HOME » NEWS » National-international » PIGEON FACES DEATH PENALTY FOR TRAVELLING 13000 KILOMETRES YOU KNOW WHY VB

13,000 ಕಿ. ಮೀ ಸಂಚರಿಸಿ ಬಂದ ಪಾರಿವಾಳಕ್ಕೆ ಡೆತ್ ವಾರೆಂಟ್ ಹೊರಡಿಸಿದ ಸರ್ಕಾರ: ಯಾಕೆ ಗೊತ್ತಾ?

ಅಕ್ಟೋಬರ್ 29ರಂದು ಅಮೆರಿಕದಿಂದ ನಾಪತ್ತೆಯಾದ ಈ ಪಾರಿವಾಳ ಡಿಸೆಂಬರ್ 26ಕ್ಕೆ ಆಸ್ಟ್ರೇಲಿಯಾ ತಲುಪಿದೆ. ಕೆವಿನ್ ಸೆಲ್ಲಿ ಎಂಬವರು ಈ ಪಾರಿವಾಳವನ್ನು ಮೊದಲು  ಗಮನಿಸಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

news18-kannada
Updated:January 18, 2021, 9:21 AM IST
13,000 ಕಿ. ಮೀ ಸಂಚರಿಸಿ ಬಂದ ಪಾರಿವಾಳಕ್ಕೆ ಡೆತ್ ವಾರೆಂಟ್ ಹೊರಡಿಸಿದ ಸರ್ಕಾರ: ಯಾಕೆ ಗೊತ್ತಾ?
Pigeon
  • Share this:
ಒಂದಲ್ಲ ಎರಡಲ್ಲ .. ಬರೋಬರಿ 13 ಸಾವಿರ ಕಿಲೋ ಮೀಟರ್ ಹಾರಾಡಿ ಆಸ್ಟ್ರೇಲಿಯಾಕ್ಕೆ ಬಂದ ಪಾರಿವಾಳ ಇದೀಗ ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲಿದೆ. ಹೌದು, ಪೆಸಿಫಿಕ್ ಸಾಗರ ದಾಟಿ ಅಮೆರಿಕದಿಂದ ಆಸ್ಟ್ರೇಲಿಯಾಗೆ ರೇಸಿಂಗ್ ಪಾರಿವಾಳವೊಂದು ಆಗಮಿಸಿದ್ದು, ಇದಕ್ಕೆ ನಿಯೋಜಿತ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಚ್ಚರಿ ಎಂದರೆ ಕ್ವಾರಂಟೈನ್ ರಿಸ್ಕ್ ನಿಂದಾಗಿ ಈ ಪಾರಿವಾಳವನ್ನು ಹತ್ಯೆ ಮಾಡಲು ಇದೀಗ ಆಸ್ಟ್ರೇಲಿಯಾ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಅಮೆರಿಕದ ಒರೆಗಾನ್ ರಾಜ್ಯದಿಂದ ಅಕ್ಟೋಬರ್ 29 ರಂದು ಕಣ್ಮರೆಯಾಗಿದ್ದ ಈ ಪಾರಿವಾಳ ಡಿ.26 ರಂದು ಮೆಲ್ಬೋರ್ನ್ ನಲ್ಲಿ ಕಾಣಿಸಿಕೊಂಡಿದೆ. ಈ ಪಾರಿವಾಳ ಕಾರ್ಗೋ ಶಿಪ್​ನಲ್ಲಿ ಪೆಸಿಫಿಕ್ ಸಾಗರ ದಾಟಿ ಆಸ್ಟ್ರೇಲಿಯಾಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನೂ ಈ ಪಾರಿವಾಳ ಆಸ್ಟ್ರೇಲಿಯಾ ಮಾಧ್ಯಮಗಳ ಕುತೂಹಲಕ್ಕೆ ಕಾರಣವಾಗಿರುವುದಷ್ಟೇ ಅಲ್ಲದೇ ಕ್ವಾರಂಟೈನ್ ನ್ನು ಕಠಿಣವಾಗಿ ಪಾಲಿಸುತ್ತಿರುವ ಆಡಳಿತದ ಕಣ್ಣಿಗೂ ಬಿದ್ದಿದೆ. ಇದು ಅಮೆರಿಕದಿಂದ ಬಂದಿರುವ ಪಾರಿವಾಳ ಎಂಬುದು ಖಚಿತವಾಗಿದೆ.

ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬೆಂಗಳೂರಿನಿಂದ ಲಕ್ನೋಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್..!

ಅಕ್ಟೋಬರ್ 29ರಂದು ಅಮೆರಿಕದಿಂದ ನಾಪತ್ತೆಯಾದ ಈ ಪಾರಿವಾಳ ಡಿಸೆಂಬರ್ 26ಕ್ಕೆ ಆಸ್ಟ್ರೇಲಿಯಾ ತಲುಪಿದೆ. ಕೆವಿನ್ ಸೆಲ್ಲಿ ಎಂಬವರು ಈ ಪಾರಿವಾಳವನ್ನು ಮೊದಲು  ಗಮನಿಸಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪಾರಿವಾಳವನ್ನು ಇದುವೆರೆಗೆ ಸೆರೆ ಹಿಡಿಯಲಾಗಿಲ್ಲ. ಆಸ್ಟ್ರೇಲಿಯಾದಲ್ಲಿ ಹಕ್ಕಿಗಳ ಸಂರಕ್ಷಣೆ ಕುರಿತು ಕಠಿಣ ಕಾನೂನು ಜಾರಿಯಲ್ಲಿದೆ. ಈ ಪಾರಿವಾಳ ಹಕ್ಕಿ ಜ್ವರ ಹರಡಲಿದೆ ಎಂಬುದು ಆಸ್ಟ್ರೇಲಿಯಾದ ಪ್ರಾಣಿ ಸಂರಕ್ಷಣಾ ಇಲಾಖೆಯ ವಾದ.

ಪಾರಿವಾಳದಿಂದ ಆಸ್ಟ್ರೇಲಿಯಾದ  ಪ್ರಾಣಿ ಸಂಪತ್ತು ಅಪಾಯಕ್ಕೆ ಸಿಲುಕಲಿದೆ. ಈ ಪಕ್ಷಿಯನ್ನು ಕೊಲ್ಲುವುದೇ ಉತ್ತಮ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ ಎಂದು ವರದಿಯಾಗಿದೆ.
ಪಾರಿವಾಳವನ್ನು ಕಂಡಿದ್ದ ಸೆಲ್ಲಿ-ಬರ್ಡ್ ಈ ಬಗ್ಗೆ ಮಾತನಾಡಿದ್ದು,  ಅಧಿಕಾರಿಗಳು ಆ ಪಾರಿವಾಳವನ್ನು ಹಿಡಿಯುವಂತೆ ಕೇಳಿದ್ದಾರೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಪಾರಿವಾಳ ಒಕ್ಕೂಟದ ಕಾರ್ಯದರ್ಶಿ ಬ್ರಾಡ್ ಟರ್ನರ್, ಚೀನಾದ ರೇಸಿಂಗ್ ಪಾರಿವಾಳಗಳು ಆಸ್ಟ್ರೇಲಿಯಾಗೆ ವೆಸ್ಟ್ ಕೋಸ್ಟ್ ಕಾರ್ಗೋ ಶಿಪ್ ಗಳಲ್ಲಿ ಬಂದಿರುವ ಪ್ರಕರಣಗಳನ್ನು ಕೇಳಿದ್ದೇನೆ, 1931 ರಲ್ಲಿ ಪಾರಿವಾಳವೊಂದು ಫ್ರಾನ್ಸ್ ನಿಂದ ಪ್ರಾರಂಭಿಸಿ ವಿಯೆಟ್ನಾಮ್ ವರೆಗೂ ಪ್ರಯಾಣಿಸಿದ್ದು ಅತಿ ಹೆಚ್ಚಿನ ದೂರ ಪ್ರಯಾಣಿಸಿರುವ ದಾಖಲೆಯಾಗಿದೆ ಎಂದು ಹೇಳಿದ್ದಾರೆ.
Published by: Vinay Bhat
First published: January 18, 2021, 9:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories