• Home
  • »
  • News
  • »
  • national-international
  • »
  • Lal Bahadur Shastri: ಕಾರು ಖರೀದಿಸಲು ಶಾಸ್ತ್ರೀಜಿ ಮಾಡಿದ್ರು ಸಾಲ! ಆ ಕಾರು ಈಗೆಲ್ಲಿದೆ ಗೊತ್ತೇ?

Lal Bahadur Shastri: ಕಾರು ಖರೀದಿಸಲು ಶಾಸ್ತ್ರೀಜಿ ಮಾಡಿದ್ರು ಸಾಲ! ಆ ಕಾರು ಈಗೆಲ್ಲಿದೆ ಗೊತ್ತೇ?

ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಕಾರ್ ಖರೀದಿಗಾಗಿ ಬ್ಯಾಂಕ್​ನಿಂದ ತೆಗೆದುಕೊಂಡಿದ್ದ 5000 ರೂ ಸಾಲವನ್ನು, ಅವರ ಮರಣಾನಂತರ ಪತ್ನಿ ಶ್ರೀಮತಿ ಲಲಿತಾ ಶಾಸ್ತ್ರಿ ಪಿಂಚಣಿ ಹಣದಿಂದ ತೀರಿಸಿದ್ದರು

  • Share this:

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ (Lal Bahadur Shastri ) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಸ್ವಾತಂತ್ರ್ಯಕ್ಕೆ ಹಾಗೂ ಸ್ವಾತಂತ್ರ್ಯಾನಂತರ ಭಾರತಕ್ಕೆ ಅವರ ಕೊಡುಗೆ ತುಂಬಾನೇ ದೊಡ್ಡದು. ಅಕ್ಟೋಬರ್‌ 2, ಅವರ ಜನ್ಮದಿನ. ಅಂದಹಾಗೆ ಶಾಸ್ತ್ರೀಜಿ ಪ್ರಾಮಾಣಿಕತೆಗೆ ಹೆಸರಾದವರು. ಪ್ರಧಾನಮಂತ್ರಿಯಂತಹ (Prime Minister) ಸ್ಥಾನದಲ್ಲಿದ್ದಾಗಲೂ ನ್ಯಾಯ ನೀತಿಯನ್ನು ಬಿಟ್ಟು ನಡೆದುಕೊಂಡವರಲ್ಲ. ಇದೀಗ ಅವರೆಷ್ಟು ಪ್ರಾಮಾಣಿಕರಾಗಿದ್ದರು ಎಂಬುದಕ್ಕೆ ಮತ್ತೊಂದು ಉದಾಹರಣೆ ಬೆಳಕಿಗೆ ಬಂದಿದೆ. ಶಾಸ್ತ್ರೀಜಿ ಮರಣಾನಂತರ (PM Lal Bahadur Shastri  Death) ಅವರ ಪತ್ನಿ ಪಿಂಚಣಿ ಸಹಾಯದಿಂದ ಅವರ ಕಾರ್​ಗಾಗಿ ಮಾಡಿದ್ದ ಸಾಲ ತೀರಿಸಿದ್ದ ಸಂಗತಿ ಬೆಳಕಿಗೆ ಬಂದಿದೆ.


ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಬಗೆಗಿನ ಇಂಟರೆಸ್ಟಿಂಗ್‌ ವಿಚಾರವನ್ನು ಇಂಡಿಯನ್‌ ಹಿಸ್ಟರಿ ಪಿಕ್ಸ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಪೋಸ್ಟ್‌ ಮಾಡಿದೆ. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಕಾರ್ ಖರೀದಿಗಾಗಿ ಬ್ಯಾಂಕ್​ನಿಂದ ತೆಗೆದುಕೊಂಡಿದ್ದ 5000 ರೂ ಸಾಲವನ್ನು, ಅವರ ಮರಣಾನಂತರ ಪತ್ನಿ ಶ್ರೀಮತಿ ಲಲಿತಾ ಶಾಸ್ತ್ರಿ ಪಿಂಚಣಿ ಹಣದಿಂದ ತೀರಿಸಿದ್ದರು ಅಂತ ಟ್ವೀಟ್‌ ಮಾಡಿದೆ.


ಇದೇ ನೋಡಿ ಆ ಕಾರ್


ಎಲ್ಲಿದೆ ಈ ಕಾರು?
ಅಂದಹಾಗೆ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರದ್ದಾಗಿ ಕೆನೆ-ಬಣ್ಣದ 1964 ಫಿಯೆಟ್, ಬೇರಿಂಗ್ ನಂ. DLE 6 ಕಾರು ಇಂದು ದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕ 1 ರಲ್ಲಿದೆ.


ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಸಾಲ ಮಾಡಿದ್ದೇಕೆ?
ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಬಳಿ ಕಾರ್‌ ಇಲ್ಲದಿದ್ದ ಕಾರಣ, ಕಾರ್‌ ಕೊಳ್ಳುವಂತೆ ಅವರ ಕುಟುಂಬ ಒತ್ತಾಯಿಸಿತು ಅನ್ನೋದನ್ನು ಅವರ ಮಗ ಹಾಗೂ ಮಾಜಿ ಕೇಂದ್ರ ಸಚಿವ ಅನಿಲ್ ಕುಮಾರ್ ಶಾಸ್ತ್ರಿ ಒಮ್ಮೆ ಹೇಳಿಕೊಂಡಿದ್ದರು.


ಕುಟುಂಬದ ಒತ್ತಾಯದ ನಂತರ ಫಿಯೆಟ್ ಕಾರಿನ ಬೆಲೆ ಎಷ್ಟು ಎಂದು ತಿಳಿಯಲು ಮಾಜಿ ಪ್ರಧಾನಿ ತಮ್ಮ ಕಾರ್ಯದರ್ಶಿಯನ್ನು ಕೇಳಿದರಂತೆ. ಆ ಕಾಲದಲ್ಲಿ ಆ ಕಾರಿನ ಬೆಲೆ 12000 ರೂಪಾಯಿ. ಆದರೆ ಶಾಸ್ತ್ರಿ ಅವರ ಬ್ಯಾಂಕ್‌ ಖಾತೆಯಲ್ಲಿದ್ದುದು ಕೇವಲ 7000 ರೂಪಾಯಿ.


ಇದನ್ನೂ ಓದಿ: Mangalyaan: ಮಂಗಳಯಾನ ನೌಕೆಯ ಬ್ಯಾಟರಿ ಖಾಲಿ; ಇದು ಗ್ರಹಣದ ಎಫೆಕ್ಟ್​ ಅಂತೆ!


ಆನಂತರ ಶಾಸ್ತ್ರಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ರೂ 5000 ಸಾಲಕ್ಕೆ ಅರ್ಜಿ ಸಲ್ಲಿಸ್ತಾರೆ. ಅದನ್ನು ತಕ್ಷಣವೇ ಮಂಜೂರು ಮಾಡಲಾಗುತ್ತೆ. ಈ ವೇಳೆ ಮಾಜಿ ಪ್ರಧಾನಿಯವರು ಸಾಲ ಮಂಜೂರು ಮಾಡಿದ ಅಧಿಕಾರಿಗೆ ಕರೆ ಮಾಡಿ, ಇತರ ಅರ್ಜಿದಾರರಲ್ಲೂ ಅದೇ ರೀತಿ ಮಾಡಿದ್ದಾರಾ ಎಂದು ವಿಚಾರಿಸಿದ್ದರು ಎಂಬುದನ್ನು ಶಾಸ್ತ್ರಿ ಅವರ ಪುತ್ರ ನೆನಪಿಸಿಕೊಳ್ಳುತ್ತಾರೆ.


1966 ರಲ್ಲಿ ಶಾಸ್ತ್ರಿಜಿ ನಿಧನ
ಆದರೆ ಶಾಸ್ತ್ರಿ ಅವರು ತಮ್ಮ ಸಾಲವನ್ನು ಮರುಪಾವತಿ ಮಾಡುವ ಮೊದಲೇ ತಾಷ್ಕೆಂಟಿನಲ್ಲಿ ನಿಧನರಾಗ್ತಾರೆ. ನಂತರ ಕಾರ್‌ ಗಾಗಿ ಮಾಡಿದ ಉಳಿದಂತಹ ಸಾಲವನ್ನು ಶಾಸ್ತ್ರಿಜಿ ಅವರ ಪತ್ನಿ ಲಲಿತಾ ಶಾಸ್ತ್ರಿ ಕುಟುಂಬ ಪಿಂಚಣಿಯಿಂದ ಮರುಪಾವತಿಸಿದರಂತೆ.


ಅಂದಹಾಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1965 ರ ಇಂಡೋ-ಪಾಕ್ ಯುದ್ಧವನ್ನು ಕೊನೆಗೊಳಿಸಿದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜನವರಿ 1966 ರಲ್ಲಿ ತಾಷ್ಕೆಂಟ್‌ನಲ್ಲಿ ನಿಧನರಾದರು.


ಒಟ್ಟಾರೆ, ಸಾವಿರಾರು ಕೋಟಿ ಸಾಲ ಮಾಡಿ, ಬ್ಯಾಂಕಿಗೆ, ದೇಶಕ್ಕೆ ವಂಚಿಸಿ ಪರಾರಿಯಾಗುವ ಜನರನ್ನು ನಾವಿಂದು ನೋಡ್ತೇವೆ. ಆದರೆ ಪ್ರಾಮಾಣಿಕರಾಗಿದ್ದು ದೇಶಕ್ಕೇ ಮಾದರಿಯಾದ ಬಹಳಷ್ಟು ಜನರು ನಮ್ಮ ನಡುವೆಯೇ ಇದ್ದಾರೆ.


ಇದನ್ನೂ ಓದಿ: Fake Medicines Check: ನಕಲಿ ಔಷಧಿ ಕಂಡುಹಿಡಿಯೋಕೆ ಕ್ಯೂಆರ್ ಕೋಡ್! ಇಲ್ಲಿದೆ ಆ ಟ್ರಿಕ್


ಅಧಿಕಾರವಿದ್ದಾಗಲೂ ಅದನ್ನು ದುರುಪಯೋಗ ಪಡಿಸಿಕೊಳ್ಳದೇ ನ್ಯಾಯಯುತವಾಗಿ ಬದುಕಿದ ಕೆಲವೇ ವ್ಯಕ್ತಿಗಳಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ಕೂಡ ಒಬ್ಬರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಂದಿನ ಭ್ರಷ್ಟಾಚಾರದ ದಿನದಲ್ಲಿ ಶಾಸ್ತ್ರಿಜಿ ಯಂಥವರು ಸಿಗುವುದು ವಿರಳ.

Published by:ಗುರುಗಣೇಶ ಡಬ್ಗುಳಿ
First published: