PM Kisan Samman Nidhi: ಈ ದಾಖಲೆಗಳನ್ನು ಇಂದೇ ಕೊಡಿ, ಕೇಂದ್ರ ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ!

PM Kisan Samman Nidhi: ಹೊಸ ನೋಂದಣಿ (ಪಡಿತರ ಕಾರ್ಡ್ ಕಡ್ಡಾಯ) ಮಾಡುವಾಗ ಪಡಿತರ ಚೀಟಿ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಇದಲ್ಲದೆ, ದಾಖಲೆಯ ಸಾಫ್ಟ್ ಕಾಪಿಯನ್ನು ತಯಾರಿಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಪಿಎಂ ಕಿಸಾನ್‌ನ  ಯೋಜನೆಯ ( PM Kisan ) ಫಲಾನುಭವಿಯಾಗಿದ್ದರೆ, ಇದು ನಿಮಗೆ ತುಂಬಾ ಉಪಯೋಗಕರವಾದ ಸುದ್ದಿಯಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi:) ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ನಡೆಯುವ ವಂಚನೆಗಳಿಗೆ ಸರ್ಕಾರವು(Government) ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿದೆ. ಹೌದು, ಇನ್ನು ರೈತರು ಪಡಿತರ ಚೀಟಿಯನ್ನು(ration Card) ಇತರೆ ದಾಖಲೆಗಳೊಂದಿಗೆ ನೀಡಬೇಕು. ಇಲ್ಲದೇ ಇದ್ದರೆ ಕಂತು ಸಿಗುವುದಿಲ್ಲ.  ಪಡಿತರ ಚೀಟಿ ಸಂಖ್ಯೆ ಬಂದ ನಂತರವೇ ಪತಿ ಅಥವಾ ಪತ್ನಿ ಅಥವಾ ಆ ಕುಟುಂಬದ ಯಾವುದೇ ಒಬ್ಬ ಸದಸ್ಯರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಯೋಜನೆಯಡಿಯಲ್ಲಿ, ಹೊಸ ನೋಂದಣಿ (ಪಡಿತರ ಕಾರ್ಡ್ ಕಡ್ಡಾಯ) ಮಾಡುವಾಗ ಪಡಿತರ ಚೀಟಿ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಇದಲ್ಲದೆ, ದಾಖಲೆಯ ಸಾಫ್ಟ್ ಕಾಪಿಯನ್ನು ತಯಾರಿಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಈಗ ಯಾವ ದಾಖಲೆಗಳನ್ನು ನೀಡಬೇಕು?

ಪಿಎಂ ಕಿಸಾನ್ ಯೋಜನೆಯಡಿ ನೀವು ಮೊದಲ ಬಾರಿಗೆ ನೋಂದಾಯಿಸಿದರೆ, ಅರ್ಜಿದಾರರು ಪಡಿತರ ಚೀಟಿ ಸಂಖ್ಯೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಇದಲ್ಲದೆ, PDF ಅನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ. ಈಗ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಡಿಕ್ಲರೇಶನ್‌ನ ಹಾರ್ಡ್ ಕಾಪಿಗಳನ್ನು ಕಡ್ಡಾಯವಾಗಿ ಸಲ್ಲಿಸುವುದನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: Bitcoin ಹಾಗೂ ಕ್ರಿಪ್ಟೋ ಕರೆನ್ಸಿಯಿಂದ ಯುವಕರು ಹಾಳಾಗುವ ಸಾಧ್ಯತೆ ; ಪ್ರಧಾನಿ ಮೋದಿ ಕಳವಳ

ಈಗ ದಾಖಲೆಗಳ ಪಿಡಿಎಫ್ ಫೈಲ್ ಅನ್ನು ರಚಿಸಬೇಕು ಮತ್ತು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದು ಪಿಎಂ ಕಿಸಾನ್ ಯೋಜನೆಯಲ್ಲಿನ ವಂಚನೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ನೋಂದಣಿ ಮೊದಲಿಗಿಂತ ಸುಲಭವಾಗಿರುತ್ತದೆ.

ಯಾವ ದಿನಾಂಕದಂದು ಕಂತು ಬರುತ್ತದೆ

ಪಿಎಂ ಕಿಸಾನ್ (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) ಯೋಜನೆಯಡಿ 10 ನೇ ಕಂತು ಬಿಡುಗಡೆ ಮಾಡಲು ಸರ್ಕಾರ ದಿನಾಂಕವನ್ನು ನಿಗದಿಪಡಿಸಿದೆ. ಕಂತು ವರ್ಗಾಯಿಸಲು ಎಲ್ಲ ಅಗತ್ಯ ವ್ಯವಸ್ಥೆ ಮಾಡಲಾಗಿದೆ. 10ನೇ ಕಂತಿನ ಲಾಭ ಪಡೆಯಲು ರೈತರು ಈ ಯೋಜನೆಯಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತನ್ನು ಡಿಸೆಂಬರ್ 15, 2021 ರೊಳಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಕಳೆದ ವರ್ಷ 25 ಡಿಸೆಂಬರ್ 2020 ರಂದು ಸರ್ಕಾರ ರೈತರಿಗೆ ಹಣವನ್ನು ವರ್ಗಾಯಿಸಿತ್ತು.

 ರೈತರಿಗೆ ವಾರ್ಷಿಕ 6000 ರೂ ನೀಡಲಾಗುತ್ತದೆ

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದೇಶಾದ್ಯಂತ ಕೋಟ್ಯಂತರ ರೈತರಿಗೆ ವಾರ್ಷಿಕ 6 ಸಾವಿರ ರೂ ನೀಡಲಾಗುತ್ತದೆ. ಸರ್ಕಾರ ಈ ಮೊತ್ತವನ್ನು ಆನ್‌ಲೈನ್‌ನಲ್ಲಿ ರೈತರ ಖಾತೆಗೆ ವರ್ಗಾಯಿಸುತ್ತದೆ.

ಇದನ್ನೂ ಓದಿ: ಬೋಯಿಂಗ್‌ನ 72 ಜೆಟ್‌ಗಳ 9 ಬಿಲಿಯನ್ ಡಾಲರ್‌ ಆರ್ಡರ್‌ಗೆ ಸಹಿ ಹಾಕಿದ ಆಕಾಶ ಏರ್

ನೀವೂ ಸಹ ರೈತರಾಗಿದ್ದರೂ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು, ಇದರಿಂದ ನೀವು ಸರ್ಕಾರದ ಯೋಜನೆಯ ಲಾಭವನ್ನು ಪಡೆಯಬಹುದು.
Published by:Sandhya M
First published: