Viral Video: 10 ವರ್ಷದ ಬಾಲಕನ ಮುಖಕ್ಕೆ ನಾಯಿ ಕಚ್ಚಿದ್ದಕ್ಕೆ 150 ಹೊಲಿಗೆ ಹಾಕುವಂತಾಯ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಘಟನೆಯ ನಂತರ ಘಾಜಿಯಾಬಾದ್​ ನಗರ ಪಾಲಿಕೆ ದಾಳಿ ನಡೆಸಿದ ನಾಯಿಯ ಮಾಲೀಕನಿಗೆ 50 ಸಾವಿರ ದಂಡ ವಿಧಿಸಿದೆ.

  • Share this:

ಬೀದಿನಾಯಿಗಳ (Street Dogs) ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ಅದರಲ್ಲೂ ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ ಅಷ್ಟಿಷ್ಟಲ್ಲ.  10 ವರ್ಷದ ಬಾಲಕನ ಮೇಲೆ ನಾಯಿ ಕಚ್ಚಿ (Pitbull Bite 10 Year Boy) ಒಂದಲ್ಲ ಎರಡಲ್ಲ ಬರೋಬ್ಬರಿ 150 ಹೊಲಿಗೆ ಹಾಕಿದ ದುರ್ಘಟನೆಯೊಂದು ನಡೆದಿದೆ. ಆಟ ಆಡುತ್ತಿದ್ದ 10 ವರ್ಷದ ಬಾಲಕನ ಮೇಲೆ ನಾಯಿ ದಾಳಿ ಮಾಡಿದೆ. ಮಗುವಿನ ಮೇಲೆ ನಾಯಿ ದಾಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲೇ ಇದ್ದ ಜನರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಹ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.  


ಜನರು ರಕ್ಷಿಸುವ ಮುನ್ನವೇ ದಾಳಿ ನಡೆಸಿದ ನಾಯಿ ಮಗುವಿನ ಮುಖ ಮತ್ತು ಕಿವಿಯನ್ನು ಕಚ್ಚಿದೆ. ಮಗುವಿನ ಮುಖಕ್ಕೆ ಸುಮಾರು 150 ಹೊಲಿಗೆ ಹಾಕಲಾಗಿದೆ. ಈ ಸಂಬಂಧ ಈವರೆಗೆ ಪೊಲೀಸ್ ದೂರು ದಾಖಲಾಗಿಲ್ಲ

top videos


    ಇಲ್ಲಿದೆ ನೋಡಿ ವಿಡಿಯೊ    ನಾಯಿ ಮಾಲೀಕರಿಗೆ ದಂಡ
    ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸಂಜಯ್ ನಗರ ಪ್ರದೇಶದ ಉದ್ಯಾನವನದಲ್ಲೇ ಆಟವಾಡುತ್ತಿದ್ದ ಪಿಟ್‌ಬುಲ್ ನಾಯಿ ದಾಳಿ ಮಾಡಿದೆ. ಸದ್ಯ ಈ ಘಟನೆಯ ನಂತರ ಘಾಜಿಯಾಬಾದ್​ ನಗರ ಪಾಲಿಕೆ ದಾಳಿ ನಡೆಸಿದ ನಾಯಿಯ ಮಾಲೀಕರಿಗೆ 50 ಸಾವಿರ ದಂಡ ವಿಧಿಸಿದೆ.

    First published: