India's Rice Exports: ಭಾರತದ ಅಕ್ಕಿ, ಗೋಧಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ವಿದೇಶಿ ಬೇಡಿಕೆಯಿಂದ ಹೆಚ್ಚಾಯ್ತು ರಫ್ತು
ಆಫ್ರಿಕನ್ ರಾಷ್ಟ್ರವು ಭಾರತದಿಂದ 1 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳಲು ನೋಡುತ್ತಿದೆ. ಏಪ್ರಿಲ್ನಲ್ಲಿ ಈಜಿಪ್ಟ್ ದೇಶಕ್ಕೆ 2,40,000 ಟನ್ ಅಗತ್ಯವಿದೆ ಎಂದು ವರದಿಗಳು ಮಾಹಿತಿ ನೀಡಿವೆ.
2013-14 ಮತ್ತು 2021-22 ರ ನಡುವೆ ಭಾರತದ ಅಕ್ಕಿ ರಫ್ತು (India's Rice Exports) ಶೇಕಡಾ 109 ರಷ್ಟು ಬೆಳವಣಿಗೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ಟ್ವೀಟ್ ಮಾಡಿದ್ದಾರೆ. ಈಕುರಿತು ಮಾಹಿತಿ ಹಂಚಿಕೊಂಡಿರುವ ಪಿಯೂಷ್ ಗೋಯಲ್ (Piyush Goyal) "ಭಾರತದ ಅಕ್ಕಿ ರಫ್ತು 109% ರಷ್ಟು ದೊಡ್ಡ ಮಟ್ಟದಲ್ಲಿ ಬೆರಗುಗೊಳಿಸುವ ಬೆಳವಣಿಗೆಯನ್ನು ಗಳಿಸಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ "ಇಂಡಿಯಾ ದಿ ರೈಸ್ ಬಾಸ್ಕೆಟ್ ಆಫ್ ದಿ ವರ್ಲ್ಡ್" ಎಂಬ ಶೀರ್ಷಿಕೆಯ ಚಿತ್ರದಲ್ಲಿ ಅಕ್ಕಿ ರಫ್ತಿನ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳು ರೈತರಿಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥಿಸಿ ವಿವರಿಸಿದ್ದಾರೆ.
ಎಷ್ಟು ಬೆಳವಣಿಗೆ ಸಾಧಿಸಿದೆ? 2013-14ರ ಆರ್ಥಿಕ ವರ್ಷದಲ್ಲಿ ಬಾಸುಮತಿ ಅಕ್ಕಿಯನ್ನು ಹೊರತುಪಡಿಸಿ ಅಕ್ಕಿ ರಫ್ತು $2,925 ಮಿಲಿಯನ್ ಆಗಿತ್ತು. ಅಂದಿನಿಂದ 2021-22ನೇ ಹಣಕಾಸು ವರ್ಷದಲ್ಲಿ ಇದು 6,115 ಮಿಲಿಯನ್ ಡಾಲರ್ಗಳಿಗೆ 109 ಪ್ರತಿಶತದಷ್ಟು ಬೆಳೆದಿದೆ.
ಈಕುರಿತು ಕೃಷಿ ಸಚಿವಾಲಯ ಒದಗಿಸಿರುವ ಪ್ರತ್ಯೇಕ ಮಾಹಿತಿಯಲ್ಲಿ 2021-22 ಹಣಕಾಸು ವರ್ಷದಲ್ಲಿ ಅಕ್ಕಿ ರಫ್ತು ಶೇಕಡಾ 9.24 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಅಕ್ಕಿ ರಫ್ತು ವರ್ಷಕ್ಕೆ ಅದರ ಒಟ್ಟು ಗುರಿಯ 102 ಪ್ರತಿಶತವನ್ನು ಸಾಧಿಸಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
अन्नपूर्णा भारत.
India's rice exports takes an astounding growth of 109%.
Modi Govt. policies help farmers get access to the global market and also ensure food security. pic.twitter.com/EKawuRddrV
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಿದಲ್ಲಿ ಕೈಗೊಳ್ಳಲಾದ ಸರ್ಕಾರಿ ಯೋಜನೆಗಳು ರೈತರಿಗೆ ವಿಶ್ವಾದ್ಯಂತ ಮಾರುಕಟ್ಟೆಯನ್ನು ಪ್ರವೇಶಿಸಲು ಸಹಾಯ ಮಾಡುತ್ತವೆ. ಮತ್ತು ಊಟ ಸುರಕ್ಷತೆಯನ್ನು ಖಾತರಿಪಡಿಸುತ್ತವೆ ಎಂದು ಅವರು ಹೇಳಿದರು.
ಈಜಿಪ್ಟ್ಗೆ ಭಾರತದ ಗೋಧಿ ರಫ್ತು! ಉಕ್ರೇನ್ ಮತ್ತು ರಷ್ಯಾದಿಂದ ಗೋಧಿಯನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿರುವ ಈಜಿಪ್ಟ್ ಭಾರತವನ್ನು ಗೋಧಿ ಪೂರೈಕೆದಾರನಾಗಿ ಅನುಮೋದಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದಿಂದ ಭಾರತಕ್ಕೆ ಲಾಭ! ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ರಾಷ್ಟ್ರಗಳು ಗೋಧಿಯ ಪ್ರಮುಖ ಉತ್ಪಾದಕರು ಮತ್ತು ರಫ್ತುದಾರರು ಆಗಿದ್ದವು. ಆದರೆ ಈ ಎರಡೂ ದೇಶಗಳ ನಡುವೆ ಘನಘೋಷ ಯುದ್ಧ ನಡೆಯುತ್ತಿರುವ ಕಾರಣ ಭಾರತದ ಗೋಧಿಗೆ ಅದೃಷ್ಟ ಖುಲಾಯಿದೆ.
ಈಜಿಪ್ಟ್ 2020 ರಲ್ಲಿ ರಷ್ಯಾದಿಂದ ಸುಮಾರು USD 1.8 ಶತಕೋಟಿ ಮೌಲ್ಯದ ಗೋಧಿಯನ್ನು ಮತ್ತು ಉಕ್ರೇನ್ನಿಂದ USD 610.8 ಮಿಲಿಯನ್ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿದೆ.
ಇದನ್ನೂ ಓದಿ: Mahogany Trees: ನಿಮ್ಮನ್ನು ಕೋಟ್ಯಾಧಿಪತಿ ಮಾಡಬಲ್ಲ ಮರ ಇದು!
ಆಫ್ರಿಕನ್ ರಾಷ್ಟ್ರವು ಭಾರತದಿಂದ 1 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳಲು ನೋಡುತ್ತಿದೆ. ಏಪ್ರಿಲ್ನಲ್ಲಿ ಈಜಿಪ್ಟ್ ದೇಶಕ್ಕೆ 2,40,000 ಟನ್ ಅಗತ್ಯವಿದೆ ಎಂದು ವರದಿಗಳು ಮಾಹಿತಿ ನೀಡಿವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ