Indian soldiers: ಗಾಲ್ವಾನ್ ಕಣಿವೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಚೀನಾಗೆ ತಿರುಗೇಟು ನೀಡಿದ ಭಾರತೀಯ ಸೈನಿಕರು

ಈಗ ಚೀನಿಯರ ಈ ರೀತಿಯ ವರ್ತನೆಗೆ ತಿರುಗೇಟು ನೀಡುವಂತೆ ಭಾರತೀಯ ಸೈನ್ಯವು ಗಾಲ್ವಾನ್ ಬಳಿ ಭಾರತದ ಯೋಧರು ನಿಂತು ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿರುವ ಚಿತ್ರವನ್ನು ಹೊರಬಿಟ್ಟಿದೆ.

ಧ್ವಜ ಎತ್ತಿ ಹಿಡಿದ ಭಾರತೀಯ ಸೈನಿಕರು

ಧ್ವಜ ಎತ್ತಿ ಹಿಡಿದ ಭಾರತೀಯ ಸೈನಿಕರು

  • Share this:
ಸದ್ಯ ಏಷ್ಯಾ ಖಂಡದಲ್ಲಿ ತನ್ನ ವಿಸ್ತರಣಾ ಮನೋಭಾವಕ್ಕೆ ಕುಖ್ಯಾತಿ ಪಡೆಸಿರುವ ಚೀನಾ(China) ದೇಶವು ಗಡಿ ಹಾಗೂ ಭೂಮಿಗೆ ( Land and Borders) ಸಂಬಂಧಿಸಿದಂತೆ ಭಾರತದೊಂದಿಗೆ (India) ಮೊದಲಿನಿಂದಲೂ ಸಮಸ್ಯೆ ಸೃಷ್ಟಿಸುತ್ತಲೇ ಇದೆ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಕೆಲ ಸಮಯದಿಂದ ಚೀನಾ ದೇಶವು ತನ್ನ ವಿಸ್ತರಣಾ ಭಾವದ (Expansionist) ದುರುದ್ದೇಶದಿಂದ ಭೂಮಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಕ್ಯಾತೆ ತಗೆಯುತ್ತಲೆ ಇದೆ. ಮೊದಲಿಗೆ ಅರುಣಾಚಲದ ಪ್ರದೇಶದಲ್ಲಿ ತನ್ನ ಪಾರುಪಥ್ಯ ಮೆರೆಯಲು ನೋಡಿತ್ತು. ತದ ನಂತರ ಗಾಲ್ವಾನ್ ( Galvan Valley) ಕಣಿವೆಯಲ್ಲಿ ಮತ್ತೆ ತನ್ನ ಆಟಾಟೋಪವನ್ನು ಮೆರೆದಿತ್ತು. ಆಗ ಭಾರತೀಯ (Indian Soldiers) ಸೈನಿಕರು ಚೀನಿ ಸೈನಿಕರನ್ನು ತದುಕಿ ದೂರ ಸರಿಸಿದ್ದರು.

ಚಿತ್ರಗಳ ಅಪ್ಲೋಡ್
ಆದರೆ, ಕೆಲ ದಿನಗಳ ಹಿಂದೆ ಚೀನಾ ಸರ್ಕಾರ ಒಡೆತನದ ಮಾಧ್ಯಮವು ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡಿತ್ತು. ಆ ಚಿತ್ರಗಳಲ್ಲಿ ಚೀನಾದ ಪೀಪಲ್ ಲಿಬರೇಷನ್ ಆರ್ಮಿಯ ಸೈನಿಕರು, ಸದ್ಯ ಬಫರ್ ವಲಯವಾಗಿರುವ ಗಾಲ್ವಾನ್ ಬಳಿ ತಮ್ಮ ದೇಶದ ಧ್ವಜವನ್ನು ಎತ್ತಿ ಹಿಡಿಯುತ್ತ ಹೊಸ ವರ್ಷದ ಶುಭಾಶಯ ನೀಡಿದ್ದು ಕಂಡುಬಂದಿತ್ತು. ಈ ಬಗ್ಗೆ ಭಾರತವು ಈ ವಿಡಿಯೋ ಬಗ್ಗೆ ಪ್ರತಿಕ್ರಯಿಸುತ್ತ ಈ ತುಣಕು ಗಾಲ್ವಾನ್ ಬಳಿಯ ಪ್ರದೇಶದಲ್ಲಿ ತೆಗೆಯಲಾದದ್ದಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: ASIGMA: ಭಾರತೀಯ ಸೇನೆ ಪರಿಚಯಿಸುತ್ತಿದೆ ಹೊಸ ಚಾಟ್ ಆ್ಯಪ್.. ಇದು ವಾಟ್ಸ್ಆ್ಯಪ್​ಗಿಂತಲೂ ಸುರಕ್ಷಿತ!

ಭಾರತದ ಸೈನಿಕರ ನಡುವೆ ಜಟಾಪಟಿ
ಈಗ ಚೀನಿಯರ ಈ ರೀತಿಯ ವರ್ತನೆಗೆ ತಿರುಗೇಟು ನೀಡುವಂತೆ ಭಾರತೀಯ ಸೈನ್ಯವು ಗಾಲ್ವಾನ್ ಬಳಿ ಭಾರತದ ಯೋಧರು ನಿಂತು ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿರುವ ಚಿತ್ರವನ್ನು ಹೊರಬಿಟ್ಟಿದೆ. ಜೂನ್ 2020ರಲ್ಲಿ ಚೀನಾ ಹಾಗೂ ಭಾರತದ ಸೈನಿಕರ ನಡುವೆ ಜಟಾಪಟಿ ನಡೆದಿದ್ದ ಸ್ಥಳ ಇದಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಚೀನಿ ಸರ್ಕಾರ ಬೇರೆಡೆ ಎಲ್ಲೋ ಚಿತ್ರ ತೆಗೆದು ಸುಳ್ಳು ಸುದ್ದಿ ಹರಡಿಸಲು ಪ್ರಯತ್ನಿಸುತ್ತಿರುವ ಉದ್ದೇಶ ಹೊಂದಿದೆ ಎಂದು ಸ್ಪಷ್ಟವಾಗತೊಡಗಿದೆ ಎನ್ನಲಾಗುತ್ತಿದೆ.

ಮಾರಕಾಸ್ತ್ರಗಳಿಂದ ಹಲ್ಲೆ
ಜೂನ್ 15, 2020 ರಂದು ಚೀನಿ ಸೈನಿಕರು ಹಟಾತ್ತನ್ನೆ ಬೆನ್ನ ಹಿಂದೆ ಚೂರಿ ಇರಿಯುವರಂತೆ ಭಾರತೀಯ ಸೈನಿಕರ ಮೇಲೆ ಮಳೆಗಳು ಜೋಡಿಸಿದ್ದ ದೊಣ್ಣೆ ಹಾಗೂ ಇತರೆ ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ನಡೆಸಿದ್ದರು. ಅದಕ್ಕೆ ಪ್ರತಿರೋಧ ತೋರಿದ್ದ ವೀರ ಭಾರತೀಯ ಯೋಧರು ಕರ್ನಲ್ ಬಿ. ಸಂತೋಶ್ ಬಾಬು ನೇತೃತ್ವದಲ್ಲಿ ಚೀನಿ ಯೋಧರೊಂದಿಗೆ ಯಾವ ದಿಟ್ಟವಾಗಿ ಹೋರಾಡಿದ್ದರು. ಈ ಸೆಣೆಸಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರೆ ಚೀನಿ ಭಾಗದಲ್ಲಿ ಭಾರತ ಸೈನಿಕರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಚೀನಿ ಯೋಧರು ಈ ಘಟನೆಯಲ್ಲಿ ಮೃತಪಟ್ಟಿದ್ದರೆಂದು ಕೆಲ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಸಮಸ್ಯೆ ಇತ್ಯರ್ಥವಾಗಬೇಕಾಗಿದೆ
ಚೀನಾ ಸರ್ಕಾರ ಕೆಲ ದಿನಗಳ ಮೌನವಹಿಸಿ ತದನಂತರ ತನ್ನ ಕೆಲವು ಬೆರಳಣಿಕೆಯಷ್ಟು ಸೈನಿಕರು ಹತರಾಗಿರುವುದಾಗಿ ಹೇಳಿಕೊಂಡಿತ್ತು. ಆದರೆ, ವಸ್ತುಸ್ಥಿತಿ ಬೇರೆಯದ್ದೆ ಆಗಿತ್ತು ಎಂಬ ಅರಿವು ಬಹು ಜನರಲ್ಲಿದೆ ಎಂದು ಇಲ್ಲಿ ಹೇಳಬಹುದಾಗಿದೆ. ಸದ್ಯ ಗಾಲ್ವಾನ್ ಕಣಿವೆ ಕುರಿತಂತೆ ಇನ್ನೂ ಸಮಸ್ಯೆ ಇತ್ಯರ್ಥವಾಗಬೇಕಾಗಿದೆ. ಕಮಾಂಡರ್ ಮಟ್ಟದಲ್ಲಿ ಈಗಾಗಲೇ ಹಲವು ಸುತ್ತುಗಳ ಮಾತುಕತೆ ಭಾರತ ಹಾಗೂ ಚೈನಾ ಮಧ್ಯೆ ನಡೆದಿದ್ದು ಇನ್ನು ಏನೂ ಇತ್ಯರ್ಥವಾಗಿಲ್ಲ. 14ನೇ ಸುತ್ತಿನ ಮಾತುಕತೆ ಇನ್ನೂ ನಡೆಯಬೇಕಾಗಿದೆ. ಅಲ್ಲಿಯವರೆಗೆ ಗಾಲ್ವಾನ್ ಕಣಿವೆ ಬಫರ್ ವಲಯವಾಗಿದೆ.

ಇದನ್ನೂ ಓದಿ: Indian Army- ಹಾಸನದ ಪ್ರೀತಿ, ವಿಶ್ವಸಂಸ್ಥೆ ಕರ್ತವ್ಯಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಸೈನಿಕ ಮಹಿಳೆ

ಅಸಾಲ್ಟ್ ರೈಫಲ್ ಹಿಡಿದ ಚಿತ್ರ
ಆದರೆ, ಇದರ ಬಗ್ಗೆ ತಪ್ಪು ಮಾಹಿತಿ ಹರಡಲಿ ಎಂಬ ದುರುದ್ದೇಶದಿಂದ ಚೀನಿ ಮಾಧ್ಯಮವು ಹೊಸ ವರ್ಷದ ಸಂದರ್ಭದಲ್ಲಿ ತನ್ನ ಸೈನಿಕರು ಧ್ವಜವನ್ನು ಎತ್ತಿ ಹಿಡಿದ ಚಿತ್ರವನ್ನು ವೈರಲ್ ಮಾಡಿ ಇದು ಗಾಲ್ವನ್ ಕಣಿವೆಯಲ್ಲಿನ ಚಿತ್ರ ಎಂಬಂತೆ ಬರೆದುಕೊಂಡಿತ್ತು. ಭಾರತ ಅದಾಗಲೇ ಇದನ್ನು ಅಲ್ಲೆಗೆಳೆದಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಭಾರತೀಯ ಸೈನ್ಯವೂ ಸಹ ಇದಕ್ಕೆ ಸೂಕ್ತವಾದ ಪ್ರತ್ಯುತ್ತರ ನೀಡಲು ಬಯಸಿ ಗಾಲ್ವನ್‌ ಕಣಿವೆಯ ಬಳಿ ಭಾರತೀಯ ಯೋಧರು ಅತ್ಯಾಧುನಿಕ SiG Sauer ಅಸಾಲ್ಟ್ ರೈಫಲ್ ಗಳನ್ನು ಹಿಡಿದು ತ್ರಿವರ್ಣ ಧ್ವಜ ಪ್ರದರ್ಶಿಸುತ್ತಿರುವ ಚಿತ್ರ ಅಪ್ಲೋಡ್ ಮಾಡಿರುವುದಾಗಿ ತಿಳಿದುಬಂದಿದೆ.
Published by:vanithasanjevani vanithasanjevani
First published: