ವಿಮಾನಕ್ಕೆ ಹಕ್ಕಿಗಳ ಹಿಂಡು ಡಿಕ್ಕಿ; ಜೋಳದ ಹೊಲದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಿ 233 ಜನರ ಪ್ರಾಣ ಉಳಿಸಿದ ಪೈಲಟ್

2009ರಲ್ಲಿ ಅಮೆರಿಕ ವಿಮಾನವೊಂದು ಇದೇ ರೀತಿಯಾಗಿ ಲ್ಯಾಂಡ್​ ಮಾಡಲಾಗಿತ್ತು. ಅಮೆರಿಕದ 1549 ವಿಮಾನಕ್ಕೆ ಗೀಸ್​ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆದಿದ್ದರಿಂದ ತಾಂತ್ರಿಕ ಸಮಸ್ಯೆಗೆ ಈಡಾದ ವಿಮಾನವನ್ನು ಹುಡ್ಸನ್​ ನದಿಯ ಮೇಲೆ ಲ್ಯಾಂಡಿಂಗ್​ ಮಾಡಲಾಗಿತ್ತು.

HR Ramesh | news18
Updated:August 15, 2019, 4:43 PM IST
ವಿಮಾನಕ್ಕೆ ಹಕ್ಕಿಗಳ ಹಿಂಡು ಡಿಕ್ಕಿ; ಜೋಳದ ಹೊಲದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಿ 233 ಜನರ ಪ್ರಾಣ ಉಳಿಸಿದ ಪೈಲಟ್
ಜೋಳದ ಹೊಲದಲ್ಲಿ ವಿಮಾನ ಲ್ಯಾಂಡ್​ ಮಾಡಿರುವುದು
  • News18
  • Last Updated: August 15, 2019, 4:43 PM IST
  • Share this:
ಮಾಸ್ಕೋ: ರಷ್ಯಾ ಮಾಸ್ಕೋ ವಿಮಾನ ನಿಲ್ದಾಣದಲ್ಲಿ 233 ಪ್ರಯಾಣಿಕರನ್ನು ಹೊತ್ತು ಟೇಕ್​ ಆಫ್​ ವಿಮಾನಕ್ಕೆ ಕೆಲವೇ ಕ್ಷಣಗಳಲ್ಲಿ ಹಕ್ಕಿಗಳ ಹಿಂಡು ಡಿಕ್ಕಿಯಾದ ಪರಿಣಾಮ ತಾಂತ್ರಿಕ ಸಮಸ್ಯೆಗೆ ಈಡಾಡ ವಿಮಾನವನ್ನು ಮಾಸ್ಕೋ ಹೊರವಲಯದ ಜೋಳದ ಹೊಲದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. 

ಘಟನೆಯಲ್ಲಿ 23 ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಉರಲ್​ ಏರ್​ಲೈನ್ಸ್​ 321 ವಿಮಾನ ಹಾರಿದ ಕೇವಲ ಹೊತ್ತಿನಲ್ಲಿ ಗುಲ್ಸ್​ ಹಕ್ಕಿಗಳ ಹಿಂಡು ವಿಮಾನದ ರೆಕ್ಕೆಗೆ ಡಿಕ್ಕಿ ಹೊಡೆದಿವೆ. ಇದರಿಂದ ಎಂಜಿನ್​ ಸಮಸ್ಯೆಗೆ ಈಡಾಗಿದೆ ಎಂದು ತಿಳಿದುಬಂದಿದೆ.

ವಿಮಾನ ತಾಂತ್ರಿಕ ಸಮಸ್ಯೆಗೆ ಗುರಿಯಾದಾಗ ವಿಮಾನವನ್ನು ಸುಮಾರು ಒಂದು ಕಿ.ಮೀ. ಕೆಳಮಟ್ಟದಲ್ಲಿ ಚಲಾಯಿಸಿ, ಜೋಳದ ಹೊಲದಲ್ಲಿ ಯಶಸ್ವಿಯಾಗಿ ಇಳಿಸಿರುವ ಪೈಲಟ್​ ನನ್ನು ಅಲ್ಲಿನ ಮಾಧ್ಯಮಗಳು ಹಿರೋ ಎಂದು ಬಿಂಬಿಸಿವೆ. ಅಲ್ಲದೇ, ಘಟನೆಯಲ್ಲಿ ಒಬ್ಬರಿಗೆ ತೀವ್ರ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ವರದಿಯಾಗಿದೆ.

2009ರಲ್ಲಿ ಅಮೆರಿಕ ವಿಮಾನವೊಂದು ಇದೇ ರೀತಿಯಾಗಿ ಲ್ಯಾಂಡ್​ ಮಾಡಲಾಗಿತ್ತು. ಅಮೆರಿಕದ 1549 ವಿಮಾನಕ್ಕೆ ಗೀಸ್​ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆದಿದ್ದರಿಂದ ತಾಂತ್ರಿಕ ಸಮಸ್ಯೆಗೆ ಈಡಾದ ವಿಮಾನವನ್ನು ಹುಡ್ಸನ್​ ನದಿಯ ಮೇಲೆ ಲ್ಯಾಂಡಿಂಗ್​ ಮಾಡಲಾಗಿತ್ತು.

ಇದನ್ನು ಓದಿ: ಮಂಗಳೂರಿನಲ್ಲಿ ಭಾರೀ ಅನಾಹುತದಿಂದ ತಪ್ಪಿದ ವಿಮಾನ; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು ​

ಸ್ಥಳೀಯ ಮಾಧ್ಯಮವೊಂದು ಪ್ರಯಾಣಿಕರೊಬ್ಬರ ಸಂದರ್ಶನ ಮಾಡಿದ್ದು, ಅದರಲ್ಲಿ ಅವರು, ವಿಮಾನ ಟೇಕ್​ ಆಫ್​ ಆದ ಐದು ಸೆಕೆಂಡ್​ಗಳ ನಂತರ ವಿಮಾನದ ಬಲಭಾಗದ ದೀಪಗಳು ಉರಿದಂತೆ ಕಂಡುಬಂತು, ಆನಂತರ ಸುಟ್ಟವಾಸನೆ ಬರಲಾರಂಭಿಸಿತು. ತಕ್ಷಣವೇ ವಿಮಾನವನ್ನು ಲ್ಯಾಂಡ್​ ಮಾಡಲಾಯಿತು. ಆನಂತರ ನಾವು ಅಲ್ಲಿಂದ ಓಡಲಾರಂಭಿಸಿದೋ ಎಂದು ತಿಳಿಸಿದ್ದಾರೆ.

Loading...

First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...