ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿನ ಚಿತ್ರಣವೇ ಬದಲಾಗಿದೆ. ಸಾವಿರಾರು ಜನರು ದೇಶ ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ಪ್ರಜೆಗಳನ್ನು ತಾಯ್ನಾಡಿ ಮರಳಿ ಕರೆತರಲು ಏರ್ ಲಿಫ್ಟಿಂಗ್ ಮಾಡುತ್ತಿವೆ. ಅಲ್ಲಿನ ಜನರು ಭಯದ ನೆರಳಲ್ಲಿ ಬದುಕುತ್ತಿದ್ದಾರೆ. ಇನ್ನು ತಾಲಿಬಾನ್ ಜೊತೆ ಸರಿಯಾಗಿ ಹೋರಾಡದೇ, ಜನರನ್ನು ಬಿಟ್ಟು ಪಲಾಯನ ಮಾಡಿದ ಕಾರಣಕ್ಕೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮೇಲೆ ದೇಶದ ನಿವಾಸಿಗಳು ಕಿಡಿಕಾರಿದ್ದು, ದೇಶದಲ್ಲಿ ಸೇರಿದಂತೆ ಅಂತರಾಷ್ಟ್ರೀಯಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿವೆ. ಹಲವಾರು ಜನರು ಮಾಜಿ ಅಧ್ಯಕ್ಷರ ಈ ನಡೆಯನ್ನು ವಿರೋಧ ಮಾಡಿದ್ದಾರೆ.
ಸಧ್ಯ ಸಾಮಾಜಿಕ ಜಾಲಾತಾಣದಲ್ಲಿ ಮಾಜಿ ಅಧ್ಯಕ್ಷ ಘಾನಿ ವಿಮಾನದಲ್ಲಿ ಕುಳಿತುಕೊಂಡು ಕಿಟಕಿಯ ಮೂಲಕ ಹೊರಜಗತ್ತನ್ನು ನೋಡುತ್ತಿರುವ ಫೋಟೋ ವೈರಲ್ ಆಗಿದೆ. ಇನ್ನು ಫೋಟೋದಲ್ಲಿ ಅಫ್ಘಾನಿಸ್ತಾನದ ಮಾಜಿ ನಾಯಕ ತಾನೇ ಜನರನ್ನು ತಾಲಿಬಾನ್ ಅಡಿಯಲ್ಲಿ ಬಿಟ್ಟು ಪಾಲಾಯನ ಮಾಡುತ್ತಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೇ, ಪೋಸ್ಟ್ನಲ್ಲಿ ಅಫ್ಘಾನ್ ಅಧ್ಯಕ್ಷನು ತನ್ನ ದೇಶದಿಂದ ಪಲಾಯನ ಮಾಡುತ್ತಿದ್ದಾನೆ. ಆತನ ಜೊತೆ ವಿಮಾನದಲ್ಲಿ ಅಫ್ಘಾನರು ಯಾರೂ ಇಲ್ಲ ಎಂಬುದನ್ನ ಗಮನಿಸಿ. ಅವರ ಮುಂದಿನ ಕರಾಳ ಬದುಕನ್ನು ತಾಲಿಬಾನಿಗಳ ಜೊತೆ ಅನುಭವಿಸಿ ಎಂದು ತನ್ನ ಜನರ ಬಿಟ್ಟು ಹೊರಟಿದ್ದಾನೆ. ಅಲ್ಲದೇ, ಅಮೆರಿಕವು ತಮ್ಮ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಮಾತ್ರ ಸ್ಥಳಾಂತರಿಸಿದೆ. ಯಾವುದೇ ಅಫಘಾನ್ ಜನರನ್ನು ಮಾಡಿಲ್ಲ ಎಂದು ಬರೆಯಲಾಗಿದೆ.
ಆದರೆ ಈ ಫೋಟೋದ ಅಸಲಿಯತ್ತು ಬೇರೆಯದೆ ಇದೆ. ಈ ಫೊಟೋದ ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಜುಲೈ 2021ರಲ್ಲಿ ಘನಿ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದಾಗ ತೆಗೆದ ಚಿತ್ರವೆಂದು ತಿಳಿದುಬಂದಿದೆ. ಅಲ್ಲದೇ, ಈ ಸಮಯದಲ್ಲಿ ಬಾಗ್ರಾಮ್ ವಾಯುನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ತೆಗೆದ ಚಿತ್ರ ಎಂದು ಹೇಳಲಾಗಿದೆ.
ಇದನ್ನೂ ಓದಿ:
ಫ್ಘಾನಿಸ್ತಾನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆ, ಇಂದು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ
ಈ ವೈರಲ್ ಫೋಟೋವನ್ನು ಸರಿಯಾಗಿ ಹುಡುಕಿದಾಗ, ಅದನ್ನು ಅಫ್ಘಾನ್ ಅಧ್ಯಕ್ಷರ ಕಚೇರಿಯ ಅಧಿಕೃತ ಫೇಸ್ಬುಕ್ ಪುಟದಲ್ಲಿ ಜುಲೈ 9, 2021 ರಂದು ಪೋಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಫೊಟೋದಲ್ಲಿ ಘಾನಿಯು ಬಾಗ್ರಾಮ್ ವಾಯುನೆಲೆಗೆ ಭೇಟಿ ನೀಡಿ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ತೆಗೆದ ಚಿತ್ರ ಎಂದು ಪರ್ಷಿಯನ್ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿದ್ದು, ಈ ಮೂಲಕ ಈ ವೈರಲ್ ಫೋಟೋದ ಅಸಲಿಯತ್ತು ಬಹಿರಂಗವಾಗಿದೆ.
ಬಾಗ್ರಾಮ್ ಅಫ್ಘಾನಿಸ್ತಾನದಲ್ಲಿನ ಅತಿದೊಡ್ಡ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ನೆಲೆಯಾಗಿತ್ತು ಆದರೆ ಇದೀಗ ಅಮೆರಿಕನ್ನರು 20 ವರ್ಷಗಳ ನಂತರ ಸ್ಥಳವನ್ನು ಖಾಲಿ ಮಾಡಿದ್ದಾರೆ.
ತಾಲಿಬಾನಿಗರು ಕಾಬೂಲ್ ವಶಪಡಿಸಿಕೊಳ್ಳಲು ಆರಂಭಿಸಿದ ನಂತರ ಆಗಸ್ಟ್ 15 ರಂದು ಮಾಜಿ ಅಧ್ಯಕ್ಷ ಘಾನಿ ಅಫ್ಘಾನಿಸ್ತಾನದಿಂದ ಪರಾರಿಯಾಗಿದ್ದಾರೆ. ಅಲ್ಲದೇ ಅವರು ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದನ್ನ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಘಾನಿ ಪಲಾಯನ ಮಾಡಿದ ಅದೇ ದಿನ ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ