ಜನಸಾಮಾನ್ಯರನ್ನು ತಾಲಿಬಾನ್​ ಉಗ್ರರು ಎಂದು ಹೇಗೆ ಕರೆಯುವುದು: ಪಾಕಿಸ್ತಾನ ಪ್ರಧಾನಿ ಇಮ್ರಾನ್​​ ಖಾನ್​

ನೆರೆಹೊರೆಯವರು"ಉಗ್ರರಿಗೆ ವಾಯು ಸೇನೆಯಿಂದ ಬೆಂಬಲ"ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳ ಬೆಳವಣಿಗೆಗೆ ನೆರೆಹೊರೆಯವರು ಸಹಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

 • Share this:
  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಉಗ್ರರನ್ನು "ಸಾಮಾನ್ಯ ನಾಗರಿಕರು" ಎಂದು ಕರೆದಿದ್ದಾರೆ, ಅವರುಗಳು ಯಾರೂ ಸಹ ಮಿಲಿಟರಿಗೆ ಸೇರಿದವರಲ್ಲ, ಅಲ್ಲದೇ ಗಡಿಯಲ್ಲಿ ಮೂರು ಮಿಲಿಯನ್ ಅಫಘಾನ್ ನಿರಾಶ್ರಿತರು ಬೀಡು ಬಿಟ್ಟಿರುವಾಗ ದೇಶವು ಅವರ ಮೇಲೆ ಹೇಗೆ ನಾವು ಯುದ್ದ ಸಾರುವುದು ಹಾಗೂ ಬೇಟೆಯಾಡುವುದು ಎಂದು ಹೇಳಿದ್ದಾರೆ.

  ಮಂಗಳವಾರ ರಾತ್ರಿ  ಪಿಬಿಎಸ್ ನ್ಯೂಸ್‌ ಅವರ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್​ ಖಾನ್ ಪಾಕಿಸ್ತಾನದ ಗಡಿಯಲ್ಲಿ ಮೂರು ಮಿಲಿಯನ್ ಅಘಾನ್ ನಿರಾಶ್ರಿತರಿದ್ದು ಅವರ ಆತಿಥ್ಯವನ್ನು ನಾವು ವಹಿಸಿಕೊಂಡಿದ್ದೇವೆ, ಅದರಲ್ಲಿ ಹೆಚ್ಚಿನವರು ಪಶ್ತೂನ್‌ಗಳು, ತಾಲಿಬಾನ್ ಹೋರಾಟಗಾರರೂ ಸಹ ಇದೇ ಜನಾಂಗಕ್ಕೆ ಸೇರಿದವರು ಎಂದು ಹೇಳಿದ್ದಾರೆ.

  “ಈಗ, 500,000 ಜನರ ಮತ್ತು 100,000 ಜನರ ಶಿಬಿರಗಳಿವೆ. ಈ ಶಿಬಿರಗಳಲ್ಲಿ ಇರುವವರನ್ನ ಹೇಗೆ ನಾವು ಭಯೋತ್ಪಾದಕರು ಎಂದು ಕರೆಯುವುದು. ಅವರು ಸಾಮಾನ್ಯ ನಾಗರಿಕರು. ಪಾಕಿಸ್ತಾನ ಈ ಜನರನ್ನು ಹೇಗೆ ಬೇಟೆಯಾಡುವುದು ನೀವೇ ಹೇಳಿ? ನೀವು ಅವರನ್ನು ಕಾಡು ಮೃಗಗಳು ಎಂದು ಹೇಗೆ ಕರೆಯಬಹುದು? " ಹೇಳಿ ಎಂದು ಇಮ್ರಾನ್​​ ತಮ್ಮ ವಾದ ಮಂಡಿಸಿದರು.

  ಪಾಕಿಸ್ತಾನದಲ್ಲಿ ಅತ್ಯಂತ ಅಪಾಯಕಾರಿ ತಾಲಿಬಾನ್ ಉಗ್ರರಿಗೆ ಸುರಕ್ಷಿತ ತಾಣಗಳ ಎಂದು ಹೇಳಲಾಗುತ್ತಿದೆ ಇದರ ಬಗ್ಗೆ ಪ್ರಶ್ನೆ ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್​: “ಈ ಸುರಕ್ಷಿತ ತಾಣಗಳು ಎಲ್ಲಿವೆ ಹೇಳಿ? ಪಾಕಿಸ್ತಾನದಲ್ಲಿ ಮೂರು ದಶಲಕ್ಷ ನಿರಾಶ್ರಿತರು ಇದ್ದಾರೆ, ಅವರು ಮತ್ತು ತಾಲಿಬಾನ್‌ ಉಗ್ರರು ಒಂದೇ ಜನಾಂಗದವರು’’ ಹಾಗಾದರೆ ಇವರೆಲ್ಲರೂ ಉಗ್ರರೇ ಎಂದು ಹೇಳಬಹುದೇ? ಎಂದು ಮರು ಪ್ರಶ್ನಿಸಿದ್ದಾರೆ.

  ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ತಾಲಿಬಾನ್​ ಉಗ್ರರಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಸಹಾಯ ಮಾಡಿದೆ ಎಂದು ದೀರ್ಘಕಾಲದಿಂದ ಆರೋಪಿಸುತ್ತಾ ಬರಲಾಗುತ್ತಿದ, ಆದರೆ ಇಮ್ರಾನ್ ಖಾನ್ ಈ ಎಲ್ಲಾ ಆರೋಪಗಳನ್ನು "ಅತ್ಯಂತ ಅನ್ಯಾಯ ಹಾಗೂ ಸುಳ್ಳು" ಎಂದು ತಳ್ಳಿಹಾಕಿದರು.

  ಪಾಕಿಸ್ತಾನವು ತನ್ನ ಗಡಿಯಿಂದ "ತಾಲಿಬಾನ್ ಅನ್ನು ನಾಶ ಮಾಡುವ ಯಾವುದೇ ಕ್ರಮವನ್ನು" ಪಾಕಿಸ್ತಾನ ವಾಯುಪಡೆಯು ಎದುರಿಸಲಿದೆ ಮತ್ತು ಉಗ್ರರನ್ನು ಹಿಮ್ಮೆಟ್ಟಿಸುತ್ತದೆ "ಎಂದು ಕಾಬೂಲ್​ಗೆ​" ಅಧಿಕೃತ ಎಚ್ಚರಿಕೆ "ನೀಡಿದೆ ಎಂದು ಇಮ್ರಾನ್​ ಖಾನ್​ ಹೇಳಿದರೆ.

  ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ, ನೆರೆಹೊರೆಯವರು"ಉಗ್ರರಿಗೆ ವಾಯು ಸೇನೆಯಿಂದ ಬೆಂಬಲ"ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳ ಬೆಳವಣಿಗೆಗೆ ನೆರೆಹೊರೆಯವರು ಸಹಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  "ತಾಲಿಬಾನ್ ಅನ್ನು ಸ್ಪಿನ್ ಬೋಲ್ಡಾಕ್ ಪ್ರದೇಶದಿಂದ ಹಿಮ್ಮಟಿಸುವ ಯಾವುದೇ ಕ್ರಮವನ್ನು ಪಾಕಿಸ್ತಾನ ವಾಯುಪಡೆಯು ಮಾಡಲಿದೆ ಮತ್ತು ಹಿಮ್ಮೆಟ್ಟಿಸುತ್ತದೆ ಎಂದು ಪಾಕಿಸ್ತಾನ ವಾಯುಪಡೆಯು ಅಫಘಾನ್ ಸೇನೆ ಮತ್ತು ವಾಯುಪಡೆಗೆ ಅಧಿಕೃತ ಎಚ್ಚರಿಕೆ ನೀಡಿದೆ. ಆದರೆ ಪಾಕ್ ವಾಯುಪಡೆಯು ಈಗ ಕೆಲವು ಪ್ರದೇಶಗಳಲ್ಲಿ ತಾಲಿಬಾನ್​ ಉಗ್ರರಿಗೆ ವಾಯುಸೇನೆಯಿಂದ ಬೆಂಬಲವನ್ನು ಒದಗಿಸುತ್ತಿದೆ "ಎಂದು ಸಲೇಹ್ ಟ್ವೀಟ್ ಮಾಡಿದ್ದಾರೆ.

  ಇದನ್ನೂ ಓದಿ: ರಾಜೀನಾಮೆ ಬಳಿಕವೂ ಪವರ್ ಸೆಂಟರ್ ಆದ ಬಿಎಸ್​ವೈ; ರಾಜಾಹುಲಿ ಸುತ್ತ ಮಂತ್ರಿ ಆಕಾಂಕ್ಷಿಗಳ ಪ್ರದಕ್ಷಿಣೆ

  ನನ್ನ ಈ ಆರೋಪದ ಬಗ್ಗೆ ಯಾರಿಗಾದರೂ ಸಂಶವಿದ್ದರೆ ನಾನು ಸಾಕ್ಷಿಗಳನ್ನು ನೀಡುತ್ತೇನೆ.  ನಮ್ಮ ದೇಶದ ವಿಮಾನಗಳು ಸ್ಪಿನ್ ಬೋಲ್ಡಾಕ್​ನಿಂದ 10 ಕಿಲೋಮೀಟರ್ ದೂರದಲ್ಲಿವೆ, ನಾವು ಕೂಡ ಎಲ್ಲಾ ರೀತಿಯಲ್ಲಿ ಸನ್ನದ್ದರಾಗಿದ್ದೇವೆ ಎಂದು "ದೇಶದ ಉಪಾಧ್ಯಕ್ಷ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: