ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ ಸಲಹೆ, ಹೊಸ ಆಲೋಚನೆ ಕೇಳಿದ ಪ್ರಧಾನಿ ಮೋದಿ

ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಟ್ವೀಟ್ ಮಾಡಿದ್ದು, ನಮೋ ಆ್ಯಪ್ ಮೂಲಕ ದೇಶದ ಪ್ರಜೆಗಳು ನನ್ನ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೌಲ್ಯಾಧರಿತ ಸಲಹೆಯನ್ನು ನೀಡಿ. ನಿಮ್ಮ ಆಲೋಚನೆಗಳನ್ನು ದೇಶದ 130 ಕೋಟಿ ಜನರು ದೆಹಲಿಯ ಕೆಂಪುಕೋಟೆಯಿಂದ ಆಲಿಸಲಿದ್ದಾರೆ ಎಂದು ಹೇಳಿದ್ದಾರೆ.

HR Ramesh | news18
Updated:July 19, 2019, 3:01 PM IST
ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ ಸಲಹೆ, ಹೊಸ ಆಲೋಚನೆ ಕೇಳಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
HR Ramesh | news18
Updated: July 19, 2019, 3:01 PM IST
ನವದೆಹಲಿ: ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಅವರು ಕೆಂಪುಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ದೇಶದ ಸಾಮಾನ್ಯ ಜನರ ಧ್ವನಿಯಾಗಿ ತಾವು ಏನನ್ನು ಮಾತನಾಡಬಹುದು ಎಂದು ದೇಶದ 130 ಕೋಟಿ ಜನರ  ಸಲಹೆ, ಸೂಚನೆ, ಕೇಳಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಯಾವ ವಿಷಯದ ಬಗ್ಗೆ ಗಮನ ಹರಿಸಬೇಕು, ದೇಶದ ಪ್ರಗತಿಗೆ ಯಾವೆಲ್ಲಾ ಯೋಜನೆಗಳನ್ನು ಕೈಗೊಳ್ಳಬಹುದು ಹಾಗೂ ಸಾಮಾನ್ಯ ಜನರ ಸಮಸ್ಯೆಗಳೇನು ಎಂಬುದರ ಮೇಲೆ ಬೆಳಕು ಚೆಲ್ಲಿ, ತಮ್ಮ ಸಲಹೆ ಸೂಚನೆ ಜೊತೆಗೆ ಹೊಸ ಹೊಸ ಐಡಿಯಾಗಳನ್ನು ಜನರು ನೀಡಬಹುದಾಗಿ. ಅವುಗಳಲ್ಲಿ ಮೌಲ್ಯಾಧರಿತ ವಿಷಯವನ್ನು ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡು, ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಂಡಿಸಲಿದ್ದಾರೆ.

ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಟ್ವೀಟ್ ಮಾಡಿದ್ದು, ನಮೋ ಆ್ಯಪ್ ಮೂಲಕ ದೇಶದ ಪ್ರಜೆಗಳು ನನ್ನ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೌಲ್ಯಾಧರಿತ ಸಲಹೆಯನ್ನು ನೀಡಿ. ನಿಮ್ಮ ಆಲೋಚನೆಗಳನ್ನು ದೇಶದ 130 ಕೋಟಿ ಜನರು ದೆಹಲಿಯ ಕೆಂಪುಕೋಟೆಯಿಂದ ಆಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ರಾಜ್ಯಪಾಲರ ಡೆಡ್​ಲೈನ್ ಅಂತ್ಯ; ವಿಶ್ವಾಸ ಮತಕ್ಕೆ ಬರದ ಮೈತ್ರಿ ಪಾಳಯ; ವಜಾಗೊಳ್ಳುತ್ತಾ ಸರ್ಕಾರ?ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳಿಗೆ ಜನರಿಂದ ಸಲಹೆ, ಸೂಚನೆ, ಹೊಸ ಆಲೋಚನೆಗಳನ್ನು ಕೇಳಿ, ಪಡೆದು ಅವುಗಳನ್ನು ತಮ್ಮ ಭಾಷಣದಲ್ಲಿ ಮಂಡಿಸುತ್ತಾ ಬಂದಿದ್ದಾರೆ. ಮನ್​ ಕೀ ಬಾತ್​ ಕಾರ್ಯಕ್ರಮ ಕೂಡ ಇದೇ ಉದ್ದೇಶದಿಂದ ಆರಂಭವಾಗಿದ್ದು, ಅಲ್ಲಿಯೂ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಮೋದಿ ಅವರು ಚರ್ಚಿಸುತ್ತಿದ್ದಾರೆ.

First published:July 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...