Holiday at Maldives: ಮಾಲ್ಡೀವ್ಸ್ ಗೆ ಹೋಗೋ ಪ್ಲಾನ್ ಮಾಡ್ತಿದ್ದೀರಾ? ಟ್ರಿಪ್ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

Cheap and Best Trip to Maldives: ಮಾಲ್ಡೀವ್ಸ್ ಗೆ ಹೋಗಿ ಎಂಜಾಯ್ ಮಾಡೋಣ ಅಂದುಕೊಂಡಿದ್ದೀರಾ? ಆದರೆ, ಅಲ್ಲಿಗೆ ಹೋಗುವುದು ಹೇಗೆ? ಹೋದಮೇಲೆ ಸ್ಟೇ ಆಗುವುದು ಎಲ್ಲಿ(Stay in Maldives)? ಮಾಲ್ಡೀವ್ಸ್ ಗೆ ಹೋಗಬೇಕು ಅಂದರೆ ನಿಮ್ಮ ಬಳಿ ಏನೇನು ಇರಬೇಕು? ಅಂತ ಯೋಚಿಸುತ್ತಿದ್ದೀರಾ, ಇದರ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Trip to Maldives: ದೇಶದಲ್ಲಿ ಮಹಾಮಾರಿ ಕೊರೋನಾ ಕೊಂಚ ಮಟ್ಟಿಗೆ ತಗ್ಗಿದೆ. ಒಂದೂವರೆ ವರ್ಷಗಳಿಂದ ಎಲ್ಲೂ ಹೊರಗಡೆ ಹೋಗದೇ ಮನೆಯಲ್ಲಿಯೇ ಇದ್ದು (Lockdown) ಜನರಿಗೆ ಬೋರಾಗಿದೆ. ಹೀಗಾಗಿ ಈಗಲಾದರೂ ಎಲ್ಲಾದರೂ ವೆಕೇಶನ್ (Vacation Plans)ಗೆ ಹೋಗೋಣ ಎಂದು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಅದರಲ್ಲೂ ಮಾಲ್ಡೀವ್ಸ್ ಗೆ ಹೋಗಿ ಎಂಜಾಯ್ ಮಾಡೋಣ ಅಂದುಕೊಂಡಿದ್ದೀರಾ? ಆದರೆ, ಅಲ್ಲಿಗೆ ಹೋಗುವುದು ಹೇಗೆ? ಹೋದಮೇಲೆ ಸ್ಟೇ ಆಗುವುದು ಎಲ್ಲಿ(Stay in Maldives)? ಮಾಲ್ಡೀವ್ಸ್ ಗೆ ಹೋಗಬೇಕು ಅಂದರೆ ನಿಮ್ಮ ಬಳಿ ಏನೇನು ಇರಬೇಕು? ಅಂತ ಯೋಚಿಸುತ್ತಿದ್ದೀರಾ, ಇದರ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..ಮಾಲ್ಡೀವ್ಸ್ ಅದೆಷ್ಟೋ ಮಂದಿಯ ಕನಸಿನ ತಾಣವಾಗಿದೆ. ವಿಶ್ವದಾದ್ಯಂತ ಜನರು ಹನಿಮೂನ್, ಬೀಚ್ ಟ್ರಿಪ್, ವೆಕೇಶನ್ ಗಾಗಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಭೇಟಿ ನೀಡುತ್ತಾರೆ.

    ವರ್ಷ ಪೂರ್ತಿಯೂ ಮಾಲ್ಡೀವ್ಸ್ ನಲ್ಲಿ ಪ್ರವಾಸಿಗರು ಇದ್ದೇ ಇರುತ್ತಾರೆ. ಡಿಸೆಂಬರ್ ನಿಂದ ಏಪ್ರಿಲ್ ವರೆಗಿನ ಸಮಯದಲ್ಲಿ ಮಾಲ್ಡೀವ್ಸ್ ಗೆ ಭೇಟಿ ನೀಡಲು ಉತ್ತಮ ಸಮಯ. ಏಕೆಂದರೆ ಈ ಸಮಯದಲ್ಲಿ ಮಾಲ್ಡೀವ್ಸ್ ನಲ್ಲಿ ಅದ್ಭುತವಾದ ವಾತಾವರಣವಿರುತ್ತೆ. ಮಾಲ್ಡೀವ್ಸ್ ಗೆ ಹೋಗಬೇಕು ಅಂದ್ರೆ ವೀಸಾ ಬೇಕಾ? ನಮ್ಮ ಬಜೆಟ್ ಗೆ ಅಲ್ಲಿ ರೂಮ್ ಸಿಗುತ್ತಾ? ನಿಮ್ಮ ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲಿದೆ.

    01. ವೀಸಾ ಬೇಕಿಲ್ಲ... ಪಾಸ್ ಪೋರ್ಟ್ ಇದ್ರೆ ಸಾಕು

    ಮಾಲ್ಡೀವ್ಸ್‌ಗೆ ಭೇಟಿ ನೀಡಲು ಭಾರತೀಯರು ವೀಸಾಕ್ಕಾಗಿ ಪೂರ್ವ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಪ್ರವಾಸಕ್ಕೆ ಭೇಟಿ ನೀಡುವ ಪ್ರಯಾಣಿಕರು 30 ದಿನಗಳಿಂದ 90 ದಿನಗಳವರೆಗೆ ಅಲ್ಲಿರಲು ಯಾವುದೇ ವೀಸಾ ಬೇಕಿಲ್ಲ. ನಿಮಗೆ ಬೇಕಿರುವುದು ಮಾನ್ಯತೆ ಪಡೆದ ಪಾಸ್ ಪೋರ್ಟ್ ಹಾಗೂ ಹೋಟೆಲ್ ರಿಸರ್ವೇಶನ್ ಬುಕಿಂಗ್ಸ್. ಇಷ್ಟಿದ್ದರೆ ನೀವು ಆರಾಮಾಗಿ ಮಾಲ್ಡೀವ್ಸ್‌ ಪ್ರವಾಸ ಮಾಡಬಹುದು.

    02. ಹೋಟೆಲ್, ರೆಸಾರ್ಟ್ ಬಗ್ಗೆ ಗೊಂದಲ ಬೇಡ

    ಮಾಲ್ಡೀವ್ಸ್‌ ಐಷಾರಾಮಿ ತಾಣ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದರ ಅರ್ಥ ನಿಮ್ಮ ಬಜೆಟ್ ಗೆ ಇಲ್ಲಿ ರೂಮ್, ರೆಸಾರ್ಟ್ ಸಿಗುವುದಿಲ್ಲ ಎಂದಲ್ಲ. ಸಾಮಾನ್ಯರ ಕೈಗೆಟಕುವ ದರದಲ್ಲಿ ರೂಂಗಳು ಹಾಗೂ ರೆಸಾರ್ಟ್ ಗಳು ಸಿಗುತ್ತದೆ. ಈ ಐಷಾರಾಮಿ ರೂಂ ಹಾಗೂ ರೆಸಾರ್ಟ್ ಗಳಲ್ಲಿ ಪ್ರತಿ ರಾತ್ರಿ ರೂಂ ದರವು 20 ಸಾವಿರದಿಂದ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ ಇದನ್ನು ಬಿಟ್ಟು ಹಲವಾರು ಹೋಂ ಸ್ಟೇಗಳು ಮತ್ತು ಬಜೆಟ್ ಹೋಟೆಲ್ ಗಳು ಸಹ ಇಲ್ಲಿವೆ. ದಿನಕ್ಕೆ ಕೇವಲ ರೂ 3,500ಕ್ಕೆ ಈ ರೆಸಾರ್ಟ್ ಗಳಲ್ಲಿ ರೂಮ್ ಸಿಗುತ್ತವೆ.

    03. ಇವನ್ನೆಲ್ಲ ಮರೆಯದೆ ಪ್ಯಾಕ್ ಮಾಡಿ!

    ಮಾಲ್ಡೀವ್ಸ್‌ ಗೆ ಹೋಗಬೇಕು ಅಂದ್ರೆ ನಿಮಗೆ ಬೇಕಿರುವುದು ಎರಡು ಮುಖ್ಯ ವಸ್ತು. ಒಂದು ಸನ್ ಸ್ಕ್ರೀನ್ ಹಾಗೂ ಟೋಪಿಗಳು. ಮಾಲ್ಡೀವ್ಸ್‌ ನಲ್ಲಿ ಹೆಚ್ಚು ಬಿಸಿಲು ಇರುತ್ತದೆ. ಹೀಗಾಗಿ ಆ ಬಿಸಿಲಿನಿಂದ ನಿಮ್ಮನ್ನ ಈ ಎರಡು ವಸ್ತುಗಳು ರಕ್ಷಣೆ ಮಾಡುತ್ತದೆ. ಜೊತೆಗೆ ನಿಮ್ಮನ್ನ ರಕ್ಷಿಸಿಕೊಳ್ಳಲು ಒಂದು ಛತ್ರಿಯನ್ನು ಇಟ್ಟುಕೊಂಡಿರಬೇಕು, ಹೆಚ್ಚು ಹಗುರವಾದ ಬಟ್ಟೆಗಳನ್ನು ಇಲ್ಲಿ ಹಾಕಿಕೊಳ್ಳಬೇಕು. ಹೀಗಾಗಿ ಇದನ್ನೆಲ್ಲ ಮರೆಯದೆ ಪ್ಯಾಕ್ ಮಾಡಿ.

    04. ಮೊದಲೇ ಫ್ಲೈಟ್ ಟಿಕೆಟ್ ಬುಕ್ ಮಾಡಿ

    ಮೊದಲೇ ವಿಮಾನದ ಟಿಕೆಟ್ ಗಳನ್ನು ಬುಕ್ ಮಾಡಿದರೆ ನಿಮಗೆ ಉತ್ತಮ. ಯಾಕೆಂದರೆ ಮೊದಲೇ ಟಿಕೆಟ್ ಬುಕ್ ಮಾಡಿದರೆ ನೀವು ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದು. 12 ಸಾವಿರ ರೂಪಾಯಿ ದರದಲ್ಲಿ ನೀವು ಬೆಂಗಳೂರಿನಿಂದ ಮಾಲ್ಡೀವ್ಸ್ ಗೆ ಫ್ಲೈಟ್ ನಲ್ಲಿ ಹೋಗಬಹುದು. ಬೆಂಗಳೂರಿನಿಂದ ಮಾಲ್ಡೀವ್ಸ್‌ ಗೆ ಕೇವಲ ಎರಡೂವರೆ ಗಂಟೆಗಳಲ್ಲಿ ಪ್ರಯಾಣಿಸಬಹುದು.

    05. ಮಾಲ್ಡೀವ್ಸ್ ನಲ್ಲಿ ಮರೆಯದೆ ಇದನ್ನೆಲ್ಲ ಮಾಡಿ!.

    ಮಾಲ್ಡೀವ್ಸ್ ಸಾಹಸ ಉತ್ಸಾಹಿಗಳಿಗೆ ಸ್ವರ್ಗವಾಗಿದೆ. ಕಯಾಕಿಂಗ್, ಮೀನುಗಾರಿಕೆ, ಪ್ಯಾರಾಸೇಲಿಂಗ್, ಜೆಟ್ ಸ್ಕೀಯಿಂಗ್ ಮತ್ತು ಸ್ನಾರ್ಕೆಲಿಂಗ್ ಸೇರಿದಂತೆ ಹಲವಾರು ಜಲಕ್ರೀಡೆ ಚಟುವಟಿಕೆಗಳನ್ನು ಇಲ್ಲಿ ಆನಂದಿಸಬಹುದು. ಎಲ್ಲಾ ಖಾಸಗಿ ದ್ವೀಪಗಳು ಈ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡುತ್ತವೆ, ಆದರೆ ಅಲ್ಲಿ ಅಮೇರಿಕನ್ ಡಾಲರ್​ಗಳನ್ನೇ ಹೆಚ್ಚಾಗಿ ಬಳಸುವುದರಿಂದ ಬೆಲೆ ಸ್ವಲ್ಪ ಹೆಚ್ಚಿರಲಿದೆ.  ಸ್ಥಳೀಯ ದ್ವೀಪಗಳಲ್ಲಿನ ಸಣ್ಣ ಕಡಲತೀರಗಳು ಸಹ ಕೈಗೆಟುಕುವ ಬೆಲೆಯಲ್ಲಿ ಹಲವಾರು ಚಟುವಟಿಕೆಗಳ ವ್ಯವಸ್ಥೆಯನ್ನು ಮಾಡಿದೆ

    (ವರದಿ- ವಾಸುದೇವ್. ಎಂ)
    Published by:Soumya KN
    First published: