PM Kisan: ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಇನ್ನೂ ಖಾತೆಗೆ ಬಂದಿಲ್ವಾ?; ಹಾಗಾದ್ರೆ ಈ ರೀತಿ ಮಾಡಿ

ಪಿಎಂ ಕಿಸಾನ್ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ರೈತ ಕುಟುಂಬವು ಸರ್ಕಾರದಿಂದ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಪಡೆಯಲು ಅರ್ಹರಾಗಿರುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ದೇಶದ ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರ್ಕಾರವು 2018 ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು (PM Kisan Scheme) ಶುರು ಮಾಡಿದ್ದು, ನೀವು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ನಿಮ್ಮ 10ನೇ ಕಂತಿನ ಹಣವನ್ನು ಪಡೆಯಲು ನಿಮ್ಮ ಪಿಎಂ ಕಿಸಾನ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಈ ಬಾರಿ ತಪ್ಪದೇ ಲಿಂಕ್ ಮಾಡಲೇಬೇಕು.

  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯು ಸರ್ಕಾರದ ಬೆಂಬಲಿತ ಅನೇಕ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದ್ದು, ಹಣವನ್ನು ಸ್ವೀಕರಿಸಲು ನಿಮ್ಮ ಆಧಾರ್ ಕಾರ್ಡ್ (Aadhar Card) ಅನ್ನು ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಆರ್ಥಿಕ ಬೆಂಬಲ ಅಗತ್ಯವಿರುವ ಅಂತಹ ರೈತ ಕುಟುಂಬಗಳಿಗೆ ಪಿಂಚಣಿ ಒದಗಿಸಲು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಡಿಸೆಂಬರ್ 2018 ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಯಿತು.

  ರೈತ ಕುಟುಂಬಗಳ ಕಲ್ಯಾಣಕ್ಕಾಗಿ ಬಂದ ಯೋಜನೆ

  ಈ ಯೋಜನೆಯು ಸಂಪೂರ್ಣವಾಗಿ ಸರ್ಕಾರದ ಬೆಂಬಲಿತವಾಗಿದೆ ಮತ್ತು ವ್ಯವಸಾಯದ ಭೂಮಿ ಹೊಂದಿರುವ ಎಲ್ಲಾ ರೈತರ ಕುಟುಂಬಗಳಿಗೆ ಇದು ಅನ್ವಯಿಸುತ್ತದೆ. ಆರಂಭದಲ್ಲಿ ಇದು ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಉದ್ದೇಶಿಸಲಾಗಿತ್ತು.

  ಪಿಎಂ ಕಿಸಾನ್ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ರೈತ ಕುಟುಂಬವು ಸರ್ಕಾರದಿಂದ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಪಡೆಯಲು ಅರ್ಹರಾಗಿರುತ್ತಾರೆ. ಇದನ್ನು ವರ್ಷವಿಡೀ ಮೂರು ತ್ರೈಮಾಸಿಕ ಕಂತುಗಳ ಅವಧಿಯಲ್ಲಿ ರೈತ ಕುಟುಂಬದವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.

  ಆಧಾರ್​ ಕಾರ್ಡ್​​ ಲಿಂಕ್​ ಮಾಡುವುದು ಕಡ್ಡಾಯ

  ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು, ರೈತರು ತಮ್ಮ ಪಿಎಂ ಕಿಸಾನ್ ಖಾತೆಯನ್ನು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕು. ಪ್ರತಿ ವರ್ಷ ಹಣವನ್ನು ಸ್ವೀಕರಿಸಲು ಇದು ಮಾಡಬೇಕಾದ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ. ತಪ್ಪು ಆಧಾರ್ ವಿವರಗಳನ್ನು ಒದಗಿಸಿದರೆ, ರೈತ ಕುಟುಂಬಕ್ಕೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

  ಆಧಾರ್ ಅಥವಾ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ಎಂಬುದು ಭಾರತೀಯ ಪ್ರಜೆಗೆ ಸರ್ಕಾರವು ನೀಡುವ 12 ಅಂಕಿಗಳ ಗುರುತಿನ ಸಂಖ್ಯೆಯಾಗಿದ್ದು, ಭಾರತೀಯರಿಗಾಗಿ ಯುಐಡಿಎಐ ಹೊರಡಿಸಿದ ಆಧಾರ್, ಹಲವಾರು ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳನ್ನು ನಿರ್ವಹಿಸಲು ತುಂಬಾನೇ ಮಹತ್ವದ್ದಾಗಿದೆ ಎಂದು ಹೇಳಬಹುದು.

  ಇದನ್ನು ಓದಿ: ದಕ್ಷಿಣ ಆಫ್ರಿಕಾ ವೈರಸ್​ಗೆ WHO 'ಓಮಿಕ್ರಾನ್'​ ಎಂದು ಹೆಸರಿಟ್ಟಿದ್ದು ಈ ಕಾರಣಕ್ಕೆ!

  ವಾರ್ಷಿಕ 6 ಸಾವಿರ ಲಾಭ

  ಆಧಾರ್ ನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಇಲಾಖೆ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ತನ್ನ ಪಿಎಂ ಕಿಸಾನ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ರೈತನಿಗೆ ತುಂಬಾ ಅತ್ಯಗತ್ಯವಾಗಿದೆ. ಆಗ ಮಾತ್ರ, ರೈತ ಕುಟುಂಬವು ಯೋಜನೆಯಡಿಯಲ್ಲಿ ವಾರ್ಷಿಕವಾಗಿ 6,000 ರೂಪಾಯಿಗಳನ್ನು ಪಡೆಯಲು ಸಾಧ್ಯವಾಗುತ್ತದೆ.

  ಇದನ್ನು ಓದಿ: ಟ್ರ್ಯಾಕ್ಟರ್ ರ್ಯಾಲಿ ಮೂಲಕ ಸಂಸತ್ ಮುತ್ತಿಗೆ ಕೈಬಿಟ್ಟ ರೈತರು

  ನಿಮ್ಮ ಆಧಾರ್ ಅನ್ನು ಪಿಎಂ ಕಿಸಾನ್ ಖಾತೆಯೊಂದಿಗೆ ಲಿಂಕ್ ಮಾಡುವುದು ಹೇಗೆ?

  1. ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಶಾಖೆಗೆ ಹೋಗಿ.

  2. ಬ್ಯಾಂಕ್ ಅಧಿಕಾರಿಯ ಸಮ್ಮುಖದಲ್ಲಿ ಆಧಾರ್ ಕಾರ್ಡ್ ನ ಫೋಟೋ ಪ್ರತಿಗೆ ನಿಮ್ಮ ಸಹಿಯನ್ನು ಹಾಕಿ. ನಿಮ್ಮ ಮೂಲ ಆಧಾರ್ ಕಾರ್ಡ್ ನಲ್ಲಿ ಸಹಿ ಮಾಡಬೇಡಿ ಮತ್ತು ಅದನ್ನು ನಿಮ್ಮೊಂದಿಗೆ ತರಲುಬೇಡಿ.

  3. ನಿಮ್ಮ ಆಧಾರ್ ಅನ್ನು ಅವರು ಪರಿಶೀಲಿಸಿದ ನಂತರ ನಿಮ್ಮ ಬ್ಯಾಂಕ್ ನಿಂದ ಆನ್‌ಲೈನ್ ಸೀಡಿಂಗ್ ಮಾಡಲಾಗುತ್ತದೆ.

  4. ಇದರ ನಂತರ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಿಮ್ಮ ಖಾತೆಯಲ್ಲಿ ಭರ್ತಿ ಮಾಡಲಾಗುತ್ತದೆ.

  5. ಪರಿಶೀಲನೆಯ ನಂತರ, ನೀವು ಅದನ್ನು ದೃಢೀಕರಿಸುವ ಎಸ್ಎಂಎಸ್ ಅನ್ನು ಸ್ವೀಕರಿಸುತ್ತೀರಿ.
  Published by:Seema R
  First published: