Dog Attack: ವಿದ್ಯಾರ್ಥಿ ಮೇಲೆ ಪಿಟ್ ಬುಲ್ ದಾಳಿ, ನಾಯಿ ಮಾಲೀಕನಿಗೆ ಬಿತ್ತು 5000 ದಂಡ!

ಪಿಟ್​ ಬುಲ್​ ನಾಯಿ

ಪಿಟ್​ ಬುಲ್​ ನಾಯಿ

ಕಾನೂನು (Law) ವಿದ್ಯಾರ್ಥಿಯೊಬ್ಬನ (Student) ಮೇಲೆ ಪಿಟ್​ಬುಲ್​ ನಾಯಿ (Pit bull Dog) ದಾಳಿ ಮಾಡಿದ್ದು, ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದೆ. ಸ್ಥಳೀಯ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಯಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ನಾಯಿ ಮಾಲೀಕನಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಮುಂದೆ ಓದಿ ...
  • Share this:

ಲಕ್ನೋ : ಉತ್ತರ ಪ್ರದೇಶದ (Uttar Pradesh)ಅಮ್ರೋಹದಲ್ಲಿ ಕಾನೂನು (Law) ವಿದ್ಯಾರ್ಥಿಯೊಬ್ಬನ (Student) ಮೇಲೆ ಪಿಟ್​ಬುಲ್​ ನಾಯಿ (Pit bull Dog) ದಾಳಿ ಮಾಡಿದ್ದು, ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದೆ. ಫೆಬ್ರವರಿ 28 ರಂದು ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಯಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ನಾಯಿ ಮಾಲೀಕನಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ ನಾಯಿಯನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


ಮಾಲೀಕರಿಗೆ ಎಚ್ಚರಿಕೆ


ಇತ್ತೀಚೆಗೆ ನಾಯಿಗಳ ದಾಳಿಗೆ ಬಲಿಯಾದವರ ಬಗ್ಗೆ ದೇಶಾದ್ಯಂತ ಅನೇಕ ಘೋರ ಘಟನೆಗಳು ಸಂಭವಿಸುತ್ತಿರುವುದನ್ನು ಪರಿಗಣಿಸಿ, ಇಂತಹ ಘಟನೆ ತಡೆಗಟ್ಟಲು ನಾಯಿಗಳ ಮಾಲೀಕರನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ನಾಯಿ ಮಾಲೀಕರ ವಿರುದ್ಧದ ದೂರನ್ನು ಅಮ್ರೋಹಾ ಪುರಸಭೆಯ ಅಧಿಕಾರಿಗಳಿಗೆ ವರ್ಗಾಯಿಸಿದ್ದು, ಅವರು ತಕ್ಷಣ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.


ನಾಯಿ ಕಚ್ಚಿದರೆ ಮಾಲೀಕರೆ ಹೊಣೆ


ಇದೇ ರೀತಿ ಎರಡು ದಿನಗಳ ಹಿಂದೆ ಕೂಡ ನಾಯಿಯೊಂದು ವಿದ್ಯಾರ್ಥಿಯೊಬ್ಬನಿಗೆ ಕಚ್ಚಿದೆ . ನಾಯಿ ಕಚ್ಚಿದ ಘಟನೆಯ ಹೊಣೆಗಾರಿಕೆಯನ್ನು ನಾಯಿಯ ಮಾಲೀಕರೇ ತೆಗೆದುಕೊಳ್ಳಬೇಕು. ಅಲ್ಲದೆ 5 ಸಾವಿರ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ, ನಾಯಿ ಮಾಲೀಕರು ತಮ್ಮ ನಾಯಿಗಳನ್ನು ನಿಯಂತ್ರಿಸುವ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಅಧಿಕಾರಿ ಎಚ್ಚರಿಸಿದ್ದಾರೆ.


ಇದನ್ನೂ ಓದಿ: Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!


ದಂಡ ಪಾವತಿಸದಿದ್ದರೆ ನಾಯಿ ಜಪ್ತಿ


ಒಂದು ವೇಳೆ ನಾಯಿಯ ಮಾಲೀಕ ಪುರಸಭೆ ವಿಧಿಸಿರುವ ದಂಡವನ್ನು ಸಕಾಲದಲ್ಲಿ ಪಾವತಿಸದಿದ್ದಲ್ಲಿ ಕಾನೂನಿನ ಮೂಲಕ ಸೂಕ್ತ ಸೆಕ್ಷನ್‌ಗಳನ್ನು ಬಳಸಿಕೊಂಡು ನಾಯಿಯನ್ನು ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಹಲವು ಕಡೆ ಶಾಲಾ ಮಕ್ಕಳು ಪದೇ ಪದೆ ನಾಯಿ ದಾಳಿಗೆ ಒಳಗಾಗಿ ಸಾವನ್ನಪ್ಪುತ್ತಿರುವ ಘಟನೆ ಆತಂಕಕಾರಿಯಾಗಿದೆ. ಹಾಗಾಗಿ ನಾಯಿಗಳ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.



ನಾಯಿ ದಾಳಿಯಿಂದ ಬಾಲಕ ಸಾವು


ಕಳೆದ ತಿಂಗಳು ಹೈದರಾಬಾದ್‌ನ ಬಾಗ್ ಅಂಬರ್‌ಪೇಟ್‌ನಲ್ಲಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದ. ನಾಯಿಗಳು ಬಾಲಕನ ಮೇಲೆ ಕ್ರೌರ್ಯ ಮೆರೆಯುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಬರೇಲಿಯ ಸಿಬಿ ಗಂಜ್ ಪ್ರದೇಶದಲ್ಲಿ ಬೀದಿನಾಯಿಗಳು 3 ವರ್ಷದ ಬಾಲಕಿಯೊಬ್ಬಳನ್ನು ಕಚ್ಚಿ ಸಾಯಿಸಿದ್ದವು.


6 ವರ್ಷದ ಮಗುವಿನ ಮೇಲೆ ಪಿಟ್​ಬುಲ್ ದಾಳಿ


ಆರು ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ನಾಯಿ ಭೀಕರವಾಗಿ ದಾಳಿ ಮಾಡಿದ್ದು, ಬಾಲಕಿ ಮುಖಕ್ಕೆ 1 ಸಾವಿರ ಹೊಲಿಗೆ ಹಾಕಿರುವ ದಾರುಣ ಘಟನೆ ಕಳೆದ ವಾರ ಅಮೆರಿಕಾದ ಚೆಸ್ಟರ್‌ವಿಲ್ಲೆಯಲ್ಲಿ ನಡೆದಿತ್ತು. ಲಿಲಿ ಎಂಬ ಬಾಲಕಿ ಪಕ್ಕದ ಮನೆಯಲ್ಲಿ ಸ್ನೇಹಿತನೊಂದಿಗೆ ಆಟವಾಡುತ್ತಿದ್ದಾಗ ನಾಯಿ ದಾಳಿ ಮಾಡಿದೆ.


ಆ ಸಮಯದಲ್ಲಿ ಸ್ನೇಹಿತನ ತಾಯಿ ಪಿಟ್ ಬುಲ್ ನಾಯಿಯನ್ನು ನೋಡಿಕೊಳ್ಳುತ್ತಿದ್ದರು. ದಾಳಿಗೊಳಗಾದ ಬಾಲಕಿಯನ್ನು ತಕ್ಷಣವೇ ಪೋಷಕರು ಬೋಸ್ಟನ್‌ನಲ್ಲಿರುವ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಮುಖದ ಮೇಲೆ ಸುಮಾರು 1000 ಹೊಲಿಗೆ ಹಾಕಲಾಗಿದ್ದು, ಒಂದು ವಾರದ ವರೆಗೆ ಆಮ್ಲಜನಕ ವ್ಯವಸ್ಥೆಯೊಂದಿಗೆ ಆಕೆಗೆ ನಿದ್ರಾಜನಕ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


ಮಾತು ಕಳೆದುಕೊಂಡ ಮಗು


ಮಗು ಮೇಜಿನ ಬಳಿ ಕುಳಿತು ಆಟವಾಡುತ್ತಿದ್ದ ವೇಳೆ ನಾಯಿ ಏಕಾಏಕಿ ದಾಳಿ ಮಾಡಿತ್ತು. ದುರಾದೃಷ್ಟವೆಂದರೆ ಲಿಲಿಯ ಮುಖಕ್ಕೆ 1000 ಹೊಲಿಗೆ ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ, ಆಕೆ ಇನ್ಮುಂದೆ ಮಾತನಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಾಯಿ ದಾಳಿಯಿಂದ ಲಿಲಿಯ ಲಾಲಾರಸ ಗ್ರಂಥಿಗಳು ಕೆಲಸ ಮಾಡುತ್ತಿಲ್ಲ. ಸ್ನಾಯುಗಳು ತುಂಬಾ ಹಾನಿಗೊಳಗಾಗಿವೆ ಎಂದು ಲಿಲಿಯ ತಾಯಿ ಡೊರೊಥಿ ನಾರ್ಟನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Published by:Rajesha M B
First published: