ಹೈದರಾಬಾದ್ ಎನ್​ಕೌಂಟರ್ ಪ್ರಕರಣ: ತನಿಖೆಗೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಎರಡು ಅರ್ಜಿ

ಇದೊಂದು ನಕಲಿ ಎನ್​ಕೌಂಟರ್ ಆಗಿದೆ. ಒಬ್ಬ ವ್ಯಕ್ತಿಯ ಅಪರಾಧ ಸಾಬೀತಾಗುವವರೆಗೂ ಆತ ಅಮಾಯಕ ಅಥವಾ ಶಂಕಿತ ಮಾತ್ರ ಆಗಿರುತ್ತಾನೆ. ಬದುಕಿನ ಹಕ್ಕು ನೀಡುವ ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಬೇಕು ಎಂದು ಪಿಐಎಲ್​ನಲ್ಲಿ ಒತ್ತಾಯಿಸಲಾಗಿದೆ.

Vijayasarthy SN | news18
Updated:December 8, 2019, 7:35 PM IST
ಹೈದರಾಬಾದ್ ಎನ್​ಕೌಂಟರ್ ಪ್ರಕರಣ: ತನಿಖೆಗೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಎರಡು ಅರ್ಜಿ
ಸುಪ್ರೀಂ ಕೋರ್ಟ್​.
  • News18
  • Last Updated: December 8, 2019, 7:35 PM IST
  • Share this:
ನವದೆಹಲಿ(ಡಿ. 08): ತೆಲಂಗಾಣದ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ವ್ಯಾಪಕ ಚರ್ಚೆಗೆ ಆಹ್ವಾನ ಕೊಟ್ಟಿರುವಂತೆಯೇ, ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆಗೈದ ಘಟನೆಯೂ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಎರಡೂ ಘಟನೆಗಳಿಗೆ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಕಾನೂನು ಪಾಲಿಸಬೇಕಾದರ ಪೊಲೀಸರೇ ಕಾನೂನು ಬಾಹಿರವಾಗಿ ಆರೋಪಿಗಳನ್ನು ಸಾಯಿಸಿರುವುದ ಸರಿಯಲ್ಲ ಎಂಬುದು ಕೆಲ ವರ್ಗಗಳಿಂದ ಕೇಳಿಬರುತ್ತಿರುವ ಆಕ್ಷೇಪ. ಇದರ ಬೆನ್ನಲ್ಲೇ ಈ ಎನ್​ಕೌಂಟರ್ ಘಟನೆ ಬಗ್ಗೆ ಸೂಕ್ತ ಸಂಸ್ಥೆಗಳಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಎರಡು ಪಿಐಎಲ್​ ಅರ್ಜಿಗಳು ಸಲ್ಲಿಕೆಯಾಗಿವೆ.

ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳ ಕಣ್ಗಾವಲಿನಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ನ್ಯಾಯವಾದಿ ಎಂಎಲ್ ಶರ್ಮಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಹಾಗೆಯೇ, ವಕೀಲರಾದ ಜಿ.ಎಸ್. ಮಣಿ ಮತ್ತು ಪ್ರದೀಪ್ ಕುಮಾರ್ ಯಾದವ್ ಅವರು ಸ್ವತಂತ್ರ ತನಿಖೆ ಆಗಬೇಕೆಂದು ಕೋರಿ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ಅತ್ಯಾಚಾರಿಗಳ ಎನ್​ಕೌಂಟರ್​ ಪ್ರಕರಣ; ಹತ್ಯೆಯ ಸಾಚಾತನದ ಕುರಿತು ಇಂದಿನಿಂದಲೇ ತನಿಖೆ ಆರಂಭ

ಇದೊಂದು ನಕಲಿ ಎನ್​ಕೌಂಟರ್ ಆಗಿದೆ. ಒಬ್ಬ ವ್ಯಕ್ತಿಯ ಅಪರಾಧ ಸಾಬೀತಾಗುವವರೆಗೂ ಆತ ಅಮಾಯಕ ಅಥವಾ ಶಂಕಿತ ಮಾತ್ರ ಆಗಿರುತ್ತಾನೆ. ಬದುಕಿನ ಹಕ್ಕು ನೀಡುವ ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಬೇಕು ಎಂದು ಪಿಐಎಲ್​ನಲ್ಲಿ ಒತ್ತಾಯಿಸಲಾಗಿದೆ.

ಈ ಪ್ರಕರಣದಲ್ಲಿ ನಾಲ್ವರು ವ್ಯಕ್ತಿಗಳನ್ನು ಯಾವುದೇ ವಿಚಾರಣೆ ನಡೆಸದೆಯೇ ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ಅತ್ಯಾಚಾರ ಆರೋಪಿಗಳನ್ನು ನ್ಯಾಯಾಲಯದ ವಿಚಾರಣೆಗೆ ಒಳಪಡಿಸದೆಯೇ ಅವರನ್ನು ನಕಲಿ ಎನ್​ಕೌಂಟರ್ ಮಾಡಿ ಕೊಲ್ಲಲಾಗಿದೆ. ಪೊಲೀಸ್ ಆಯುಕ್ತರಂತಹ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆ ಕಾನೂನನ್ನ ಕೈಗೆ ತೆಗೆದುಕೊಂಡಿದ್ದ ದುರದೃಷ್ಟಕರ. ಯಾವುದೇ ಆರೋಪಿಗಳನ್ನು ಕಾನೂನು ಪ್ರಕ್ರಿಯೆ ಆಚೆ ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ಆರೋಪಿಗಳನ್ನು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ವಿಚಾರಣೆ ನಡೆಸಿದ ಬಳಿಕ ಅವರಿಗೆ ಶಿಕ್ಷೆ ವಿಧಿಸುವ ಅಧಿಕಾರ ಕೋರ್ಟ್​ಗೆ ಮಾತ್ರ ಇರುತ್ತದೆ. ಹೀಗಾಗಿ, ಎನ್​ಕೌಂಟರ್​ನಲ್ಲಿ ಭಾಗಿಯಾದ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಬಂಧಿಸಬೇಕು. ಎಸ್​ಐಟಿ ಅಥವಾ ಸಿಬಿಐನಿಂದ ತನಿಖೆ ನಡೆಸಿದ ಬಳಿಕ ಕಾನೂನು ಪ್ರಕಾರವಾಗಿ ಕ್ರಮ ಜರುಗಿಸಬೇಕು ಎಂದು ಪಿಐಎಲ್​ನಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾಚಾರ ನಡೆದ ಬಳಿಕ ಬಂದು ದೂರು ನೀಡು; ಪ್ರಕರಣ ದಾಖಲಿಸಲು ಬಂದ ಮಹಿಳೆಯೊಂದಿಗೆ ಪೊಲೀಸರ ವರ್ತನೆ

ಹಾಗೆಯೇ, ಪೊಲೀಸ್ ಎನ್​ಕೌಂಟರ್​ನಲ್ಲಿ ಹತ್ಯೆಯಾದ ನಾಲ್ವರು ಆರೋಪಿಗಳ ಕುಟುಂಬಗಳಿಗೆ ತಲಾ 20 ಲಕ್ಷ ಪರಿಹಾರ ನೀಡಬೇಕೆಂದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿಕೊಳ್ಳಲಾಗಿದೆ. ಈ ಎರಡು ಪಿಐಎಲ್​ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಅಥವಾ ಕೆಲ ದಿನಗಳಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ನಡೆದ ಕೆಲ ಗಂಟೆಗಳಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಅದಾಗಿ ಒಂದು ದಿನದ ಬಳಿಕ ಅಪರಾಧ ಸ್ಥಳದ ಮಹಜರು ಮಾಡುವ ಸಂದರ್ಭದಲ್ಲಿ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರು. ಆರೋಪಿಗಳು ತಮ್ಮ ಮೇಲೆಯೇ ಹಲ್ಲೆಗೆ ಮುಂದಾಗಿ ತಪ್ಪಿಸಿಕೊಳ್ಳಲು ಹೋದಾಗ ಆತ್ಮರಕ್ಷಣೆಗೆ ಗುಂಡು ಹೊಡೆದು ಸಾಯಿಸಬೇಕಾಯಿತು ಎಂಬುದು ಸೈಬರಾಬಾದ್ ಪೊಲೀಸರ ವಾದವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading