HOME » NEWS » National-international » PLAQUE WITH SONIA GANDHIS NAME GOES MISSING FROM ATAL TUNNEL OPENED BY PM MAK

ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ಮಾಡಿದ್ದ ಸೋನಿಯಾ ಗಾಂಧಿ ನಾಮಫಲಕವೇ ಮಾಯ; ಕಾಂಗ್ರೆಸ್​ ಆಕ್ರೋಶ

2010ರ ಜುಲೈ 28ರಂದು ಈ ಅಟಲ್ ಸುರಂಗಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಈ ವೇಳೆ ಸೋನಿಯಾ ಅವರ ಹೆಸರಿದ್ದ ಫಲಕವನ್ನ ಇಲ್ಲಿ ಹಾಕಲಾಗಿತ್ತು. ಆದರೆ ಸುರಂಗ ಉದ್ಘಾಟನೆಗೂ ಮುನ್ನ ಫಲಕವನ್ನ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ತನ್ನ ಪತ್ರದಲ್ಲಿ ಆರೋಪಿಸಿದೆ.

news18-kannada
Updated:October 14, 2020, 11:50 AM IST
ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ಮಾಡಿದ್ದ ಸೋನಿಯಾ ಗಾಂಧಿ ನಾಮಫಲಕವೇ ಮಾಯ; ಕಾಂಗ್ರೆಸ್​ ಆಕ್ರೋಶ
2010ರ ಜುಲೈ 28ರಂದು ಅಟಲ್ ಸುರಂಗಕ್ಕೆ ಅಡಿಗಲ್ಲು ಹಾಕಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.
  • Share this:
ಚಂಡೀಘಡ: ಮನಾಲಿಯನ್ನು ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕಿಸುವ ಮತ್ತು ಲಡಾಖ್‌ನ ಲೇಹ್‌ಗೆ ಪ್ರಯಾಣದ ಸಮಯವನ್ನು ಐದು ಗಂಟೆಗಳವರೆಗೆ ಕಡಿಮೆ ಮಾಡುವ ಮಹತ್ವದ ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್​ .3 ರಂದು ಉದ್ಘಾಟಿಸಿದ್ದರು. ಆದರೆ, ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದು ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ. 2010ರಲ್ಲೇ ಈ ಯೋಜನೆಗೆ ಸೋನಿಯಾ ಗಾಂಧಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ, ಅಕ್ಟೋಬರ್ 3 ರಂದು ಲೋಕಾರ್ಪಣೆಗೊಂಡ ಹಿಮಾಚಲಪ್ರದೇಶದ ರೋಹ್ಟಂಗ್​ನ ಅಟಲ್ ಸುರಂಗದಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿದ್ದ ಫಲಕವನ್ನ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಕಾಂಗ್ರೆಸ್​ ಮುಖಂಡರು ಈ ಕುರಿತು ಪ್ರತಿಭಟನೆ ನಡೆಸುವುದಾಗಿಯೂ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಶ್ರೀಮತಿ ಸೋನಿಯಾ ಗಾಂಧಿಯವರ ಹೆಸರನ್ನು ಹೊಂದಿರುವ ಅಡಿಪಾಯ ಫಲಕವನ್ನು ಅದರ ಉದ್ಘಾಟನೆಗೆ ಮುನ್ನ ಸುರಂಗದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ವಿರುದ್ಧ ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯ ಎಚ್ಚರಿಕೆ ನೀಡಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ.

ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾಗ ತೆಗೆದಿರುವ ಚಿತ್ರ.


2010ರ ಜುಲೈ 28ರಂದು ಈ ಅಟಲ್ ಸುರಂಗಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಈ ವೇಳೆ ಸೋನಿಯಾ ಅವರ ಹೆಸರಿದ್ದ ಫಲಕವನ್ನ ಇಲ್ಲಿ ಹಾಕಲಾಗಿತ್ತು. ಆದರೆ ಸುರಂಗ ಉದ್ಘಾಟನೆಗೂ ಮುನ್ನ ಫಲಕವನ್ನ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ತನ್ನ ಪತ್ರದಲ್ಲಿ ಆರೋಪಿಸಿದೆ.

ಈ ಕುರಿತು ಹಿಮಾಚಲಪ್ರದೇಶದ ಕಾಂಗ್ರೆಸ್​ ಅಧ್ಯಕ್ಷ ಕುಲ್ದೀಪ್ ಸಿಂಗ್​ ರಾಥೋಡ್, ಹಿಮಾಚಲಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್ ಅವರಿಗೆ ಪತ್ರ ಬರೆದು, ಫಲಕ ತೆಗೆದುಹಾಕಿದ್ದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ​ಎಚ್ಚರಿಕೆ ನೀಡಿದ್ದಾರೆ.

ಕಾಣೆಯಾಗಿರುವ ಅಡಿಪಾಯದ ಫಲಕವನ್ನ ಪುನಃ ಸ್ಥಾಪನೆ ಮಾಡದಿದ್ದರೆ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್​ ಪ್ರತಿಭಟನೆ ನಡೆಸಲಿದೆ. “ಇದು ಪ್ರಜಾಪ್ರಭುತ್ವ ವಿರೋಧಿ, ಅಸಾಂಪ್ರದಾಯಿಕ ಮತ್ತು ಕಾನೂನುಬಾಹಿರ ಹೆಜ್ಜೆಯಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ : ಚಿಕಿತ್ಸೆ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ನಕಲಿ ಸಾಧು; ಸಾರ್ವಜನಿಕರಿಂದ ಧರ್ಮದೇಟುಅಡಿಪಾಯದ ಫಲಕ ಕಾಣೆಯಾಗಿರುವ ಬಗ್ಗೆ ತನಿಖೆ ಮಾಡುವಂತೆ ಪಕ್ಷದ ಮುಖಂಡರಾದ ಗಿಯಾಲ್ಚನ್ ಠಾಕೂರ್ ಹಾಗೂ ಹರಿಚಂದ್​ ಶರ್ಮಾ ಕೀಲಾಂಗ್ ಹಾಗೂ ಮನಾಲಿಯಲ್ಲಿ ಪೊಲೀಸ್​ ಪ್ರಕರಣ ದಾಖಲಿಸಿದ್ದಾರೆ.
Youtube Video

ಹಿಮಾಚಲದಲ್ಲಿ ರೋಹ್ಟಾಂಗ್‌ನಲ್ಲಿ ಸುರಂಗ ನಿರ್ಮಿಸುವ ನಿರ್ಧಾರವನ್ನು ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ 2000ರ ಜೂನ್ 3 ರಂದು ತೆಗೆದುಕೊಳ್ಳಲಾಗಿತ್ತು. ಮಾಜಿ ಪ್ರಧಾನಿ ನೀಡಿದ ಕೊಡುಗೆಯನ್ನು ಗೌರವಿಸಲು ರೋಹ್ಟಾಂಗ್ ಸುರಂಗವನ್ನು ಅಟಲ್ ಸುರಂಗ ಎಂದು ಹೆಸರಿಸಲು ಕೇಂದ್ರ ಸಚಿವ ಸಂಪುಟ 2019 ರಲ್ಲಿ ನಿರ್ಧರಿಸಿತ್ತು.
Published by: MAshok Kumar
First published: October 14, 2020, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories