ನಾಯಿಗಳು (Dogs) ಅಂದ್ರೆ ಕೆಲವರಿಗೆ ಪಂಚಪ್ರಾಣ. ಅದ್ರಲ್ಲೂ ತಮ್ಮ ನೆಚ್ಚಿನ ನಾಯಿಗಳನ್ನು ಸಾಕಲು ಅದೇ ಎಷ್ಟೇ ಕಷ್ಟ ಆದ್ರೂ, ಎಷ್ಟೇ ಕರ್ಚಾದ್ರೂ ಪ್ರೀತಿಯಿಂದ ಸಾಕುತ್ತಾರೆ. ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ವಿವಿಧ ತಳಿಯ ನಾಯಿಗಳನ್ನು ಸಾಕೋದು ಅಂದ್ರೆ ಕೆಲವರಿಗೆ ಹುಚ್ಚು. ವಿದೇಶಗಳಿಂದ ವಿವಿಧ ಜಾತಿಯ ನಾಯಿಗಳನ್ನು ಕೊಂಡು ಇಲ್ಲಿ ಸಾಕುತ್ತಾರೆ. ಆದ್ರೆ ಅದೇ ರೀತಿ ಸಾಕಿದ ನಾಯಿಗಳು ಬೇರೆಯವರಿಗೆ ತೊಂದರೆ ಕೊಡದಂತೆ ನೋಡಿಕೊಳ್ಳಬೇಕು. ಕಳೆದ ತಿಂಗಳು ಸಾಕಿದ ಪಿಟ್ಬುಲ್ ಡಾಗ್ ವೃದ್ಧೆಯನ್ನು ಕಚ್ಚಿ ಕೊಂದಿತ್ತು. ಆ ಪ್ರಕರಣ ಮಾಸುವ ಮುನ್ನವೇ, ಪಂಜಾಬ್ (Punjab)ನ ಗುರುದಾಸ್ಪುರದಲ್ಲಿ ಪಿಟ್ಬುಲ್ (Pit bull) ಡಾಗ್ (Dog) 13 ವರ್ಷದ (13 years) ಬಾಲಕ (Boy)ನ ಮೇಲೆ ದಾಳಿ (Attack) ಮಾಡಿದೆ. ದಾಳಿಯಲ್ಲಿ ಹುಡುಗನ ಕಿವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ದಾಳಿ
ಪಂಜಾಬ್ನ ಗುರುದಾಸ್ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ, 13 ವರ್ಷದ ಬಾಲಕ ತನ್ನ ತಂದೆಯ ಜೊತೆ ಬೈಕ್ನಲ್ಲಿ ಹೋಗುತ್ತಿದ್ದ. ತನ್ನ ಮಾಲೀಕರೊಂದಿಗೆ ಹೊರಗೆ ನಿಂತಿದ್ದ ಪಿಟ್ಬುಲ್ ನಾಯಿ ಹುಡುಗನನ್ನು ನೋಡಿ ಬೊಗಳಲು ಪ್ರಾರಂಭಿಸಿತಂತೆ. ಮಾಲೀಕರು ಆಕಸ್ಮಿಕವಾಗಿ ತನ್ನ ಕೈಯಲ್ಲಿ ಹಿಡಿದುಕೊಂಡ ನಾಯಿಯನ್ನು ಕೈ ಬಿಟ್ಟಿದ್ದಾರೆ. ಆಗ ನಾಯಿ ದಾಳಿ ಮಾಡಿ, ಹುಡುಗನ ಕಿವಿ ಕಚ್ಚಿ ಗಾಯಗೊಳಿಸಿದೆ.
ಬಾಲಕನ ಪ್ರಾಣ ಉಳಿಸಿದ ತಂದೆ
ಬೈಕ್ನಲ್ಲಿ ಹೋಗುತ್ತಿದ್ದಾಗ, ತಂದೆಯ ಹಿಂದೆ ಕೂತಿದ್ದ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ ಮಾಡಿದೆ. ತಕ್ಷಣವೇ ಬೈಕ್ ನಿಲ್ಲಿಸಿದ ತಂದೆ, ನಾಯಿಯನ್ನು ತಡೆಯಲು ಯತ್ನಿಸಿದ್ರು. ಆದ್ರೂ ತೀವ್ರವಾಗಿ ದಾಳಿ ಮಾಡಿ ಕಿವಿ ಕಚ್ಚಿದೆ. ತಂದೆ ಇದ್ದದ್ದಕ್ಕೆ ಆತನ ಪ್ರಾಣ ಉಳಿದಿದೆ ಎಂದು ಘಟನೆ ನೋಡಿದರು ಹೇಳಿದ್ದಾರೆ.
ಇದನ್ನೂ ಓದಿ: Cockroach In Food: ಆಹಾರದಲ್ಲಿ ಜಿರಳೆ! ಅದು ಈರುಳ್ಳಿ ತಿನ್ನಪ್ಪಾ ಎಂದ ರೆಸ್ಟೋರೆಂಟ್ ಸಿಬ್ಬಂದಿ
ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ನಾಯಿ ಕಡಿತದಿಂದ 13 ವರ್ಷದ ಬಾಲಕನ ಕಿವಿ ಗಂಭೀರವಾಗಿ ಗಾಯಗೊಂಡಿದೆ. ಮಗುವನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
15 ದಿನಗಳ ಹಿಂದೆ ಪಿಟ್ಬುಲ್ ನಾಯಿ ಕಡಿದು ವೃದ್ಧೆ ಸಾವು
ಕಳೆದ 15 ದಿನಗಳ ಹಿಂದೆ ಉತ್ತರ ಪ್ರದೇಶದ ಲಖನೌದ ಕೈಸರ್ ಬಾಗ್ ಪ್ರದೇಶದಲ್ಲಿ ಮಗ ಸಾಕಿದ ಪಿಟ್ಬುಲ್ ನಾಯಿ ಕಚ್ಚಿ ತಾಯಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಹೀಗೆ ಮಗ ಸಾಕಿದ ಪಿಟ್ಬುಲ್ ನಾಯಿಯಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದ ತಾಯಿಯನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿತ್ತು. ಈಕೆಯ ಮಗ ಅಮಿತ್ ಜಿಮ್ ಟ್ರೇನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಈತನಿಗೆ ನಾಯಿಗಳೆಂದರೆ ಪ್ರಾಣ. ಆದ ಕಾರಣ ಮನೆಯಲ್ಲಿ ಪಿಟ್ಬುಲ್ ಮತ್ತು ಲ್ಯಾಬ್ರಡಾರ್ ಎಂಬ ಎರಡು ನಾಯಿಗಳನ್ನು ಸಾಕಿದ್ದನು. ಪಿಟ್ಬುಲ್ ನಾಯಿಗೆ ಬ್ರೌನಿ ಎಂದು ಹೆಸರಿಟ್ಟಿದ್ದರು. ಮಗ ಎಂದಿನಿಂತೆ ಜಿಮ್ ತರಬೇತಿ ನೀಡಲು ಹೋಗಿದ್ದ. ತಾಯಿ ಸುಶೀಲಾ ತ್ರಿಪಾಠಿ ಮೇಲೆ ಬ್ರೌನಿ ಅಟ್ಯಾಕ್ ಮಾಡಿದೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ರೂ ಆಗದೇ ಸಾವನ್ನಪ್ಪಿದ್ದಳು.
ಇದನ್ನೂ ಓದಿ: Pitbull Dog: ಮಗ ಸಾಕಿದ ಪಿಟ್ಬುಲ್ ನಾಯಿ 82 ವರ್ಷದ ಅಮ್ಮನನ್ನೇ ಕಚ್ಚಿ ಕೊಂದಿತು!
ಯಾವ ವಯಸ್ಸಿನಲ್ಲಿ ಪಿಟ್ಬುಲ್ ಗಳು ಆಕ್ರಮಣಕಾರಿ ಆಗುತ್ತವೆ?
ಪಿಟ್ ಬುಲ್ಸ್ ಸಾಮಾನ್ಯವಾಗಿ 8 ತಿಂಗಳ ಮತ್ತು 2 ವರ್ಷಗಳ ನಡುವಿನ ಅಂತರದಲ್ಲಿ ಆಕ್ರಮಣಕಾರಿಯಾಗುತ್ತವೆ. ಆ ಸಮಯದಲ್ಲಿ ನಾಯಿ ಆಕ್ರಮಣ ಶೀಲತೆಯ ಚಿಹ್ನೆಗಳನ್ನು ಅಭಿವೃದ್ಧಿ ಹೊಂದುತ್ತಾ ಇರುತ್ತವೆ. ಆದರೂ ಇದು ಯಾವುದೇ ವಯಸ್ಸಿನಲ್ಲಿ ಬೆಳವಣಿಗೆಯಾಗಬಹುದು ಮತ್ತು ಕ್ರಮೇಣ ಅಥವಾ ಇದ್ದಕ್ಕಿದ್ದಂತೆ ಆಕ್ರಮಣಕಾರಿ ಆಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ