HOME » NEWS » National-international » PLANE BREAKS APART AFTER SKIDDING OFF RUNWAY IN TURKEY THREE DIED SESR

ರನ್​ವೇಯಲ್ಲಿ ಜಾರಿ ಮೂರು ತುಂಡಾದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ

ಇಸ್ತಾನ್​ಬುಲ್​ನಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದಾಗಿ ಈ ಅನಾಹುತ ನಡೆದಿದೆ ಎಂದು ಇಲ್ಲಿನ ಸಾರಿಗೆ ಸಚಿವರು ತಿಳಿಸಿದ್ದಾರೆ

Seema.R | news18-kannada
Updated:February 6, 2020, 11:53 AM IST
ರನ್​ವೇಯಲ್ಲಿ ಜಾರಿ ಮೂರು ತುಂಡಾದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ
ತುಂಡಾದ ವಿಮಾನದ ದೃಶ್ಯ
  • Share this:
ಇಸ್ತಾನ್​ಬುಲ್ (ಫೆ.06): ಲ್ಯಾಂಡಿಂಗ್​ ಮಾಡುವ ವೇಳೆ ಕೆಟ್ಟ ಹವಾಮಾನದಿಂದಾಗಿ ರನ್​ವೇಯಲ್ಲಿ ವಿಮಾನ ಜಾರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 179 ಜನ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ,

ವಿಮಾನ ಮೂರು ತುಂಡಾಗಿದ್ದು, ಜನರು ಪ್ರಾಣರಕ್ಷಣೆಗಾಗಿ ವಿಮಾನದ ಮುರಿದ ರೆಕ್ಕೆ ಸಹಾಯದಿಂದ ಮೇಲೆ ಬಂದಿದ್ದಾರೆ. ಇಸ್ತಾನ್​ಬುಲ್ನ ಸಬಿಹಾ ಗೊಕ್ಸ್​ ಹಾಗೂ ಏಜಿಯನ್​ ಪೋರ್ಟ್​ ಸಿಟಿ ನಡುವೆ ಹಾರಾಟ ನಡೆಸುತ್ತಿದ್ದ ಬೋಯಿಂಗ್​ 737 ವಿಮಾನ ಅಪಘಾತಗೊಂಡಿದೆ.

ಇಸ್ತಾನ್​ಬುಲ್​ನಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದಾಗಿ ಈ ಅನಾಹುತ ನಡೆದಿದೆ. ಅಪಘಾತ ನಡೆದಾಗ ಪ್ರಯಾಣಿಕರು ಕೆಲವರು ತಾವೇ ವಿಮಾನದಿಂದ ಹೊರ ಬರುವ ಪ್ರಯತ್ನ ನಡೆಸಿದ್ದಾರೆ.  ಎಂದು ಇಲ್ಲಿನ ಸಾರಿಗೆ ಸಚಿವರು ತಿಳಿಸಿದ್ದಾರೆ.

ವಿಮಾನದಲ್ಲಿ 177 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು. ಇದರಲ್ಲಿ 12 ಮಂದಿ ಮಕ್ಕಳು ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ದೆಹಲಿಯ ಅಮೆರಿಕ ರಾಯಭಾರಿ ಕಚೇರಿ ಕ್ವಾಟ್ರಸ್​ನಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಕೆಟ್ಟ ಹವಾಮಾನದಿಂದ ಮಂದ ಬೆಳಕಿನಿಂದಾಗಿ ಈ ಅನಾಹುತ ಸಂಭವಿಸಿದೆ. ಇನ್ನು ಈ ಅಪಘಾತದ ಸಂಪೂರ್ಣ ದೃಶ್ಯ ಕೂಡ ಸೆರೆಯಾಗಿದೆ.
First published: February 6, 2020, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories