PM Cares ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವೇ ಇಲ್ಲ; ಕೇಂದ್ರ ಸರ್ಕಾರ

ಪಿಎಂ ಕೇರ್ಸ್‌ ನಿಧಿಯು ಒಂದು ಚಾರಿಟೇಬಲ್ ಟ್ರಸ್ಟ್‌ ಆಗಿದ್ದು, ಅದು ಭಾರತದ ಸಂವಿಧಾನದ ಅಡಿಯಲ್ಲೋ ಅಥವಾ ಸಂಸತ್ತಿನಿಂದಲೋ ಅಥವಾ ಯಾವುದೇ ರಾಜ್ಯದ ಶಾಸಕಾಂಗದಿಂದ ರಚಿಸಲ್ಪಟ್ಟದ್ದಲ್ಲ ಎಂದು ಪಿಎಂ ಸಚಿವಾಲಯ ದೆಹಲಿ ಹೈಕೋರ್ಟ್​ಗೆ ತಿಳಿಸಿದೆ.

ಪಿಎಂ ಕೇರ್ಸ್.

ಪಿಎಂ ಕೇರ್ಸ್.

 • Share this:
  ನವ ದೆಹಲಿ (ಸೆಪ್ಟೆಂಬರ್​ 24); ಕಳೆದ ಹಲವು ವರ್ಷಗಳಿಂದ ಪಿ ಎಂ ಕೇರ್ಸ್​ (PM Cares) ನಿಧಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೊರೋನಾ ಸಂದರ್ಭದಲ್ಲಿ ಜನ ಪಿಎಂ ಕೇರ್ಸ್​ಗೆ ಹಣ ದೇಣಿಗೆ ನೀಡುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಮನವಿ ಮಾಡಿದ್ದರು. ಅದರಂತೆ ಜನ ಕೋಟ್ಯಾಂತರ ಹಣ ಇಲ್ಲಿಗೆ ಜಮಾ ಮಾಡಿದ್ದರು. ಆದರೆ, ಪಿಎಂ ಕೇರ್ಸ್​ಗೆ ಜಮಾ ಆದ ಹಣ ಎಷ್ಟು? ಸರ್ಕಾರ ಈ ಪೈಕಿ ಖರ್ಚು ಮಾಡಿದ ಹಣ ಎಷ್ಟು? ಎಂಬ ಲೆಕ್ಕವನ್ನು ಮೋದಿ ಸರ್ಕಾರ ಈವರೆಗೆ ಸಾರ್ವಜನಿಕ ಗೊಳಿಸಿಲ್ಲ. ಹಲವರು ಆರ್​ಟಿಐ (RTI) ಅಡಿಯಲ್ಲಿ ಪ್ರಶ್ನೆ ಮಾಡಿದ್ದರೂ ಸಹ ಕೇಂದ್ರ ಸರ್ಕಾರ ಜಗ್ಗುತ್ತಿಲ್ಲ. ಆದರೆ, ಗುರುವಾರ  ಈ ಬಗೆಗಿನ ದೆಹಲಿ ಹೈಕೋರ್ಟ್​ (Delhi High Court) ಪ್ರಶ್ನೆಗೆ ಉತ್ತರ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, "ಪಿಎಂ ಕೇರ್ಸ್‌ ನಿಧಿಯು ಭಾರತ ಸರ್ಕಾರದ ನಿಧಿಯಲ್ಲ, ಅದನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ತರಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.

  ದೆಹಲಿ ಹೈಕೋರ್ಟ್​ಗೆ ಪ್ರಧಾನಿ ಸಚಿವಾಲಯದ ಅಧೀನ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, "ಪಿಎಂ ಕೇರ್ಸ್‌ ನಿಧಿಯು ಒಂದು ಚಾರಿಟೇಬಲ್ ಟ್ರಸ್ಟ್‌ ಆಗಿದ್ದು, ಅದು ಭಾರತದ ಸಂವಿಧಾನದ ಅಡಿಯಲ್ಲೋ ಅಥವಾ ಸಂಸತ್ತಿನಿಂದಲೋ ಅಥವಾ ಯಾವುದೇ ರಾಜ್ಯದ ಶಾಸಕಾಂಗದಿಂದ ರಚಿಸಲ್ಪಟ್ಟದ್ದಲ್ಲ" ಎಂದು ತಿಳಿಸಲಾಗಿದೆ.

  ತಾನು ಒಕ್ಕೂಟ ಸರ್ಕಾರದ ಅಧಿಕಾರಿಯಾಗಿದ್ದರೂ ಗೌರವಾರ್ಥವಾಗಿ ಪಿಎಂ ಕೇರ್ಸ್‌ ಟ್ರಸ್ಟ್‌ನಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ಹೇಳಿದ್ದಾರೆ.

  "ಪಿಎಂ ಕೇರ್ಸ್‌ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತದೆ. ಅದರ ಹಣವನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸಿದ್ಧಪಡಿಸಿದ ಸಮಿತಿಯಿಂದ ಚಾರ್ಟರ್ಡ್ ಅಕೌಂಟೆಂಟ್‌‌ ಮೂಲಕ ಲೆಕ್ಕಪರಿಶೋಧನೆ ಮಾಡಲಾಗುತ್ತದೆ. ಪಾರದರ್ಶಕ ತೆಯನ್ನು ಖಚಿತಪಡಿಸಿಕೊಳ್ಳಲು, ಆಡಿಟ್ ಮಾಡಿದ ವರದಿಯನ್ನು ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಟ್ರಸ್ಟ್ ಸ್ವೀಕರಿಸಿದ ನಿಧಿಯ ಬಳಕೆಯ ವಿವರಗಳನ್ನು ಸೇರಿಸಲಾಗಿದೆ" ಎಂದು ಅಧೀನ ಕಾರ್ಯದರ್ಶಿ ಶ್ರೀವಾಸ್ತವ ಅವರು ಹೇಳಿದ್ದಾರೆ.

  ಆರ್‌ಟಿಐ ಅಡಿಯಲ್ಲಿ ಪಿಎಂ ಕೇರ್ಸ್ ಅನ್ನು "ಸಾರ್ವಜನಿಕ ಪ್ರಾಧಿಕಾರ" ಎಂದು ಘೋಷಿ ಸಲು ಕೋರಿ ಹೈಕೋರ್ಟ್‌ನಲ್ಲಿ ಸಮ್ಯಕ್ ಗಂಗ್ವಾಲ್ ಎಂಬವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಒಕ್ಕೂಟ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ.

  ಇದನ್ನೂ ಓದಿ: Petrol Price| ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಳಿಕೆಯಾಯ್ತು ಪೆಟ್ರೋಲ್ ಬೆಲೆ; ಹಾವೇರಿಯಲ್ಲಿ ಅತ್ಯಧಿಕ 98 ಪೈಸೆ ಇಳಿಕೆ!

  "PM CARES ಪಾರದರ್ಶಕತೆ ಮತ್ತು ಸಾರ್ವಜನಿಕ ಹಿತದ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಬೇರೆ ಚಾರಿಟಬಲ್ ಟ್ರಸ್ಟ್‌ಗಳಂತೆ ಸಾರ್ವಜನಿಕ ಹಿತಾಸಕ್ತಿಗಳನ್ನು ಹೊಂದಿದೆ. ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ತನ್ನ ಎಲ್ಲಾ ನಿರ್ಣಯಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಯಾವುದೇ ಆಕ್ಷೇಪವಿಲ್ಲ" ಎಂದು ಒಕ್ಕೂಟ ಸರ್ಕಾರವು ಅಫಿಡವಿಟ್‌ನಲ್ಲಿ ಹೆಚ್ಚುವರಿಯಾಗಿ ಹೇಳಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿ ಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: