HOME » NEWS » National-international » PHOTOS SHOW SHAHEEN BAGH SHOOTER KAPIL GUJJAR FATHER JOINED AAP IN 2019 SAY COPS RH

ಶಹೀನ್​ಬಾಗ್ ಗುಂಡಿನ ದಾಳಿಕೋರ ಗುಜ್ಜರ್, ಆತನ ತಂದೆ ಕಳೆದ ವರ್ಷ ಎಎಪಿ ಸೇರ್ಪಡೆಗೊಂಡಿದ್ದರು; ದೆಹಲಿ ಪೊಲೀಸರು

ಕಪಿಲ್ ತಂದೆ ಬಿಎಸ್​ಪಿಯಿಂದ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. 2008ರಲ್ಲಿ ಜನಾಗ್​ಪುರ್ ಕ್ಷೇತ್ರದಿಂದ ಹಾಗೂ ಅದಾದ ನಾಲ್ಕು ವರ್ಷಗಳ ಬಳಿಕ ಪತ್ಪರ್​ಗಂಜ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು ಎಂದು ವರದಿಗಳು ಹೇಳಿವೆ.

news18-kannada
Updated:February 4, 2020, 8:33 PM IST
ಶಹೀನ್​ಬಾಗ್ ಗುಂಡಿನ ದಾಳಿಕೋರ ಗುಜ್ಜರ್, ಆತನ ತಂದೆ ಕಳೆದ ವರ್ಷ ಎಎಪಿ ಸೇರ್ಪಡೆಗೊಂಡಿದ್ದರು; ದೆಹಲಿ ಪೊಲೀಸರು
ಕಪಿಲ್ ಗುಜ್ಜರ್​ನನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುತ್ತಿರುವ ದೆಹಲಿ ಪೊಲೀಸರು (ಸಂಗ್ರಹ ಚಿತ್ರ)
  • Share this:
ನವದೆಹಲಿ: ಕಳೆದ ವಾರ ದೆಹಲಿಯ ಶಹೀನ್​ಬಾಗ್ ನಗರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಕಳೆದ ವರ್ಷ ಆಮ್​ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಶಹೀನ್​ಬಾಗ್ ನಗರದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಕಪಿಲ್ ಗುಜ್ಜರ್ (25) ಎಂಬಾತನನ್ನು ಪೊಲೀಸರು ಫೆಬ್ರವರಿ ಒಂದರಂದು ಬಂಧಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಶಾಹಿನ್ ಭಾಗ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಪಿಲ್ ಗುಂಡು ಹಾರಿಸಿದ್ದ.


ಕ್ರೈಂ ಬ್ರಾಂಚ್​ನ ಡಿಸಿಪಿ ರಾಜೇಶ್ ಡಿಯೋ ಮಾತನಾಡಿ, ವಿಚಾರಣೆ ವೇಳೆ, ಕಪಿಲ್ ಮತ್ತು ಆತನ ತಂದೆ ಕಳೆದ ವರ್ಷ ಎಎಪಿಗೆ ಸೇರ್ಪಡೆಗೊಂಡಿದ್ದ ಫೋಟೋಗಳು ಆತನ ಮೊಬೈಲ್​ನಲ್ಲಿ ಪತ್ತೆಯಾಗಿವೆ. ಆತ ಅದನ್ನು ಈಗಾಗಲೇ ಬಹಿರಂಗಪಡಿಸಿದ್ದಾನೆ. ಪ್ರಕರಣ ಸಂಬಂಧ ಇನ್ನೂ ಎರಡು ದಿನಗಳ ಕಾಲ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.ಕಪಿಲ್ ತಂದೆ ಬಿಎಸ್​ಪಿಯಿಂದ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. 2008ರಲ್ಲಿ ಜನಾಗ್​ಪುರ್ ಕ್ಷೇತ್ರದಿಂದ ಹಾಗೂ ಅದಾದ ನಾಲ್ಕು ವರ್ಷಗಳ ಬಳಿಕ ಪತ್ಪರ್​ಗಂಜ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು ಎಂದು ವರದಿಗಳು ಹೇಳಿವೆ.

ಇದನ್ನು ಓದಿ: ‘ನಾಳೆ ಮಧ್ಯಾಹ್ನದೊಳಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ‘: ಬಿಜೆಪಿಗೆ ಸಿಎಂ ಅರವಿಂದ ಕೇಜ್ರಿವಾಲ್ ಸವಾಲ್​​

ಗುಜ್ಜಾರ್ ಮತ್ತು ಆತನ ತಂದೆ ಕಳೆದ ವರ್ಷದ ಆರಂಭದಲ್ಲಿ ಎಎಪಿ ಸೇರ್ಪಡೆಗೊಂಡಿದ್ದರು ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಎಎಪಿ ಸೇರ್ಪಡೆಯ ಚಿತ್ರಗಳನ್ನು ಮೊಬೈಲ್​ನಲ್ಲಿ ಡಿಲಿಟ್ ಮಾಡಲಾಗಿತ್ತು. ಆದರೆ, ತಾಂತ್ರಿಕತೆಯ ಸಹಾಯದಿಂದ ಆ ಚಿತ್ರಗಳನ್ನು ಮರುಸಂಪಾದಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
First published: February 4, 2020, 8:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories