ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದ ಪಿಂಕ್​ ಸಿಟಿ 'ಜೈಪುರ'

ಯುನೆಸ್ಕೋದ ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಜೈಪುರದ ಆತಿಥ್ಯ ಈಗಾಗಲೇ ಎಲ್ಲರ ಮನಸೆಳೆದಿದೆ. ಈಗ ಯುನೆಸ್ಕೋ ಪಟ್ಟಿಗೆ ಸೇರುತ್ತಿರುವುದು ಸಂತಸ ತಂದಿದೆ ಎಂದು ಟ್ವೀಟ್​ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಜೈಪುರದ ಹವಾ ಮಹಲ್​

ಜೈಪುರದ ಹವಾ ಮಹಲ್​

  • News18
  • Last Updated :
  • Share this:
ನವದೆಹಲಿ (ಜು.06): ಅರಮನೆಗಳ ನಗರಿ, ಪಿಂಕ್​ ಸಿಟಿ ಎಂದೇ ಹೆಸರಾಗಿರುವ ರಾಜಸ್ಥಾನದ ರಾಜಧಾನಿ ಜೈಪುರ ಯುನೆಸ್ಕೋದ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡನೆಯಾಗಿದೆ.

ತನ್ನ ಅದ್ಭುತ ಶಿಲ್ಪಕಲೆ ವಿನ್ಯಾಸದ ಮೂಲಕ ಹೆಸರು ಮಾಡಿದ್ದ ಜೈಪುರದ ಅರಮನೆಗಳು  ಹಲವರ ಮೆಚ್ಚುಗೆ ಗಳಿಸಿದ ತಾಣ ಕೂಡ. ಇದನ್ನು ವಿಶ್ವ ಪರಂಪರೆ ಪಟ್ಟೆಗೆ ಸೇರಿಸುವ ಬಗ್ಗೆ ಈ ಹಿಂದೆ ನಡೆದ 43ನೇ ಸಭೆಯಲ್ಲಿ ಯುನೆಸ್ಕೋ ನಿರ್ಧಾರ ಮಾಡಿತ್ತು.ಈ ಕುರಿತು ಇಂದು ಅಧಿಕೃತವಾಗಿ ಟ್ವೀಟ್​ ಮಾಡಿರುವ ಯುನೆಸ್ಕೋ ಜೈಪುರವನ್ನು ಜುಲೈ 6ರಂದು ಭಾನುವಾರದಿಂದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುತ್ತಿರುವ ಬಗ್ಗೆ ತಿಳಿಸಿದೆ.

 ಯುನೆಸ್ಕೋದ ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಜೈಪುರದ ಆತಿಥ್ಯ ಈಗಾಗಲೇ ಎಲ್ಲರ ಮನಸೆಳೆದಿದೆ. ಈಗ ಯುನೆಸ್ಕೋ ಪಟ್ಟಿಗೆ ಸೇರುತ್ತಿರುವುದು ಸಂತಸ ತಂದಿದೆ ಎಂದು ಟ್ವೀಟ್​ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಅಮ್ಮ ಊಟ ಮಾಡಲಿ ಎಂದು ಚೈನು ಎಳೆದು ಶತಾಬ್ದಿ ರೈಲನ್ನೇ ನಿಲ್ಲಿಸಿದ ಮಗ

ಪ್ರಾಚೀನ ಹಿಂದು ಹಾಗೂ ಆಧುನಿಕ ಮೊಘಲ್​, ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಈ ನಗರದ ಕಟ್ಟಡಗಳು ಒಳಗೊಂಡಿವೆ.

ಜೈಪುರ ಹೊರತಾಗಿ ಬಹ್ರೇನ್​ನ ದಿಲ್ಮುನ್​ ಬುರಿಯಲ್​ ಮೌಂಡ್ಸ್​, ಆಸ್ಟ್ರೇಲಿಯಾದ ಬುದ್ಜ್ ಬಿಮ್​, ಚೀನಾದ ಲಿಯಾಂಗ್ಜ್​, ಇಂಡೋನೇಷ್ಯಾದ ಸಾವಾಲುಂಟೊದ ಒಂಬಿಲಿನ್​ ಕಲ್ಲಿದ್ದಲು ಗಣಿ, ಪ್ರಾಚೀನ ಜಪಾನ್​ ದಿಬ್ಬದ ಘೋರಿ, ಲಾವೋಸ್​ನ ಕ್ಸಿಯಾಂಗ್​ಖೌಂಗ್​ನ ಮೆಗಾಲಿಥಿಕ್​ ಜಾರ್​ ಸೈಟ್​​ಗಳು ಕೂಡ ಈ ಪಟ್ಟಿಗೆ ಸೇರ್ಪಡನೆಯಾಗಿದೆ.

First published: