ಮುಂಬೈ (ಅಕ್ಟೋಬರ್ 27); ಮಹಾನಗರ ಮುಂಬೈನಲ್ಲಿ (Mumbai) ಇತ್ತೀಚೆಗೆ ಬಯಲಾಗಿರುವ ಡ್ರಗ್ಸ್ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ. ಬಾಲಿವುಡ್ ನಟ-ನಟಿಯರ (Bollywood Actres) ಹೆಸರೂ ಸಹ ಇದರಲ್ಲಿ ಥಳುಕು ಹಾಕಿಕೊಂಡಿದೆ. ಅದರಲ್ಲೂ ಮುಂಬೈನ ಕ್ರೂಸ್ ಶಿಪ್ (Cruise Ship) ಡ್ರಗ್ಸ್ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಪ್ರಕರಣದಲ್ಲಿ ಸತತವಾಗಿ ಎನ್ಸಿಬಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಸರ್ಕಾರದ ಸಚಿವ ನವಾಬ್ ಮಲಿಕ್ ಈ ಪ್ರಕರಣವೇ ನಕಲಿ ಎಂದು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡದಂತೆ ಸಚಿವ ನವಾಬ್ ಮಲಿಕ್ ವಿರುದ್ಧ ಮಂಗಳವಾರ ಬಾಂಬೆ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ಅರ್ಜಿ ಸಲ್ಲಿಸಿದವರು ಯಾರು?
ಅಂಧೇರಿ ನಿವಾಸಿ ಮೂಲದ ಉದ್ಯಮಿ ಮತ್ತು ಮೌಲಾನಾ ಕೌಸರ್ ಅಲಿ ಸಯ್ಯದ್ , ಬಾಂಬೆ ಹೈಕೋರ್ಟ್ನಲ್ಲಿ ಎನ್ಸಿಪಿ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ್ದಾರೆ. ಕ್ರೂಸ್ ಶಿಪ್ ಡ್ರಗ್ಸ್ ಕೇಸ್ನಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿ ನೀಡದಂತೆ ತಡೆಯಬೇಕೆಂದು ಒತ್ತಾಯಿಸಿದ್ದಾರೆ.
ಕೌಸರ್ ಅಲಿ ಸಯ್ಯದ್ ತಮ್ಮ ವಕೀಲ ಅಶೋಕ್ ಸರೋಗಿ ಅವರ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಲಯದ ನಿರ್ದೇಶಕ ಸಮೀರ್ ವಾಂಖೆಡೆ ಅವರು ಭ್ರಷ್ಟ ಅಧಿಕಾರಿಯಲ್ಲ. ಮುಂಬೈನಲ್ಲಿ ಮಾದಕ ದ್ರವ್ಯ ಹಾವಳಿಯನ್ನು ನಿಭಾಯಿಸುವಲ್ಲಿ ಅತ್ಯಂತ ಪರಿಣಾಮಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಚಿಬ ನವಾಬ್ ಮಲಿಕ್ ಅವರ ಟ್ವೀಟ್ಗಳು ಮತ್ತು ಹೇಳಿಕೆಗಳು, ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಅವರ ತಂಡದ ನೈತಿಕತೆಯನ್ನು ಕುಗ್ಗಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
PIL ನಲ್ಲಿ ಏನಿದೆ?
"ಸಮೀರ್ ವಾಂಖೆಡೆ ವಿರುದ್ಧ ಯಾವುದೇ ಆಧಾರ ಇದ್ದರೆ, ವಾಂಖೆಡೆ ಏನಾದರೂ ತಪ್ಪು ಮಾಡಿದ್ದರೆ, ಸಚಿವರಾಗಿರುವ ಮಲಿಕ್ ಅವರು ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ" ಎಂದು ಪಿಐಎಲ್ ಹೇಳಿದೆ.
ಎನ್ಸಿಬಿ ಏಜೆನ್ಸಿಯ ನೈತಿಕತೆಯನ್ನು ಕುಗ್ಗಿಸುವ ಉದ್ದೇಶದಿಂದ ಅಥವಾ ಇತರ ಯಾವುದೇ ತನಿಖಾ ಸಂಸ್ಥೆಯ ಅಧಿಕಾರಿಗಳ ಮೇಲೆ ಹೇಳಿಕೆಗಳು ನೀಡದಂತೆ ಮಲಿಕ್ಗೆ ನಿರ್ದೇಶನ ನೀಡುವಂತೆ ಪಿಐಎಲ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಆದರೆ, ಪಿಐಎಲ್ನ ವಿಚಾರಣೆಗೆ ಇನ್ನು ದಿನಾಂಕ ನಿಗದಿಯಾಗಿಲ್ಲ.
ಇದನ್ನೂ ಓದಿ: Single environment Act| ಏಕ ರೂಪ ಕಾಯ್ದೆ ಜಾರಿಗೊಳಿಸಲು 60 ಅಂಶಗಳಿರುವ ಕ್ರಿಯಾ ಯೋಜನೆ ಸಿದ್ಧಪಡಿಸಿದ ಕೇಂದ್ರ ಸರ್ಕಾರ!
ಮಂಗಳವಾರ (ಅ.26) ಸಮೀರ್ ವಾಂಖೆಡೆ ವಿರುದ್ಧ ಮತ್ತೊಂದು ಆರೋಪ ಮಾಡಿದ್ದ ನವಾಬ್ ಮಲಿಕ್, ವಾಂಖೆಡೆ 26 ಪ್ರಕರಣಗಳಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಏಜೆನ್ಸಿ ಉದ್ಯೋಗಿಯ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Viral Story: ಉದ್ಯಮಿಗೆ ಶಾಕ್ ಕೊಟ್ಟ ಪತ್ನಿ.. ಮನೆಯಲ್ಲಿಟ್ಟಿದ್ದ 47 ಲಕ್ಷ ತೆಗೆದುಕೊಂಡು ಆಟೋ ಚಾಲಕನೊಂದಿಗೆ ಪರಾರಿ!
"ಹೆಸರು ಹೇಳಲಿಚ್ಛಿಸದ NCB ಅಧಿಕಾರಿಯಿಂದ ನನಗೆ ಬಂದ ಪತ್ರದ ವಿಷಯಗಳು ಇಲ್ಲಿವೆ.
ಜವಾಬ್ದಾರಿಯುತ ನಾಗರಿಕನಾಗಿ ನಾನು ಈ ಪತ್ರವನ್ನು ಡಿಜಿ ನಾರ್ಕೋಟಿಕ್ಸ್ ಅವರಿಗೆ ರವಾನಿಸುತ್ತೇನೆ, ಈ ಪತ್ರವನ್ನು ಸಮೀರ್ ವಾಂಖೆಡೆ ವಿರುದ್ಧ ನಡೆಸುತ್ತಿರುವ ಆಂತರಿಕೆ ತನಿಖೆಯಲ್ಲಿ ಸೇರಿಸಲು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ. ಸಚಿವ ಮಲಿಕ್ ಪತ್ರಕ್ಕೆ ಪ್ರತಿಕ್ರಿಯಿಸಿರುವ ಎನ್ಸಿಬಿ ಉಪ ಮಹಾನಿರ್ದೇಶಕ ಮುತಾ ಅಶೋಕ್ ಜೈನ್, ಪತ್ರದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ