ಪ್ರಧಾನಮಂತ್ರಿ ಅನಿಲ್​ ಅಂಬಾನಿ ಮಧ್ಯವರ್ತಿಯಂತೆ ವರ್ತಿಸಿದ್ದಾರೆ; ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ

ಅನಿಲ್ ಅಂಬಾನಿ ಫ್ರಾನ್ಸ್​ಗೆ ತೆರಳಿ ಫ್ರಾನ್ಸ್​ನಲ್ಲಿರುವ ರಕ್ಷಣಾ ಸಚಿವ ಜೀನ್​ ಯುವಿಸ್​ ಲಿ ಡ್ರೀನ್ಸ್​ ಅವರ ಕಚೇರಿಯಲ್ಲಿ 2015ರ ಮಾರ್ಚ್​ನಲ್ಲಿ ಸಭೆ ನಡೆಸಿದ್ದರು. ಮತ್ತು ಈ ಸಭೆಯಲ್ಲಿ ಅವರ ಉನ್ನತ ಸಲಹಾಧಿಕಾರಿ ಜೊತೆಗಿದ್ದರು ಎಂದು ರಾಹುಲ್ ಹೇಳಿದರು.

HR Ramesh | news18
Updated:February 12, 2019, 3:47 PM IST
ಪ್ರಧಾನಮಂತ್ರಿ ಅನಿಲ್​ ಅಂಬಾನಿ ಮಧ್ಯವರ್ತಿಯಂತೆ ವರ್ತಿಸಿದ್ದಾರೆ; ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ
ರಾಹುಲ್ ಗಾಂಧಿ
HR Ramesh | news18
Updated: February 12, 2019, 3:47 PM IST
ನವದೆಹಲಿ: ರಫೇಲ್​ ಒಪ್ಪಂದ ಸಂಬಂಧ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಫೇಲ್​ ಹಗರಣದಲ್ಲಿ ಪ್ರಧಾನಮಂತ್ರಿ ಅವರು ಅನಿಲ್​ ಅಂಬಾನಿ ಅವರ ಮಧ್ಯವರ್ತಿವಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರು 36 ಯುದ್ಧ ವಿಮಾನ ಒಪ್ಪಂದ ಘೋಷಿಸುವ 15 ದಿನದ ಮುನ್ನವೇ ಉದ್ಯಮಿ ಅನಿಲ್ ಅಂಬಾನಿ ಫ್ರೆಂಚ್​ನ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದರು. ಒಪ್ಪಂದದ ಬಗ್ಗೆ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಕಾರ್ಯದರ್ಶಿಗೆ ಮಾಹಿತಿ ಇಲ್ಲದಿರುವಾಗ ಈ ವಿಚಾರ ಅನಿಲ್ ಅಂಬಾನಿ ಅವರಿಗೆ ತಿಳಿದಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಪ್ರಧಾನಮಂತ್ರಿಗಳು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ ರಾಹುಲ್, ಪ್ರಧಾನಿ ಮೋದಿ ಅವರು ಫ್ರಾನ್ಸ್​ಗೆ ತೆರಳಿ ಒಪ್ಪಂದಕ್ಕೆ ಸಹಿ ಮಾಡುವ ಮುನ್ನವೇ ಅನಿಲ್​ ಅಂಬಾನಿ ಪ್ರಾನ್ಸ್​ ರಕ್ಷಣಾ ಸಚಿವರನ್ನು ಭೆಟಿಯಾಗಿದ್ದರು. ಮೊದಲು ವಾಣಿಜ್ಯ ಹೆಲಿಕಾಪ್ಟರ್​ ತಯಾರಿಕೆ ಬಗ್ಗೆ ನೋಡಲಾಗುತ್ತಿದೆ ಎಂದು ಅಂಬಾನಿ ಅವರು ಹೇಳುತ್ತಾರೆ. ಇದು ಅಧಿಕೃತ ರಹಸ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಧಾನಮಂತ್ರಿ ಮತ್ತು ಕೆಲವೇ ಕೆಲವು ಮಂದಿಗಷ್ಟೇ ಈ ಬಗ್ಗೆ ತಿಳಿದಿದೆ. ನಿಜ ಸಂಗತಿ ಏನೆಂದರೆ ಈ ಸಭೆ ನಡೆಸಿದ ನಂತರವೇ ಅನಿಲ್ ಅಂಬಾನಿ ತಮ್ಮ ಕಂಪನಿ ತೆರೆಯುತ್ತಾರೆ. ಪ್ರಧಾನಮಂತ್ರಿಗಳು ಅನಿಲ್ ಅಂಬಾನಿಯ ಮಧ್ಯವರ್ತಿಯಂತೆ ವರ್ತಿಸಿದ್ದಾರೆ ಎಂದು ಇ-ಮೇಲ್​ ದಾಖಲೆಗಳನ್ನು ರಾಹುಲ್​ ಪ್ರದರ್ಶಿಸಿ ಹೇಳಿದರು.

ಅನಿಲ್ ಅಂಬಾನಿ ಫ್ರಾನ್ಸ್​ಗೆ ತೆರಳಿ ಫ್ರಾನ್ಸ್​ನಲ್ಲಿರುವ ರಕ್ಷಣಾ ಸಚಿವ ಜೀನ್​ ಯುವಿಸ್​ ಲಿ ಡ್ರೀನ್ಸ್​ ಅವರ ಕಚೇರಿಯಲ್ಲಿ 2015ರ ಮಾರ್ಚ್​ನಲ್ಲಿ ಸಭೆ ನಡೆಸಿದ್ದರು. ಮತ್ತು ಈ ಸಭೆಯಲ್ಲಿ ಅವರ ಉನ್ನತ ಸಲಹಾಧಿಕಾರಿ ಜೊತೆಗಿದ್ದರು ಎಂದು ರಾಹುಲ್ ಹೇಳಿದರು.

ಇದನ್ನು ಓದಿ: ರಫೇಲ್​ ತನಿಖೆಯ ಭಯದಿಂದಲೇ ಸಿಬಿಐನಿಂದ ಅಲೋಕ್​ ವರ್ಮರನ್ನು ಮೋದಿ ಕೆಳಗಿಳಿಸಿದ್ದಾರೆ; ರಾಹುಲ್ ಗಾಂಧಿ ಟೀಕೆ

ಅನಿಲ್ ಅಂಬಾನಿ ರಿಲಾಯನ್ಸ್​ ಡಿಫೆನ್ಸ್​ ಪ್ರಕಾರ, ಅನಿಲ್​ ಅಂಬಾನಿ ರಫೇಲ್​ ವಿಚಾರವಾಗಿ ಫ್ರಾನ್ಸ್​ಗೆ ಭೇಟಿ ನೀಡಿರಲಿಲ್ಲ. ಭಾರತ ಸರ್ಕಾರದೊಂದಿಗೆ ನಾವಲ್​ ಯುಟಿಲಿಟಿ ಹೆಲಿಕಾಪ್ಟರ್​ ಒಪ್ಪಂದ ಸಂಬಂಧ ಚರ್ಚೆ ನಡೆಸಲು ಹೋಗಿದ್ದು ಎಂದು ಹೇಳುತ್ತಾರೆ. ಆದರೆ, ಪ್ರಧಾನಿ ಅವರು ಈ ಒಪ್ಪಂದಕ್ಕೆ ಸಹಿ ಮಾಡುವುದು ಮೊದಲೇ ಅನಿಲ್ ಅಂಬಾನಿಗೆ ತಿಳಿದಿತ್ತು ಎಂದು ರಾಹುಲ್​ ಬಲವಾಗಿ ಆರೋಪಿಸಿದ್ದಾರೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...