ಭಾರತಕ್ಕೆ 200 ಆಕ್ಸಿಜನ್ ಸಿಲಿಂಡರ್ ನೀಡಿದ ಭಾರತೀಯ ಸಂಜಾತ ಪೈಲಟ್‌ಗೆ ಯುಕೆಯಲ್ಲಿ ‘ಪಾಯಿಂಟ್ಸ್ ಆಫ್ ಲೈಟ್’ ಗೌರವ

ಇವರ ಕುರಿತು ವರ್ಜಿನಾಂಟ್ಲಿಕ್, ಒಬ್ಬ ಅದ್ಭುತ ಪೈಲಟ್‍ವೊಬ್ಬರು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಂದ ಪಾಯಿಂಟ್ಸ್ ಆಫ್ ಲೈಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತ ಎದುರಿಸುತ್ತಿರುವ ದುಷ್ಪರಿಣಾಮ ಮನಗೊಂಡು ನೂರಾರು ಸಿಲಿಂಡರ್‌ಗಳನ್ನು ಭಾರತಕ್ಕೆ ಒದಗಿಸಿದ್ದಾರೆ. ನಿಜವಾಗಿಯೂ ಇವರ ಸೇವೆಯನ್ನು ನೋಡಿ ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ.

ಪೈಲಟ್ ಜಸ್ಪಾಲ್ ಸಿಂಗ್

ಪೈಲಟ್ ಜಸ್ಪಾಲ್ ಸಿಂಗ್

 • Share this:
  ಭಾರತೀಯ ಸಂಜಾತ ಮತ್ತು ಖಾಲ್ಸಾದ ಪೈಲಟ್ ಜಸ್ಪಾಲ್ ಸಿಂಗ್ ಅವರಿಗೆ ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಪಾಯಿಂಟ್ಸ್ ಆಫ್ ಲೈಟ್ ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ಕೋವಿಡ್‌ನಿಂದ ನಲುಗುತ್ತಿರುವ ಭಾರತಕ್ಕೆ ಸಿಂಗ್ ಅವರು ಸ್ವಯಪ್ರೇರಿತವಾಗಿ ಸುಮಾರು 200 ಆಕ್ಸಿಜನ್ ಸಿಲಿಂಡರ್‌ಗಳನ್ನು ಭಾರತಕ್ಕೆ ನೀಡಿದ್ದಾರೆ. ಈ ಬಗ್ಗೆ ಜಸ್ಪಾಲ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ವೈಯಕ್ತಿಕವಾಗಿ ಬರೆದ ಪತ್ರದಲ್ಲಿ, ‘ಕೊರೋನಾದಿಂದ ತೀರಾ ಕೆಟ್ಟ ಪರಿಸ್ಥತಿ ಎದುರಿಸುತ್ತಿರುವ ಭಾರತಕ್ಕೆ ನೀವು ನೀಡಿರುವ ಅಗಾಧದ ಸೇವೆ ಸ್ಫೂರ್ತಿಯಾಗಿದೆ. ನಾವು ಕೂಡ ಭಾರತಕ್ಕೆ ಸಹಾಯ ಹಸ್ತ ಚಾಚುತ್ತೇವೆ. ಭಾರತ ಮತ್ತು ಯುಕೆ ನಡುವಿನ ಪ್ರಜಾತಾಂತ್ರಿಕ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  ಭಾರತ ಎದುರಿಸುತ್ತಿರುವ ಕೋವಿಡ್‍ನ ಮಾರಕ ಪರಿಣಾಮಗಳನ್ನು ನೋಡಿದ ಸಿಂಗ್, ಭಾರತಕ್ಕೆ ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡುವುದರ ಮೂಲಕ ಈ ಭೀಕರತೆಯನ್ನು ಕೊಂಚವಾದರೂ ಕಡಿಮೆ ಮಾಡಬಹುದೇ ಎಂದು ಯೋಚಿಸಿದೆ. ವಿನಾಶಕಾರಿ ಹಾದಿಯನ್ನು ನನ್ನ ಶಕ್ತಿಯ ಪರಿಮಿತಿಯೊಳಗೆ ಭಾರತಕ್ಕೆ ಏನಾದರೂ ಸಹಾಯ ಮಾಡಲು ಮುಂದಾದೆ ಎಂದು ಹೇಳಿಕೆ ನೀಡಿದ್ದಾರೆ.

  ಕೋವಿನ್‌ ಪೋರ್ಟಲ್‌ನಲ್ಲಿ ಕೋವಿಡ್-19 ಲಸಿಕೆ ಸ್ಲಾಟ್‌, ಒಟಿಪಿ ವಿಳಂಬ; ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ ಹಾವಳಿ..!

  ಇವರ ಕುರಿತು ವರ್ಜಿನಾಂಟ್ಲಿಕ್, ಒಬ್ಬ ಅದ್ಭುತ ಪೈಲಟ್‍ವೊಬ್ಬರು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಂದ ಪಾಯಿಂಟ್ಸ್ ಆಫ್ ಲೈಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತ ಎದುರಿಸುತ್ತಿರುವ ದುಷ್ಪರಿಣಾಮ ಮನಗೊಂಡು ನೂರಾರು ಸಿಲಿಂಡರ್‌ಗಳನ್ನು ಭಾರತಕ್ಕೆ ಒದಗಿಸಿದ್ದಾರೆ. ನಿಜವಾಗಿಯೂ ಇವರ ಸೇವೆಯನ್ನು ನೋಡಿ ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ.

  ವಿಪತ್ತುಗಳು, ಘರ್ಷಣೆಗಳು ಮತ್ತು ಇತರ ದುರಂತ ಘಟನೆಗಳಿಗೆ ಬಲಿಯಾದವರಿಗೆ ಪರಿಹಾರ ನೆರವು ನೀಡುವ ಸಲುವಾಗಿ ಕೆಲಸ ಮಾಡುವ 'ಖಲ್ಸಾ ಏಡ್ ಇಂಟರ್‍ನ್ಯಾಷನಲ್'ಗೆ ಆಮ್ಲಜನಕ ಸಾಂದ್ರೀಕರಣ ಯಂತ್ರಗಳನ್ನು ದಾನ ಮಾಡುವಲ್ಲಿ ಔದಾರ್ಯ ತೋರಿದ ಬ್ರಿಟನ್‍ನ ಸಾರ್ವಜನಿಕರಿಗೆ ಜಸ್ಪಾಲ್ ಕೃತಜ್ಞತೆ ಸಲ್ಲಿಸಿದರು. ಖಲ್ಸಾ ಏಡ್ ಮತ್ತು ಅದರ ಸ್ವಯಂಸೇವಕರು ಸಾಂಕ್ರಾಮಿಕ ರೋಗದ ಸಮಯದಲ್ಲಿ ನೆರವಾಗಿದ್ದಾರೆ ಮತ್ತು ಪರಿಹಾರಕ್ಕಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆಯ ಮಾತನಾಡಿದರು.

  ಕೋವಿಡ್-19 ಸಾಂಕ್ರಾಮಿಕ ರೋಗದ ಮಾರಕ ಎರಡನೇ ಅಲೆಗೆ ಭಾರತ ಸಂಪೂರ್ಣವಾಗಿ ತಲ್ಲಣಿಸಿದೆ. ಪ್ರಕರಣಗಳಲ್ಲಿನ ಹಠಾತ್ ಹೆಚ್ಚಳ ಕಂಡ ಪರಿಣಾಮ ಇದರಿಂದ ದೇಶದ ವೈದ್ಯಕೀಯ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಹೊರೆ ಬೀರಿದೆ ಮತ್ತು ಇತರ ವೈದ್ಯಕೀಯ ಅವಶ್ಯಕತೆಗಳ ನಡುವೆ ಆಮ್ಲಜನಕದ ಪೂರೈಕೆಯ ಕೊರತೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

  ಬ್ಲೂಮ್‍ಬರ್ಗ್ ವರದಿಯ ಪ್ರಕಾರ, ಕೋವಿಡ್-19 ಎರಡನೇ ಅಲೆಯಲ್ಲಿ ಭಾರತದ ವೈದ್ಯಕೀಯ ಸೌಲಭ್ಯಗಳಲ್ಲಿ ಆಮ್ಲಜನಕದ ಅವಶ್ಯಕತೆಯೇ ಸುಮಾರು 10ಪಟ್ಟು ಹೆಚ್ಚಾಗಿದೆ. ಭಾರತದ ದುಷ್ಟ ಪರಿಸ್ಥಿತಿ ಅರಿತ ಯುಕೆ, ಯುಎಸ್‍ಎ ಕೆನಡಾ ಮುಂತಾದ ವಿಶ್ವದಾದ್ಯಂತ ಅನೇಕ ದೇಶಗಳು ಭಾರತಕ್ಕೆ ಆಮ್ಲಜನಕ, ವೈದ್ಯಕೀಯ ಪೂರೈಕೆ ಮತ್ತು ಇತರ ಪರಿಹಾರ ಸಾಮಗ್ರಿಗಳ ಸಹಾಯ ಮಾಡಲು ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದು ಹೇಳಿದೆ. ಇನ್ನು ಮೇ 13ರ ಸುಮಾರಿಗೆ ಭಾರತದಲ್ಲಿ ಕೋವಿಡ್ 3.43 ಲಕ್ಷ ಪ್ರಕರಣಗಳು ದಾಖಲಾಗಿವೆ. 4000 ಮಂದಿ ಮೃತಪಟ್ಟಿದ್ದಾರೆ.
  Published by:Latha CG
  First published: