ಆಕಸ್ಮಿಕವಾಗಿ ಹೈಜಾಕ್ ಅಲಾರಂ ಒತ್ತಿದ ಪೈಲಟ್​; ಬಳಿಕ ಆಗಿದ್ದೇನು?

ವಿಮಾನದಲ್ಲಿ 27 ಜನ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಅಲಾರಂ ಆನ್​ ಆದ ಕೂಡಲೇ ವಿಮಾನ ನಿಲ್ದಾಣಕ್ಕೆ ಡಚ್ ಪೊಲೀಸರು, ಆ್ಯಂಬುಲೆನ್ಸ್​​​ಗಳು ಧಾವಿಸಿದ್ದವು.

Latha CG | news18-kannada
Updated:November 7, 2019, 3:00 PM IST
ಆಕಸ್ಮಿಕವಾಗಿ ಹೈಜಾಕ್ ಅಲಾರಂ ಒತ್ತಿದ ಪೈಲಟ್​; ಬಳಿಕ ಆಗಿದ್ದೇನು?
ಡಚ್ ವಿಮಾನ ನಿಲ್ದಾಣ
  • Share this:
ದಿ ಹೇಗ್​(ನ.07):ಕೆಲವೊಮ್ಮೆ ಆಕಸ್ಮಿಕ ಘಟನೆಗಳಿಂದ ಅವಾಂತರಗಳು ಆಗುತ್ತವೆ. ಉದ್ದೇಶಪೂರ್ವಕವಾಗಿ ಮಾಡದಿದ್ದರೂ ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ದಿ ಹೇಗ್​ ನಗರದಲ್ಲೂ ಇಂತಹದ್ದೇ ಒಂದು ಘಟನೆ ಸಂಭವಿಸಿದೆ. ಆಮ್​ಸ್ಟರ್​​ಡ್ಯಾಂನ ಸ್ಚಿಫೋಲ್​​ ವಿಮಾನ ನಿಲ್ದಾಣದಲ್ಲಿ ಪೈಲಟ್​​ ಆಕಸ್ಮಿಕವಾಗಿ ಹೈಜಾಕ್​ ಅಲಾರಂನ್ನು ಒತ್ತಿದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಆತಂಕಗೊಂಡ ಡಚ್​ ಪೊಲೀಸರು ವಿಮಾನ ನಿಲ್ದಾಣದಲ್ಲಿ ತೀವ್ರ ಭದ್ರತಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು.

ಈ ಆಕಸ್ಮಿಕ ಘಟನೆಗೆ ಸ್ಪ್ಯಾನಿಷ್​​ ಏರ್​​ಲೈನ್​​ ಏರ್​ ಯುರೋಪ್​ ಕ್ಷಮಾಪಣೆ ಕೋರಿದೆ. ವಿಮಾನವು ಡಚ್​ನಿಂದ ಮ್ಯಾಡ್ರಿಡ್​ಗೆ ಹಾರಾಟ ನಡೆಸಬೇಕಿತ್ತು. ಈ ವೇಳೆ ಪೈಲಟ್​ ಆಕಸ್ಮಿವಾಗಿ ಹೈಜಾಕ್​ ಅಲಾರಂನ್ನು ಒತ್ತಿದ್ದಾರೆ. ಕೂಡಲೇ ವಿಮಾನಯಾನ ಅಧಿಕಾರಿಗಳಿಗೆ ಸಂದೇಶ ರವಾನೆಯಾಗಿದೆ. ತಕ್ಷಣ ತುರ್ತು ವಾಹನಗಳು ವಿಮಾನದ ಸುತ್ತಲೂ ಸುತ್ತುವರೆದಿದ್ದವು.

ಸುಂದರ ಯುವತಿಯ ಆಸೆ ಈಡೇರಿಸಿದ್ದಕ್ಕೆ ಸಸ್ಪೆಂಡ್ ಆದ ಪೈಲಟ್

"ಇದು ತಪ್ಪು ಎಚ್ಚರಿಕೆ. ಮಧ್ಯಾಹ್ನ ಆಮ್ಸ್ಟರ್‌ಡ್ಯಾಮ್-ಮ್ಯಾಡ್ರಿಡ್ ವಿಮಾನದಲ್ಲಿ ಅಲಾರಂನ್ನು ಆಕಸ್ಮಿಕವಾಗಿ ಸಕ್ರಿಯಗೊಳಿಸಲಾಗಿದೆ. ಪೈಲಟ್‌ನ ಅಚಾತುರ್ಯದಿಂದ ಈ ಪ್ರಮಾದವಾಗಿದೆ. ಇಂದು ವಿಮಾನ ನಿಲ್ದಾಣದಲ್ಲಿ ಅಪಹರಣಗಳ ಕುರಿತಾದ ನಿಯಮಗಳನ್ನು ಪ್ರಚೋದಿಸುತ್ತದೆ" ಎಂದು ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.

ಯಾವ ಅವಘಡವೂ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನವು ಕೆಲವೇ ಕ್ಷಣಗಳಲ್ಲಿ ಹಾರಾಟ ನಡೆಸಲಿದೆ. ಆಗಿರುವ ಅನಾನುಕೂಲಕ್ಕೆ ಡಚ್​​​ ರಾಯಲ್​ ಮಿಲಿಟರಿ ಪೊಲೀಸರ ಬಳಿ ನಾವು ಕ್ಷಮಾಪಣೆ ಕೇಳುತ್ತೇವೆ ಎಂದು ವಿಮಾನಯಾಮ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡೋಕೆ ಹೆಲ್ಮೆಟ್ ಹಾಕಲೇ ಬೇಕು!; ಯಾಕೆಂದು ತಿಳಿದರೆ ಆಶ್ಚರ್ಯ ಪಡುತ್ತೀರ...

ವಿಮಾನದಲ್ಲಿ 27 ಜನ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಅಲಾರಂ ಆನ್​ ಆದ ಕೂಡಲೇ ವಿಮಾನ ನಿಲ್ದಾಣಕ್ಕೆ ಡಚ್ ಪೊಲೀಸರು, ಆ್ಯಂಬುಲೆನ್ಸ್​​​ಗಳು ಧಾವಿಸಿದ್ದವು. ಎಲ್ಲೆಡೆ ಹೈ ಅಲರ್ಟ್​​ ಘೋಷಣೆ ಮಾಡಿ, ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು.
First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ