Juhi Chawla: ಪ್ರಚಾರಕ್ಕಾಗಿ ಅರ್ಜಿ ಹಾಕಬೇಡಿ; 5ಜಿ ವಿರೋಧಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಜೂಹಿ ಚಾವ್ಲಾ ಅವರು ಪ್ರಕರಣದ ವಿಚಾರಣೆಯ ವರ್ಚುವಲ್ ಲಿಂಕ್ ಅನ್ನು ಮೂರು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಈ ಅರ್ಜಿ ಕೇವಲ ಪ್ರಚಾರ ತಂತ್ರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಜೂಹಿ ಚಾವ್ಲಾ.

ಜೂಹಿ ಚಾವ್ಲಾ.

 • Share this:
  ನವ ದೆಹಲಿ (ಜೂನ್ 04); ಬಾಲಿವುಡ್​ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಅವರು 5ಜಿ ವೈರ್​ಲೆಸ್​ ನೆಟ್​ವರ್ಕ್​ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ವಿಷಯ ಗೊತ್ತೇ ಇದೆ. 5 ಜಿ ತಂತ್ರಜ್ಞಾನದಿಂದಾಗಿ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಭೂಮಿಯ ಮೇಲಿರುವ ಸಸ್ಯ ಸಂಕುಲ ಇದರಿಂದ ಹೊರ ಸೂಸುವ ವಿಕಿರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ತಂತ್ರಜ್ಞಾನದಿಂದ ಅಪಾಯವೇ ಹೆಚ್ಚು ಎಂದು ಜೂಹಿ ಚಾವ್ಲಾ ಅವರು ದೆಹಲಿ ಹೈ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದರು. ಆದರೆ, ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, "ನಿಮ್ಮ ಪ್ರಚಾರಕ್ಕಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ, ಕಾನೂನು ಪ್ರಕ್ರಿಯೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ" ಎಂದು ಛೀಮಾರಿ ಹಾಕಿದೆ. ಅಲ್ಲದೆ, ಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 20 ಲಕ್ಷ ರೂಪಾಯಿಗಳನ್ನು ದಂಡ ವಿಧಿಸುವ ಮೂಲಕ ಬಾಲಿವುಡ್ ನಟಿಗೆ ಆಘಾತ ನೀಡಿದೆ.

  ಜೂಹಿ ಚಾವ್ಲಾ ಅವರು ಪ್ರಕರಣದ ವಿಚಾರಣೆಯ ವರ್ಚುವಲ್ ಲಿಂಕ್ ಅನ್ನು ಮೂರು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಈ ಅರ್ಜಿ ಕೇವಲ ಪ್ರಚಾರ ತಂತ್ರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

  ವಿಚಾರಣೆ ವೇಳೆ ಹಾಡು ಹಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ
  ಇನ್ನು ಇದೇ ವೇಳೆ ಈ ಹಿಂದಿನ ವಿಚಾರಣೆಯಲ್ಲಿ ಹಾಡು ಹಾಡಿದ್ದ ಜೂಹಿ ಚಾವ್ಲಾ ಅವರ ಅಭಿಮಾನಿಯ ವಿರುದ್ಧ ಕೆಂಡಾಮಂಡಲವಾದ ಪೀಠ ದೆಹಲಿ ಪೊಲೀಸರು ಆದಷ್ಟು ಬೇಗ ವಿಚಾರಣೆ ವೇಳೆ ಹಾಡು ಹಾಡಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ ಪಡಿಸಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಬೇಕು. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: