VIDEO: ಇನ್ಮೇಲೆ ಟ್ರೈನ್​ ಮೂಲಕ ನೀರಿನಾಳದಲ್ಲೂ ಓಡಾಡಬಹುದು: ಕೇಂದ್ರದಿಂದ ಸಿದ್ಧವಾಗುತ್ತಿದೆ ಹೊಸ ಯೋಜನೆ

ಕೊಲ್ಕತ್ತಾ ಪೂರ್ವದಿಂದ ಪಶ್ವಿಮಮವನ್ನು ಸಂಪರ್ಕಿಸುವ ಈಸ್ಟ್​-ವೆಸ್ಟ್​ ಮೆಟ್ರೋ ಪ್ರಾಜೆಕ್ಟ್​ನಡಿಯಲ್ಲಿ ಈ ಅಂಡರ್​​ ವಾಟರ್ನಲ್ಲಿ​ ಟ್ರೈನ್​ ಚಲಿಸಲು ಸಿದ್ಧತೆ ನಡೆಯುತ್ತಿದೆ.

news18
Updated:August 9, 2019, 12:17 PM IST
VIDEO: ಇನ್ಮೇಲೆ ಟ್ರೈನ್​ ಮೂಲಕ ನೀರಿನಾಳದಲ್ಲೂ ಓಡಾಡಬಹುದು: ಕೇಂದ್ರದಿಂದ ಸಿದ್ಧವಾಗುತ್ತಿದೆ ಹೊಸ ಯೋಜನೆ
ಅಂಡರ್​ ವಾಟರ್​ ಟ್ರೈನ್​
news18
Updated: August 9, 2019, 12:17 PM IST
ವಿಮಾನದ ಮೂಲಕ ಆಕಾಶದಲ್ಲಿ  ಹಾರಾಡಿದ್ದಾಯಿತು. ಹಳಿ ಮೇಲೆ ಚಲಿಸುವ ರೈಲಿನಲ್ಲಿ ಓಡಾಡಿದ್ದಾಯಿತು. ಇದೀಗ ನೀರಿನ ಒಳಗೆ ಚಲಿಸಬಲ್ಲ ರೈಲನ್ನು ತಯಾರಿಸುವ ಯೋಜನೆಗೆ ಭಾರತ ಸಿದ್ಧವಾಗಿದೆ. ಚೀನಾದಲ್ಲಿ ಈಗಾಗಲೇ ಈ ಯೋಜನೆ ಜಾರಿಗೆ ಬಂದಿದ್ದು, ಭಾರತದಲ್ಲೂ ಅಂಡರ್​ ವಾಟರ್​ ಟ್ರೈನ್​ನಲ್ಲಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ನೀರಿನ ಒಳಗೆ ಚಲಿಸಬಲ್ಲ ಟ್ರೈನ್​ ಅನ್ನು ತಯಾರಿಸಲಾಗುತ್ತಿದೆ. ಈ ಕುರಿತಂತೆ ಕೇಂದ್ರ ರೈಲ್ವೆ ಸಚಿವ ಪಿಯುಷ್​ ಗೊಯಲ್​ ​ಟ್ವೀಟ್​ ಮಾಡಿದ್ದು,‘ ಅಂಡರ್​ ವಾಟರ್​ ಟ್ರೈನ್​ ಅನ್ನು ವಿಶ್ವದ ಅತ್ಯುತ್ತಮ ತಂತ್ರಜ್ನಾವನ್ನಾಗಿ ಬಳಸಿಕೊಂಡು ನಿರ್ಮಿಸಲಾಗಿದೆ. ಕೊಲ್ಕತ್ತಾ ಹೂಗ್ಲಿ ನದಿಯಲ್ಲಿ ಈ ಯೋಜನೆಯನ್ನು ಮೊದಲು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದಾರೆ. ಕೊಲ್ಕತ್ತಾದ ಜನರು ಶೀಘ್ರದಲ್ಲೇ ಅಂಡರ್​ ವಾಟರ್​ ಟ್ರೈನ್​ನಲ್ಲಿ ಪ್ರಯಾಣಿಸಲಿದ್ದಾರೆ‘ ಎಂದಿದ್ದಾರೆ. ನೀರಿನಾಳದ ರೈಲು ಸಂಚಾರಕ್ಕೆ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಕೊಲ್ಕತ್ತಾ ರೈಲ್ವೆ ನಿಲ್ದಾಣಗಳಾದ ಹೌರಾ ಮತ್ತು ಮಹಕರ್ನ್​ ರೈಲ್ವೆ ನಿಲ್ದಾಣಗಳನ್ನು ಅಂಡರ್​ ವಾಟರ್​ ಟ್ರೈನ್​​ ಸಂಪರ್ಕಿಸಲಿದೆ.

ಇದನ್ನೂ ಓದಿ: ಉತ್ತರ ಕನ್ನಡಕ್ಕೇಕೆ ಮಲತಾಯಿ ಧೋರಣೆ?; ಜಿಲ್ಲೆಯ ನಿರ್ಲಕ್ಷ್ಯಖಂಡಿಸಿ ಆರಂಭವಾಗಿದೆ ಅಭಿಯಾನ

 



ಕೊಲ್ಕತ್ತಾ ಪೂರ್ವದಿಂದ ಪಶ್ವಿಮಮವನ್ನು ಸಂಪರ್ಕಿಸುವ ಈಸ್ಟ್​-ವೆಸ್ಟ್​ ಮೆಟ್ರೋ ಪ್ರಾಜೆಕ್ಟ್​ನಡಿಯಲ್ಲಿ ಈ ಅಂಡರ್​​ ವಾಟರ್​ ಟ್ರೈನ್​ ಚಲಿಸಲು ಸಿದ್ಧತೆ ನಡೆಯುತ್ತಿದೆ. 16.6 ಕಿ.ಮೀ​ ವ್ಯಾಪ್ತಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 10.6 ಕಿ.ಮೀ ಸುರಂಗ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಇದರಲ್ಲಿ ಕೊಲ್ಕತ್ತಾದ ಹೂಗ್ಲಿ ನದಿಯ 30 ಮೀಟರ್​ ಆಳದಲ್ಲಿ ಸುಮಾರು 520 ಮೀ. ದೂರ ನೀರಿನ ಒಳಗಡೆ ರೈಲು​​ ಸಂಚಾರ ಮಾಡಲಿದೆ.

ನೂತನವಾಗಿ ಸಿದ್ಧವಾಗುತ್ತಿರುವ ಅಂಡರ್​ವಾಟರ್​ ಟ್ರೈನ್​ 80 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಹೌರಾ ಹಾಗೂ ಮಹಾಕರನ್​ ನಿಲ್ದಾನವನ್ನು ಕೇವಲ ನಿಮಿಷಗಳಲ್ಲಿ ತಲುಪಲಿದೆ. ಈಗಾಗಲೇ ಈಸ್ಟ್​-ವೆಸ್ಟ್​ ಯೋಜನೆಗೆ 900 ಕೋಟಿ ರೂ ಮೀಸಲಿಡಲಾಗಿದ್ದು, 60 ಕೋಟಿ ರೂ.ಗಳನ್ನು ಈ ಯೋಜನೆಗೆ ವಿನಿಯೋಗಿಸಲಾಗಿದೆ.

 
First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...