ್ನೆಚ್ಚರಿಕೆ ಲಸಿಕೆ ನೀಡುವುದರಿಂದ ಅವರ ವಿಶ್ವಾಸವನ್ನು ಬಲಪಡಿಸಲಾಗುವುದು. ಇದರಿಂದ ಅವರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

    ಇದನ್ನು ಓದಿ: ದೇಣಿಗೆ ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ; ಪಕ್ಷಕ್ಕೆ 1000 ರೂ ನೀಡಿದ ಪ್ರಧಾನಿ ಮೋದಿ

    ಸುರಕ್ಷತಾ ನಿಯಮ ಪಾಲನೆಗೆ ಮನವಿ

    ದೇಶದಲ್ಲಿ ಒಮೈಕ್ರಾನ್​ ಹೆಚ್ಚುತ್ತಿರುವ ಹಿನ್ನಲೆ ಜನರು ಕಂಗಾಲಾಗಬಾರದು. ಜನರು ಸುರಕ್ಷತೆ ನಿಯಮ ಅನುಸರಿಸಬೇಕು. ಅನೇಕ ದೇಶಗಳಲ್ಲಿ ಕೋವಿಡ್‌ನ ಓಮಿಕ್ರಾನ್ ರೂಪಾಂತರದಿಂದಾಗಿ ಸೋಂಕುಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯಲ್ಲಿ ಜನರು ಮೈಮರೆಯಬಾರದು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಸೋಂಕಿನ ಕುರಿತು ಜನರು ಭಯಪಡದೇ,  ಜಾಗರೂಕರಾಗಿರಿ. ನಿಯಮಿತವಾಗಿ ಕೋವಿಡ್ ನಿಯಮವಾಳಿಗಳಾದ  ಮಾಸ್ಕ್​ ಬಳಕೆ ಮತ್ತು ಕೈ ಶುಚಿತ್ವಗೊಳಿಸಬೇಕು ಎಂದರು

    ಇನ್ನು ದೇಶದಲ್ಲಿ  ಕೋವಿಡ್-19 ರ ಗಂಭೀರತೆಯನ್ನು ಅರಿತು ಭಾರತದಲ್ಲಿ 141 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದೆ. ಶೇ 90 ಕ್ಕಿಂತ ಹೆಚ್ಚು ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ.

    ಇದನ್ನು ಓದಿ: ಫೆಬ್ರವರಿಯಲ್ಲಿ ಕೋವಿಡ್ ಮೂರನೇ ಅಲೆ ಹೆಚ್ಚಳ ಸಾಧ್ಯತೆ: ಐಐಟಿ-ಕಾನ್ಪುರ್ ಅಧ್ಯಯನ

    ಭಾರತ್ ಬಯೋಟೆಕ್‌ ಲಸಿಕೆಗೆ ಇಂದು ಡಿಜಿಸಿಐ ಅನುಮೋದನೆ

    ಭಾರತದಲ್ಲಿ Omicron ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, DGCI ಭಾರತ್ ಬಯೋಟೆಕ್‌ಗೆ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯ ತುರ್ತು ಬಳಕೆಗೆ ಹಸಿರು ನಿಶಾನೆ ತೋರಿದೆ. ಝೈಡಸ್ ಕ್ಯಾಡಿಲಾ ಅವರ ZyCoV-D ನಂತರ ಭಾರತದಲ್ಲಿ ಮಕ್ಕಳಿಗೆ ಬಳಸಲು ಕೋವಾಕ್ಸಿನ್ ಎರಡನೇ ಕೋವಿಡ್-19 ಲಸಿಕೆಯಾಗಿದೆ.

    ಮೂಲಗಳ ಪ್ರಕಾರ, ಮಕ್ಕಳ ಲಸಿಕೆಗಾಗಿ ಸರ್ಕಾರವು ಭಾರತ್ ಬಯೋಟೆಕ್‌ಗೆ ಆದೇಶವನ್ನು ನೀಡಬೇಕಾಗಿದೆ. ಈ ಆದೇಶ ಮಕ್ಕಳ ವ್ಯಾಕ್ಸಿನೇಷನ್‌ಗಳ ನೀತಿಗಳ ಮೇಲೆ ಅವಲಂಬಿತವಾಗಿದೆ, ಅದನ್ನು ಇನ್ನೂ ದೃಢೀಕರಿಸಲಾಗಿಲ್ಲ.
    Published by:Seema R
    First published: