ನವದೆಹಲಿ (ಮೇ 30): ಇಡೀ ವಿಶ್ವವೇ ಕೊರೋನಾ ಸೋಂಕಿನಿಂದ ತತ್ತರಿಸಿದೆ. ಕೊರೋನಾಗೆ ಲಸಿಕೆ ಕಂಡುಹಿಡಿದ ಬೆನ್ನಲ್ಲೇ ಮತ್ತೊಂದು ಅಪಾಯಕಾರಿ ರೋಗವೊಂದು ಆತಂಕ ಸೃಷ್ಟಿಸಿದೆ. ಆಸ್ಟ್ರೇಲಿಯದಲ್ಲಿ ಇಲಿಗಳ ತೊಂದರೆ ಹೆಚ್ಚಾಗಿದ್ದು, ಲಕ್ಷಾಂತರ ಇಲಿಗಳ ದಾಳಿಯಿಂದ ಕೋಟ್ಯಂತರ ರೂ. ಮೌಲ್ಯದ ಕೃಷಿ ಉತ್ಪನ್ನಗಳು ಹಾನಿಯಾಗಿವೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿರುವ ಹಳ್ಳಿಗಳಲ್ಲಿ ಲಕ್ಷಾಂತರ ಇಲಿಗಳ ಹಾವಳಿ ಶುರುವಾಗಿದೆ. ಈ ಮೂಲಕ ಕಳೆದ ನಾಲ್ಕೈದು ದಶಕಗಳ ಹಿಂದೆ ಆಸ್ಟ್ರೇಲಿಯದಲ್ಲಿ ಕಾಣಿಸಿಕೊಂಡಿದ್ದ ಪ್ಲೇಗ್ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಹಲವು ತಿಂಗಳ ಹಿಂದೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಮಿಡತೆ ದಾಳಿಯಿಂದ ಕಂಗಾಲಾಗಿತ್ತು. ಕೃಷಿ ಭೂಮಿಗೆ ದಾಳಿ ಇಟ್ಟ ಮಿಡತೆಗಳು ತಿಂದು ಹಾಕಿದ ಬೆಳೆಯ ಪ್ರಮಾಣಕ್ಕೆ ಲೆಕ್ಕವಿಲ್ಲ. ಇದೀಗ ಆಸ್ಟ್ರೇಲಿಯಾದ ಕೃಷಿ ಭೂಮಿಯ ಮೇಲೆ ಇಲಿ ದಾಳಿ ಹೆಚ್ಚಾಗಿದ್ದು, ಸಾವಿರಾರು ಸಂಖ್ಯೆಯ ಇಲಿಗಳು ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ಬೆಳೆಯನ್ನು ನಾಶ ಮಾಡಿದೆ.
WARNING: GRAPHIC CONTENT – Farmers are struggling as the biggest plague of mice in decades continues to sweep across Australia’s New South Wales https://t.co/LTDpEKnIoy pic.twitter.com/PFf2eqaLTP
— Reuters (@Reuters) May 26, 2021
ನ್ಯೂ ಸೌತ್ ವೇಲ್ಸ್ನಲ್ಲಿ ರಾತ್ರಿ ಹೊತ್ತಿನಲ್ಲಿ ಕೃಷಿ ಭೂಮಿ ಮಾತ್ರವಲ್ಲದೆ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿರುವ ಇಲಿಗಳ ಸೈನ್ಯ ಮನೆಯ ವಸ್ತುಗಳನ್ನು ನಾಶ ಮಾಡುತ್ತಿದೆ. ಇಲಿಗಳು ಬಿಲವನ್ನು ಕೊರೆದು ಮನೆ, ಆಸ್ಪತ್ರೆ, ಕಚೇರಿ, ಶಾಲೆಗಳನ್ನು ಸೇರುತ್ತಿದೆ. ಇಲಿಗಳನ್ನು ನಿಯಂತ್ರಿಸುವ ಸಲುವಾಗಿ ಭಾರತದ ಸಹಾಯ ಕೋರಿರುವ ಆಸ್ಟ್ರೇಲಿಯಾ ‘ಬ್ರೋಮಾಡಿಯೋಲೋನ್’ ಎಂಬ ಪಾಷಾಣವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದೆ.
ಇದು ಅತ್ಯಂತ ವಿಷಕಾರಿಯಾಗಿದ್ದು, ಇಲಿಗಳನ್ನು ಸಾಯಿಸಲು ಇದಕ್ಕಿಂತ ಪರಿಣಾಮಕಾರಿ ವಿಷ ಮತ್ತೊಂದಿಲ್ಲ ಎನ್ನಲಾಗಿದೆ. ಇದು ಭಾರತದಲ್ಲಿ ಹೇರಳವಾಗಿ ದೊರೆಯುವುದರಿಂದ ಈ ವಿಷವನ್ನು ಕಳುಹಿಸಲು ಆಸ್ಟ್ರೇಲಿಯ ಮನವಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ