ಪಕ್ಷ ಮರು ಸಂಘಟನೆಗೆ ನೀವು ಸಂಪೂರ್ಣ ಸ್ವತಂತ್ರರು; ರಾಹುಲ್​ಗೆ ಕಾಂಗ್ರೆಸ್​​ ಮುಖ್ಯಮಂತ್ರಿಗಳು ಕಿವಿಮಾತು

ಈ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ಛತ್ತೀಸ್‌ಗಢದ ಸಿಎಂ ಭೂಪೇಶ್ ಬಾಗೆಲ್ ಮತ್ತು ಪುದುಚೇರಿ ಸಿಎಂ ವಿ ನಾರಾಯಣಸಾಮಿ ಅವರು ಕೂಡ ಭಾಗವಹಿಸಿದ್ದರು.


Updated:July 2, 2019, 4:13 PM IST
ಪಕ್ಷ ಮರು ಸಂಘಟನೆಗೆ ನೀವು ಸಂಪೂರ್ಣ ಸ್ವತಂತ್ರರು; ರಾಹುಲ್​ಗೆ ಕಾಂಗ್ರೆಸ್​​ ಮುಖ್ಯಮಂತ್ರಿಗಳು ಕಿವಿಮಾತು
ರಾಹುಲ್​​ ಗಾಂಧಿ
  • Share this:
ನವದೆಹಲಿ(ಜುಲೈ.02): ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲು ಬಯಸುವುದಿಲ್ಲ ಎಂದ ರಾಹುಲ್ ಗಾಂಧಿ ರಾಜೀನಾಮೆಗೆ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿಯೂ ಪಕ್ಷದ ಹಿರಿಯ ನಾಯಕರು, ತನ್ನ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದ್ದಾರೆ. ಜತೆಗೆ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಸೂಕ್ತ ಅಭ್ಯರ್ಥಿಯಿಲ್ಲ. ಹೀಗಾಗಿ ಬದಲಾವಣೆ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ರಾಹುಲ್​​ ರಾಜೀನಾಮೆ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿಯಾಗಿದೆ.

ಈ ಮಧ್ಯೆ ಮುಂದಿನ ಕಾಂಗ್ರೆಸ್​​ ಅಧ್ಯಕ್ಷ ಯಾರಾಗಬೇಕು? ಎನ್ನುವುದು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ ರಾಹುಲ್​​. ಹಾಗೆಯೇ ಯಾರು ಬೇಕಾದರೂ ಪಕ್ಷದ ಅಧ್ಯಕ್ಷರು ಆಗಬಹುದು. ಈ ವಿಚಾರಕ್ಕೆ ನಾನು ತಲೆ ಹಾಕುವುದಿಲ್ಲ ಎನ್ನುವ ಮುಖೇನ ರಾಹುಲ್ ಕಾಂಗ್ರೆಸ್​​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ತಾವು ಸದ್ಯದಲ್ಲೇ ಅಧ್ಯಕ್ಷ ಸ್ಥಾನ ತ್ಯಜಿಸಲಿದ್ದಾರಾ? ಎಂಬ ಎಲ್ಲಾ ರೀತಿಯ ಲಕ್ಷಣಗಳು ಕೂಡ ಗೋಚರಿಸುತ್ತಿವೆ.

ಈ ಬೆನ್ನಲ್ಲೀಗ ಕಾಂಗ್ರೆಸ್​​ ಅಧಿಕಾರದಲ್ಲಿರುವ ಐದು ರಾಜ್ಯಗಳ ಮುಖ್ಯಮಂತ್ರಿಗಳು ರಾಹುಲ್ ಅವರನ್ನು ಭೇಟಿ ಮಾಡಿ, ಪಕ್ಷ ಮರು ಸಂಘಟಿಸಲು ನೀವು ಸ್ವತಂತ್ರರು ಎಂದಿದ್ಧಾರೆ. ಅಲ್ಲದೇ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಸುಮಲತಾ ಚೊಚ್ಚಲ ಭಾಷಣ; ಕನ್ನಡದಲ್ಲೇ ಕುಡಿಯುವ ನೀರು ಕೇಳಿದ ಮಂಡ್ಯದ ನೂತನ ಸಂಸದೆ!

ಕಾಂಗ್ರೆಸ್​​ ಅಧ್ಯಕ್ಷರ ಜೊತೆಗಿನ ಸಭೆ ಬಳಿಕ ಸುದ್ದಿಗಾರರ ಜೊತೆಗೆ ಮಾತಾಡಿರುವ ರಾಜಸ್ಥಾನ ಸಿಎಂ ಅಶೋಕ್​​ ಗೆಹ್ಲೋಟ್​ ಅವರು, ರಾಹುಲ್ ಗಾಂಧಿ ಅವರು ನಮ್ಮೊಂದಿಗೆ ಮುಕ್ತವಾಗಿ ಚರ್ಚಿಸಿದ್ದಾರೆ. ನಮ್ಮ ಅಭಿಪ್ರಾಯಗಳನ್ನು ಗಂಭೀರವಾಗಿ ಆಲಿಸಿದ್ದಾರೆ. ಪಕ್ಷದಲ್ಲಿ ನೀವು ಯಾರನ್ನೂ ಬೇಕಾದರೂ ಬದಲಿಸಬಹುದು. ಅದಕ್ಕೆ ನೀವು ಸಂಪೂರ್ಣ ಸ್ವತಂತ್ರರು ಎಂದು ಹೇಳಿದ್ದೇವೆ ಎಂದರು.

ಇನ್ನುಈ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ಛತ್ತೀಸ್‌ಗಢದ ಸಿಎಂ ಭೂಪೇಶ್ ಬಾಗೆಲ್ ಮತ್ತು ಪುದುಚೇರಿ ಸಿಎಂ ವಿ ನಾರಾಯಣಸಾಮಿ ಅವರು ಕೂಡ ಭಾಗವಹಿಸಿದ್ದರು.
---------------
First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ