ಶಾಕಿಂಗ್ ನ್ಯೂಸ್​: ಭಾರತದಲ್ಲಿ ಒಂದು ವರ್ಷಕ್ಕೆ ಎಷ್ಟು ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತಿದೆ ಗೊತ್ತಾ?

ನಾವು ದಿನನಿತ್ಯ ಬಳಸುವ ಹಾಲು, ಮೊಸರಿನ ಪ್ಯಾಕೆಟ್​ನಿಂದ ಹಿಡಿದು ಬಾಚಣಿಗೆ, ಚಪ್ಪಲಿ, ಊಟ ಮಾಡುವ ಟಿಫನ್ ಬಾಕ್ಸ್​ವರೆಗೆ ಎಲ್ಲವೂ ಪ್ಲಾಸ್ಟಿಕ್​ಮಯವಾಗಿದೆ. ಇದರಿಂದ ಪರಿಸರಕ್ಕೆ ಯಾವೆಲ್ಲ ರೀತಿಯ ಹಾನಿಯಾಗುತ್ತಿದೆ ಎಂಬುದನ್ನು ಎಂದಾದರೂ ಯೋಚಿಸಿದ್ದೇವಾ?

Sushma Chakre | news18-kannada
Updated:August 30, 2019, 3:00 PM IST
ಶಾಕಿಂಗ್ ನ್ಯೂಸ್​: ಭಾರತದಲ್ಲಿ ಒಂದು ವರ್ಷಕ್ಕೆ ಎಷ್ಟು ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬಾಕ್ಸ್​, ಪಾತ್ರೆ, ಚೇರ್​ನಿಂದ ಹಿಡಿದು ಬ್ಯಾಗ್​, ಬಾಚಣಿಗೆವರೆಗೂ ದಿನನಿತ್ಯ ನಾವು ಉಪಯೋಗಿಸುವ ವಸ್ತುಗಳಲ್ಲಿ ಶೇ. 75ರಷ್ಟು ಪ್ಲಾಸ್ಟಿಕ್​ನದ್ದೇ ಆಗಿರುತ್ತವೆ. ಮಣ್ಣಿನೊಂದಿಗೆ ಸೇರಿ ದಶಕಗಳೇ ಕಳೆದರೂ ಕೊಳೆಯದ ಪ್ಲಾಸ್ಟಿಕ್​ ಮೇಲೆ ನಿಷೇಧ ಹೇರಿರುವ ಸರ್ಕಾರ ಪ್ಲಾಸ್ಟಿಕ್​ ಬ್ಯಾಗ್​, ಕವರ್​ಗಳನ್ನು ಬಳಸದಂತೆ ಆದೇಶಿಸಿದೆ. ನಾವು ದಿನನಿತ್ಯ ಉಪಯೋಗಿಸುವ ಪ್ಲಾಸ್ಟಿಕ್​ ವಸ್ತುಗಳನ್ನು ಬಳಸಿದ ನಂತರ ಕಸದ ತೊಟ್ಟಿಗೆ ಬಿಸಾಡುತ್ತೇವೆ. ಆದರೆ, ಇದರಿಂದ ಪರಿಸರಕ್ಕೆ ಪ್ರತಿನಿತ್ಯ ಎಷ್ಟು ಪ್ಲಾಸ್ಟಿಕ್ ಸೇರುತ್ತಿದೆ ಎಂಬುದು ನಿಮಗೆ ಗೊತ್ತಾ?

ಇತ್ತೀಚಿನ ಅಧ್ಯಯನದ ಪ್ರಕಾರ ಭಾರತದಲ್ಲಿ ಒಂದು ವರ್ಷಕ್ಕೆ 94 ಲಕ್ಷ ಟನ್ ಪ್ಲಾಸ್ಟಿಕ್​ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ಹಾಗೇ ಉಳಿಯುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ತ್ಯಾಜ್ಯದಲ್ಲಿ ಶೇ. 40ರಷ್ಟು ಭಾಗ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಶೇ. 43ರಷ್ಟು ಪ್ಲಾಸ್ಟಿಕ್ ಅನ್ನು ಪ್ಯಾಕೇಜಿಂಗ್​ಗೆ ಬಳಸಲಾಗುತ್ತದೆ. ಇವುಗಳನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲದ ಕಾರಣ ಹಾಗೇ ಬಿಸಾಡಲಾಗುತ್ತದೆ.

ಶೇ.90 ರಷ್ಟು ಭಾರತೀಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ..!

ಅನ್​ ಪ್ಲಾಸ್ಟಿಕ್ ಕಲೆಕ್ಟಿವ್​ (ಯುಪಿಸಿ) ನಡೆಸಿದ ಈ ಅಧ್ಯಯನದಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ವರದಿ ಮಾಡಲಾಗಿದೆ. ಜಗತ್ತಿನಲ್ಲಿ 1950ರಿಂದೀಚೆಗೆ 8.3 ಬಿಲಿಯನ್ ಟನ್ ಪ್ಲಾಸ್ಟಿಕ್​ ಉತ್ಪಾದನೆಯಾಗಿದೆ. ಅದರಲ್ಲಿ ಶೇ. 60ರಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ ಅಥವಾ ಮಣ್ಣಿನೊಳಗೆ ಸೇರಿಕೊಳ್ಳುತ್ತವೆ. ದಿನನಿತ್ಯ ಬಳಸುವ ಪ್ಲಾಸ್ಟಿಕ್ ವಸ್ತುಗಳಲ್ಲಿ ಬಹುಪಾಲು ಒಂದೇ ಬಾರಿ ಬಳಸುವಂಥದ್ದಾಗಿರುತ್ತದೆ. ಉಳಿದವು ಬಾಕ್ಸ್​, ಬಾಟಲ್, ಟಪ್ಪರ್​ವೇರ್ ರೀತಿಯ ಮರುಬಳಕೆಯ ಪ್ಲಾಸ್ಟಿಕ್​ ವಸ್ತುಗಳಾಗಿವೆ.

ಭಾರತದಲ್ಲಿ 2022ರ ವೇಳೆಗೆ ಒಂದೇ ಬಾರಿ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಕಷ್ಟು ಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆ ಬ್ಯಾಗ್​ಗಳನ್ನೇ ಬಳಸುವಂತೆ ಆದೇಶ ನೀಡಲಾಗಿದೆ. ಇದೇ ರೀತಿ ಜಗತ್ತಿನ 60 ದೇಶಗಳಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ