Crime News: ಮತ್ತು ಬರುವ ಔಷಧಿ ನೀಡಿ ಏಳು ವರ್ಷಗಳಿಂದ ಯುವತಿಯ ಅತ್ಯಾಚಾರ ಮಾಡುತ್ತಿದ್ದ ಫೋಟೊಗ್ರಾಫರ್​ ಬಂಧನ

Kottayam Rape Case: ಸಂತ್ರಸ್ತೆಯ ದೂರಿನ ಪ್ರಕಾರ, ಯುವತಿ ಫೋಟೊಶೂಟ್​ಗೆಂದು ಆರೋಪಿ ಏಳು ವರ್ಷಗಳ ಹಿಂದೆ ಮನೆಗೆ ಬಂದಿದ್ದ. ಮನೆಯಲ್ಲಿ ಯಾರೂ ಇರದದ್ದನ್ನು ಗಮನಿಸಿ, ಆರೋಪಿ ಗ್ರೇಪ್​ ಜ್ಯೂಸ್​ಗೆ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿ, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊಟ್ಟಾಯಂ: ಬರೋಬ್ಬರಿ ಏಳು ವರ್ಷಗಳ ಕಾಲ ಯುವತಿಯ ಮೇಲೆ ಸತತ ಅತ್ಯಾಚಾರ ಮಾಡುತ್ತಿದ್ದ ಫೋಟೊಗ್ರಾಫರ್​ನನ್ನು ಕೊಟ್ಟಾಯಂ ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷಗಳ ಹಿಂದೆ ಮೊದಲ ಸಾರಿ ಹುಡುಗಿ ಫೋಟೊ ಶೂಟ್​ಗೆಂದು ಬಂದ ವೇಳೆ, ಗ್ರೇಪ್​ ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಅದರ ವಿಡಿಯೋ ಮತ್ತು ಫೋಟೊಗಳನ್ನು ಇಟ್ಟುಕೊಂಡು, ಯುವತಿಗೆ ಬ್ಲಾಕ್​ಮೇಲ್​ ಮಾಡುತ್ತಿದ್ದ, ಮತ್ತು ಏಳು ವರ್ಷಗಳಿಂದ ಪದೇ ಪದೇ ಅತ್ಯಾಚಾರ ಮಾಡುತ್ತಲೇ ಇದ್ದ ಎಂಬ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಜೆಲೇಶ್​ ಜನಾರ್ಧನ ಎಂಬ 32 ವರ್ಷದ ಫೋಟೊಗ್ರಾಫರ್​ನನ್ನು ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಪುತುಪಲ್ಲಿ ತಾಲೂಕಿನ ಎರಮಲ್ಲೂರ್​ ನಿವಾಸಿ ಎಂದು ಜನಾರ್ಧನ್​ನನ್ನು ಗುರುತಿಸಲಾಗಿದೆ. ಕೊಟ್ಟಾಯಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾದ ನಂತರ ಬಂಧಿಸಿ ವಿಚಾರಣೆ ನಡೆಸಿದಾಗ, ಜನಾರ್ಧನ್​ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲವು ವರ್ಷಗಳು ನೋವು ಅನುಭವಿಸಿದ ನಂತರ ಸಂತ್ರಸ್ತೆ ಧೈರ್ಯ ತಂದುಕೊಂಡು ದೂರು ನೀಡಿದ್ದರು, ಅದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

    ಸಂತ್ರಸ್ತೆಯ ದೂರಿನ ಪ್ರಕಾರ, ಯುವತಿ ಫೋಟೊಶೂಟ್​ಗೆಂದು ಆರೋಪಿ ಏಳು ವರ್ಷಗಳ ಹಿಂದೆ ಮನೆಗೆ ಬಂದಿದ್ದ. ಮನೆಯಲ್ಲಿ ಯಾರೂ ಇರದದ್ದನ್ನು ಗಮನಿಸಿ, ಆರೋಪಿ ಗ್ರೇಪ್​ ಜ್ಯೂಸ್​ಗೆ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿ, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ. ಅದರ ನಂತರ ವಿಡಿಯೋದ ಪ್ರತಿ ಮತ್ತು ಫೋಟೊಗಳನ್ನು ತೋರಿಸಿ ಯುವತಿಯನ್ನು ಬೆದರಿಸಲು ಆರಂಭಿಸಿದ್ದಾನೆ. ಸಂತ್ರಸ್ತೆ ಹಲವು ಬಾರಿ ಪ್ರತಿಭಟಿಸಲು ಮುಂದಾದಾಗ ಯುವತಿಗೆ ಹೊಡೆದಿದ್ದಾನೆ, ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.

    ಏಳು ವರ್ಷಗಳು ಆತ ಕೊಡುತ್ತಿದ್ದ ನೋವನ್ನು ಸಹಿಸಿಕೊಂಡು ಬಂದಿದ್ದ ಸಂತ್ರಸ್ತೆಗೆ ಇತ್ತೀಚೆಗೆ ಮದುವೆ ನಿಕ್ಕಿಯಾಗಿತ್ತು. ಮದುವೆ ನಿಶ್ಚಯವಾದ ನಂತರ ಯುವತಿಗೆ ಕರೆ ಮಾಡಿದ ಜನಾರ್ಧನ್​, ಮದುವೆ ಆಗದಂತೆ ಹೇಳಿದ್ದಾನೆ. ಮದುವೆ ಆಗುವಂತಿಲ್ಲ, ಮದುವೆಯಾದರೆ ಹುಡುಗನ ಮನೆಯವರಿಗೆ ವಿಡಿಯೋವನ್ನು ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸತತ ಅತ್ಯಾಚಾರ, ದೈಹಿಕ, ಮಾನಸಿಕ ಹಿಂಸೆಯಿಂದ ನೋವುಂಡಿದ್ದ ಯುವತಿ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ಸ್ನೇಹಿತೆಯೊಂದಿಗೆ ಅಪ್ಪನ ಅನೈತಿಕ ಸಂಬಂಧ ಕಂಡು ಹಿಡಿದ ಮಗಳು: TikTokನಲ್ಲಿ ವಿಡಿಯೋ ವೈರಲ್​

    ವಶಕ್ಕೆ ಪಡೆದು ವಿಚಾರಣೆ ಮಾಡಿದ ನಂತರ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೃತ್ತಿಯಲ್ಲಿ ಫೋಟೊಗ್ರಾಫರ್​ ಆಗಿರುವ ಜನಾರ್ಧನ್​ ಇನ್ನಷ್ಟು ಮಹಿಳೆಯರಿಗೆ ಕಾಟ ಕೊಡುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಬೇರೆ ಯುವತಿಯರ ಮೇಲೂ ವಿಡಿಯೋ ತೋರಿಸಿ ಅತ್ಯಾಚಾರ ಮಾಡಿರುವ ಸಾಧ್ಯತೆಯಿದೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದೇವೆ, ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ ಎಂದಿದ್ದಾರೆ. ವಿಡಿಯೋ ಸೋರಿಕೆಯಾಗುವ ಭಯದಿಂದ ಯುವತಿಯರು ಮುಂದೆ ಬರದೇ ಇರಬಹುದು, ಆದರೆ ಗೌಪ್ಯತೆಯನ್ನು ಕಾಪಾಡುತ್ತೇವೆ, ಸಂತ್ರಸ್ತರು ಮುಂದೆ ಬಂದು ದೂರು ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಅಪ್ರಾಪ್ತೆಯ ತಲೆಕೆಡಿಸಿ ಒಂದೇ ಹುಡುಗಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಹುಡುಗರು: ನಾಲ್ವರ ಬಂಧನ

    ದೇಶಾದ್ಯಂತ ಈ ರೀತಿಯ ಪ್ರಕರಣಗಳು ಇತ್ತೀಚೆಗೆ ಪದೇ ಪದೇ ಕೇಳಿಬರುತ್ತಿವೆ. ಕೊಟ್ಟಾಯಂನಲ್ಲೂ ದಿನಕ್ಕೊಂದು ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬುಧವಾರವಷ್ಟೇ ಒಬ್ಬ ಅಪ್ರಾಪ್ತ ಸೇರಿ ನಾಲ್ಕು ಜನರನ್ನು ಪೊಲೀಸರು ಅತ್ಯಾಚಾರ ಪ್ರಕರಣದ ಮೇಲೆ ಬಂಧಿಸಿದ್ದರು. ಅಪ್ರಾಪ್ತ ಯುವತಿಯ ತಲೆ ಕೆಡಿಸಿ ಮೂವರು ಯುವಕರು ಒಂದೇ ಯುವತಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದರು. ಯುವತಿಯ ಪೋಷಕರು ನೀಡಿದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿತ್ತು.
    Published by:Sharath Sharma Kalagaru
    First published: