ನವದೆಹಲಿ(ಜ.20): ಭಾರದತಲ್ಲಿ ಬಾಂಗ್ಲಾದೇಶ ಅಕ್ರಮ ವಲಸಿಗರ ಬಂಧನ ಶಿಬಿರಗಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟೀಕರಣ ನೀಡಿದ ಬೆನ್ನಲ್ಲೀಗ ಅಚ್ಚರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಅಕ್ರಮ ವಲಸಿಗರ ಬಂಧನ ಕಾರಾಗೃಹದಲ್ಲಿ ಬಾಂಗ್ಲಾದೇಶದ ಮೂಲದ ತಾಯಿಯೊಬ್ಬರು ತನ್ನ ಮಗುವಿಗೆ ಎದೆಹಾಲು ಉಣಿಸುತ್ತಿದ್ದಾರೆ ಎಂಬ ನಕಲಿ ವಿಡಿಯೋ ವೈರಲ್ ಆಗಿತ್ತು. "ಗಂಡ ಹಿಂದೂ ಮತ್ತು ಹೆಂಡತಿ ಬಾಂಗ್ಲಾದೇಶದ ಮುಸ್ಲಿಂ. ಇಬ್ಬರಿಗೂ ಮದುವೆಯಾಗಿದೆ. ಪೌರತ್ವ ಕಾಯ್ದೆ ಜಾರಿಯಾದ ಬಳಿಕ ಇಬ್ಬರನ್ನು ಬಾಂಗ್ಲಾದೇಶದ ಮೂಲದವರು ಎಂದು ಬಂಧಿಸಲಾಗಿದೆ. ಇದರಿಂದ ತಾಯಿ ತನ್ನ ಮಗುವಿಗೆ ಕಾರಾಗೃಹದಲ್ಲೇ ಎದೆಹಾಲು ಉಣಿಸುವಂತಹ ಪರಿಸ್ಥಿತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಿರ್ಮಾಣ ಮಾಡಿದ್ಧಾರೆ" ಎಂದು ಕ್ಯಾಪ್ಷನ್ ನೀಡಿ ಚೋಟು ಖಾನ್ ಎಂಬಾತ ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ವೈರಲ್ ಮಾಡಿದ್ದರು. ಆದರೀಗ ಇದು ಭಾರತ ಕಾರಾಗೃಹದಲ್ಲಿ ನಡೆದ ವಿಡಿಯೋ ಅಲ್ಲ ಎಂಬ ಸತ್ಯ ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಿಗೆ ಬಂದಿದೆ.
ಹೌದು, ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್(ಎಫ್ಡಬ್ಯ್ಲೂಎ) ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ವಿಷಯ ಬಯಲಾಗಿದೆ. ಇದು ಭಾರತ ಮೂಲದ ವಿಡಿಯೋ ಅಲ್ಲ, ಬದಲಿಗೆ ಅರ್ಜೆಂಟಿನಾ ದೇಶದ್ದು ಎನ್ನಲಾಗುತ್ತಿದೆ.
"ನಾವು ಈ ಕುರಿತು ಸುದ್ದಿ ಮಾಡುವ ಮುನ್ನವೇ ಇದರ ಮೂಲ ಹುಡುಕಿದೆವು. ಚೋಟು ಖಾನ್ ಎಂಬಾತ ಮಾಡಿರುವ ಫೋಸ್ಟ್ ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಶೇರ್ ಆಗಿದೆ. ನಾವು ಇದರ ಮೂಲ ಹುಡುಕಲೊರಟಾಗ ವಿಡಿಯೋ ಭಾರತದಲ್ಲ ಎಂದು ತಿಳಿಯಿತು. ಇದು ಅರ್ಜೆಂಟಿನಾ ಮೂಲದ ವಿಡಿಯೋ. ಸುಮಾರು ಆರು ವರ್ಷಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್(ಎಫ್ಡಬ್ಯ್ಲೂಎ) ವರದಿ ಮಾಡಿದೆ.
ಇದನ್ನೂ ಓದಿ: ಜೆಪಿ ನಡ್ಡಾ ಬಗ್ಗೆ ಹಿಮಾಚಲಪ್ರದೇಶಕ್ಕಿಂತ ಬಿಹಾರ ಹೆಚ್ಚು ಹೆಮ್ಮೆ ಪಡುತ್ತದೆ; ಪಕ್ಷದ ನೂತನ ಅಧ್ಯಕ್ಷರ ಬಗ್ಗೆ ಮೋದಿ ಮಾತು
2013ರಲ್ಲೇ ಈ ವಿಡಿಯೋ ಯಾವುದೋ ಬ್ಲಾಗ್ನಲ್ಲಿ ಶೇರ್ ಮಾಡಲಾಗಿದೆ. ಅರ್ಜೆಂಟಿನಾ ದೇಶದಲ್ಲಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಹಳ್ಳಿಯೊಂದರಲ್ಲಿ ಹೀಗೆ ಸ್ಥಳೀಯರನ್ನು ಬಂಧಿಸಲಾಗಿತ್ತು. ಇದು ಭಾರತ ಮೂಲದ ವಿಡಿಯೋ ಅಲ್ಲ ಎಂದು ಬ್ಲಾಗ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ