Queen Elizabeth: ಬ್ರಿಟನ್ ರಾಣಿ ಕೊನೆಯ ಭಾವಚಿತ್ರ ಹೇಗೆ ಮೂಡಿಬಂತು? ಆ ಬಗ್ಗೆ ಛಾಯಾಗ್ರಾಹಕ ರಾನಾಲ್ಡ್‌ ಮ್ಯಾಕೆಚ್ನಿ ಹೇಳೋದೇನು?

ಛಾಯಾಗ್ರಹಕ ರಾನಾಲ್ಡ್ ಮೆಕೆಚ್ನಿ ಅವರು ಎಲಿಜಬೆತ್‌ ರಾಣಿಯ ಫೋಟೋಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಸೆರೆ ಹಿಡಿದಿದ್ದಾರೆ. ಪ್ಲಾಟಿನಂ ಜುಬಿಲಿ ಫೋಟೋ ಶೂಟ್ ರಾಣಿ ಎಲಿಜಬೆತ್ ಅವರ ಕೊನೆಯ ಛಾಯಾಚಿತ್ರವಾಗಿದೆ. ಆ ಸಂದರ್ಭ ಹೇಗಿತ್ತು? ಈ ಬಗ್ಗೆ ಫೋಟೋಗ್ರಾಫರ್ ಹೇಳಿದ್ದೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ...

ನಗು ಮೊಗದ ರಾಣಿ

ನಗು ಮೊಗದ ರಾಣಿ

  • Share this:
ರಾಣಿ ಎಲಿಜಬೆತ್  1926 ರಿಂದ 2022 ರವರೆಗೆ ದೀರ್ಘಕಾಲ ಆಳ್ವಿಕೆ ನಡೆಸಿದ ಇಂಗ್ಲೆಂಡ್‌ನ ರಾಣಿ. ಎಲಿಜಬೆತ್ ( Queen Elizabeth) ತನ್ನ ತಂದೆ ಕಿಂಗ್ ಜಾರ್ಜ್ II ರ ಮರಣದ ನಂತರ 1952 ರಲ್ಲಿ 25 ನೇ ವಯಸ್ಸಿನಲ್ಲಿ ಪಟ್ಟಕ್ಕೆ ಏರಿದರು. ಇದೀಗ ಅವರು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂದು ಅವರ ಹಳೆಯ ಫೋಟೋಗಳದ್ದೇ (Photo) ಸುದ್ದಿ. ಎಲಿಜಬೆತ್‌ ರಾಣಿ ಯಾವಾಗ? ಎಲ್ಲಿ? ಹೇಗೆ ಫೋಟೋಕ್ಕೆ ಪೋಸ್‌ ನೀಡಿದ್ದಾರೆ ಎಂಬುದರ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ (Information) ನೀಡುತ್ತಿದ್ದೇವೆ. ಇದೇ ಜೂನ್ ತಿಂಗಳಿನಲ್ಲಿ ರಾಣಿ ಎಲಿಜಬೆತ್ II ತಮ್ಮ ಪ್ಲಾಟಿನಂ ಜುಬಿಲಿಯನ್ನು ಆಚರಿಸಿದಾಗ ಆ ವಿಶೇಷ ದಿನದವನ್ನು(Special Day)  ನೆನಪಿನಲ್ಲಿರಿಸಲು ಅವರು ಹೊಸ ಭಾವಚಿತ್ರವೊಂದನ್ನು ಬಿಡುಗಡೆ ಮಾಡಿದ್ದರು.

70 ನೇ ವರ್ಷದ ಅದ್ದೂರಿ ಆಳ್ವಿಕೆಯ ನೆನಪಿನ ಚಿತ್ರ:

ಎಲಿಜಬೆತ್‌ ರಾಣಿಯ 70-ವರ್ಷಗಳ ಆಳ್ವಿಕೆಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಆ ಸಂದರ್ಭದಲ್ಲಿ ವಿಶೇಷ ಫೋಟೋಗಳನ್ನು ಕ್ಲಿಕ್ಕಿಸಲು ಛಾಯಾಗ್ರಾಹಕ ರಾನಾಲ್ಡ್ ಮ್ಯಾಕೆಚ್ನಿ ಅವರು ಬಂದಿದ್ದರು. ಅವರು ತೆಗೆದ ಫೋಟೊದಲ್ಲಿ ರಾಣಿಯು ನೀಲಿ ಉಡುಗೆ ಮತ್ತು ಆಕೆಯು ಧರಿಸಿದ್ದ ವಿಶೇಷ ಮುತ್ತುಗಳ ಹಾರವು ಬಹಳ ಸುಂದರವಾಗಿ ಫೋಟೋದಲ್ಲಿ ಬಂದಿದೆ. ಈ ಸುಂದರ ಉಡುಗೆ ಧರಿಸಿ, ಕಿಟಕಿ ಪಕ್ಕದಲ್ಲಿ ನಿಂತು ಬಹಳ ಅಂದವಾಗಿ ಫೋಟೋಗೆ ಪೋಸ್‌ ಕೊಟ್ಟಿದ್ದರು ನಮ್ಮ ರಾಣಿ ಎನ್ನುತ್ತಾರೆ ಛಾಯಾಗ್ರಹಕ ರಾನಾಲ್ಡ್‌ ಮ್ಯಾಕೆಚ್ನಿ.

ಕೊನೆಯ ಛಾಯಾಚಿತ್ರ:

ಕಳೆದ ಗುರುವಾರ ಸೆಪ್ಟೆಂಬರ್‌ 8 ರಂದು ರಾಣಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದಾಗ ಮೆಕೆಚ್ನಿಯಲ್ಲಿ ತೆಗೆದ ಛಾಯಾಚಿತ್ರವು ಅವರ ಕೊನೆಯ ಅಧಿಕೃತ ಭಾವಚಿತ್ರ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ. ಈ ಐತಿಹಾಸಿಕ ಫೋಟೊದ ಬಗ್ಗೆ  ಮಾತನಾಡುತ್ತಾ 62 ವರ್ಷದ ಮ್ಯಾಕೆಕ್ನಿ ಅವರು “ರಾಣಿಯ ಭಾವಚಿತ್ರವನ್ನು ಸೆರೆಹಿಡಿಯಲು ಕೇವಲ ನಾವು ಒಂದು ಸಣ್ಣ ಕಿಟಕಿಯನ್ನು ಮಾತ್ರ ಬಳಸಿದ್ದೆವು. ಅವರ ನೋಟ ನಿಜಕ್ಕೂ ಅದ್ಬುತ. ಆದ್ದರಿಂದ ಯಾವುದೇ ಹೆಚ್ಚಿನ ವಸ್ತುಗಳಿಲ್ಲದೇ ಫೋಟೊ ತೆಗೆದರೂ ಕೂಡ ಅವರು ಫೋಟೋದಲ್ಲಿ ಅದ್ಬುತವಾಗಿ ಸೆರೆಯಾಗಿದ್ದಾರೆ. ಇದರಿಂದಲೇ ತಿಳಿದು ಬರುತ್ತದೆ, ಅವರು ಎಷ್ಟು ಸುಂದರವಾಗಿದ್ದರೂ ಎಂಬುದು” ಎಂದು ಆ ಫೋಟೋದ ಹಿಂದಿನ ಕತೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

ಛಾಯಾಗ್ರಹಕ ರಾನಾಲ್ಡ್ ಮೆಕೆಚ್ನಿ:

ಛಾಯಾಗ್ರಹಕ ರಾನಾಲ್ಡ್ ಮೆಕೆಚ್ನಿ ಅವರು ಎಲಿಜಬೆತ್‌ ರಾಣಿಯ ಫೋಟೋಗಳನ್ನು 3 ಬಾರಿ ಬೇರೆ ಬೇರೆ  ಸಂದರ್ಭಗಳಲ್ಲಿ ತೆಗೆದಿದ್ದರು ಎಂದು ಹೇಳಿದ್ದಾರೆ. ಮೊದಲನೆಯದಾಗಿ ಕ್ಯಾಂಟರ್ಬರಿಯಲ್ಲಿ ವಾಸಿಸುವ ಮತ್ತು ಅವರ ಲಂಡನ್ ಸ್ಟುಡಿಯೊದಲ್ಲಿ ಕೆಲಸ ಮಾಡುವ ಮ್ಯಾಕೆಚ್ನಿಗೆ ಎಲಿಜಬೆತ್‌ ರಾಣಿಯ ಪ್ಲಾಟಿನಂ ಜುಬಿಲಿಗಾಗಿ ಛಾಯಾಚಿತ್ರ ತೆಗೆಯುವ ಅವಕಾಶ ಸಿಕ್ಕಿತ್ತಂತೆ. ಇದರಿಂದ ಅವರು ರಾಜಮನೆತನದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎನ್ನುವುದು ತಿಳಿದುಬರುತ್ತದೆ.

2013 ರಲ್ಲಿ ತೆಗೆದ ಚಿತ್ರಗಳು:

ಕಲಾವಿದ ನಿಕಿ ಫಿಲಿಪ್ಸ್ ಅವರು 2013 ರಲ್ಲಿ ರಾಣಿಯ ಫೋಟೋವನ್ನು ಯಾವುದೋ ಸಂದರ್ಭಕ್ಕೆ ಬೇಕೆಂದು ಮೊದಲ ಬಾರಿಗೆ  ಕ್ಲಿಕ್ಕಿಸಿದ್ದರು ಎಂದು ಮ್ಯಾಕೆಚ್ನಿ ಹೇಳಿದ್ದಾರೆ. ಕಲಾವಿದರ ವೆಬ್‌ಸೈಟ್‌ನ ಪ್ರಕಾರ, ರಾಣಿಯ ಪಟ್ಟಾಭಿಷೇಕದ 60 ನೇ ವಾರ್ಷಿಕೋತ್ಸವವನ್ನು ಗುರುತಿಸಲು ರಾಯಲ್ ಕಂಪನಿ ಆಫ್ ಆರ್ಚರ್ಸ್‌ನಿಂದ ಫಿಲಿಪ್ಸ್ ಅವರನ್ನು ನಿಯೋಜಿಸಲಾಗಿತ್ತು. ಆ ಫೋಟೋವು ರಾಣಿಯು ಧರಿಸಿದ್ದ ಪೂರ್ಣ ನಿಲುವಂಗಿಯ ತುಂಬಾ ಸುಂದರವಾದ ಫೋಟೋ ಆಗಿತ್ತು.ಇದು ರಾಜಮನೆತನದ ಪ್ರಜೆಗಳನ್ನು ಛಾಯಾಚಿತ್ರ ತೆಗೆಯಲು ಮೆಕೆಚ್ನಿಗೆ ಮತ್ತಷ್ಟು ಅವಕಾಶಗಳನ್ನು ನೀಡಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುಕೆ ರಾಣಿಯ ಚಿತ್ರವಿರುವ ನೋಟುಗಳು ಬದಲಾಗುತ್ತಾ? ಇನ್ಮುಂದೆ ಹೇಗಿರಲಿದೆ ಇಲ್ಲಿನ ಕರೆನ್ಸಿ

2015 ರಲ್ಲಿ ತೆಗೆದ ಚಿತ್ರ:

2015 ರಲ್ಲಿ, ಮ್ಯಾಕೆಕ್ನಿ ಅವರು ರಾಣಿ ಮತ್ತು ಅವರ ನಂತರದ ಮುಂದಿನ ಮೂವರು ಉತ್ತರಾಧಿಕಾರಿಗಳೊಂದಿಗೆ ರಾಣಿಯ ಫೋಟೋವನ್ನು ಕ್ಲಿಕ್ಕಿಸಿದ್ದರು. ಅದರಲ್ಲಿ ಚಾರ್ಲ್ಸ್ ಅವರ ಹಿರಿಯ ಮಗ, ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಜಾರ್ಜ್ - ಬಕಿಂಗ್ಹ್ಯಾಮ್ ಅವರೊಟ್ಟಿಗೆ ಅರಮನೆಯ ವೈಟ್ ಡ್ರಾಯಿಂಗ್ ಕೋಣೆಯಲ್ಲಿ ಈ ಫೋಟೋವನ್ನು ತೆಗೆಯಲಾಗಿತ್ತು. ರಾಣಿಯ 90 ನೇ ಹುಟ್ಟುಹಬ್ಬದಂದು 2016 ರಲ್ಲಿ ಬಿಡುಗಡೆಯಾದ ಅಂಚೆಚೀಟಿಗಳ ಸಲುವಾಗಿ ರಾಜಮನೆತನದ ಸದಸ್ಯರ ಛಾಯಾಚಿತ್ರ ಕ್ಲಿಕ್ಕಿಸಲಾಗಿತ್ತು ಎಂದು ಮ್ಯಾಕೆಚ್ನಿ ಹೇಳಿದ್ದಾರೆ.

2015 ರಲ್ಲಿ ತೆಗೆದ ಚಿತ್ರ


ಇದನ್ನೂ ಓದಿ: ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಪ್ರಿನ್ಸ್ ಹ್ಯಾರಿ ಅಧಿಕೃತ ಹೇಳಿಕೆ ಬಿಡುಗಡೆ

2019 ರಲ್ಲಿ ತೆಗೆದ ಚಿತ್ರಗಳು:

2019 ರಲ್ಲಿ ತೆಗೆದ ಮತ್ತು 2020 ರಲ್ಲಿ ಬಿಡುಗಡೆಯಾದ ಮ್ಯಾಕೆಕ್ನಿಯ ರಾಣಿಯ ಮುಂದಿನ ಭಾವಚಿತ್ರವು ಹೊಸ ದಶಕದ ಆರಂಭವನ್ನು ಗುರುತಿಸಲು ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಣಿಯು ಮತ್ತೊಮ್ಮೆ ಚಾರ್ಲ್ಸ್, ವಿಲಿಯಂ ಮತ್ತು ಜಾರ್ಜ್ ಅವರೊಂದಿಗೆ ಪೋಸ್ ನೀಡಿದ್ದರು.

2019 ರಲ್ಲಿ ತೆಗೆದ ಚಿತ್ರ


ಕ್ವೀನ್ಸ್ ಪ್ಲಾಟಿನಂ ಜುಬಿಲಿ ಭಾವಚಿತ್ರ:

ಕ್ವೀನ್ಸ್ ಪ್ಲಾಟಿನಂ ಜುಬಿಲಿ ಭಾವಚಿತ್ರಕ್ಕಾಗಿ ಛಾಯಾಗ್ರಾಹಕನನ್ನು ಆಯ್ಕೆ ಮಾಡಲು ಬಕಿಂಗ್ಹ್ಯಾಮ್ ಅರಮನೆಗೆ ಈ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು. ಛಾಯಾಗ್ರಾಹಕನು ಈ ಫೋಟೋ ಕ್ಲಿಕ್ಕಿಸಲು ತೆಗೆದುಕೊಂಡ ಸಮಯ ಬರೋಬ್ಬರಿ 45 ನಿಮಿಷಗಳು ಆಗಿತ್ತು. ಆದರೆ ವಿಧಿಯಾಟ ಇದೇ ಅವರ ಕೊನೆ ಫೋಟೋ ಆಯಿತು.

ಪ್ಲಾಟಿನಂ ಜುಬಿಲಿ ಫೋಟೋ ಶೂಟ್:

ಪ್ಲಾಟಿನಂ ಜುಬಿಲಿ ಫೋಟೋ ಶೂಟ್ ನಡೆಯುವ ಒಂದು ತಿಂಗಳ ಮೊದಲೇ ಈ ಫೋಟೋ ಸೆಷನ್‌ ನಡೆಸಲು ನನಗೆ ವಿಂಡ್ಸರ್ ಕ್ಯಾಸಲ್‌ಗೆ ಪ್ರವೇಶವನ್ನು ನೀಡಲಾಗಿತ್ತು ಎಂದು ಮ್ಯಾಕೆಚ್ನಿ ಹೇಳಿದ್ದಾರೆ.

ಇದನ್ನೂ ಓದಿ: ರಾಣಿ ಎಲಿಜಬೆತ್‌ ದೀರ್ಘಾಯುಷ್ಯದ ಗುಟ್ಟು ಇಲ್ಲಿದೆ ನೋಡಿ

"ನನ್ನ ಜೊತೆ ರಾಣಿ ಕೂಡ ಫೋಟೋ ತೆಗೆಯಲು ಯಾವ ಸ್ಥಳ ಉತ್ತಮ ಎಂದು ನೋಡುತ್ತಿದ್ದರು. ಯಾವುದು ಬೆಸ್ಟ್‌ ಅಂತ ಚರ್ಚೆ ಮಾಡುತ್ತಿದ್ದರು. ರಾಣಿಯು ಕುರ್ಚಿಯಲ್ಲಿ ಕೂರಬೇಕಾ? ಅಥವಾ ಕಿಟಕಿಯಲ್ಲಿ ನೋಡುತ್ತಾ ನಿಂತುಕೊಳ್ಳಬೇಕಾ? ಅಥವಾ ಹೊರಗೆ ನೋಡುವ ರೀತಿಯಲ್ಲಿ ಪೋಸ್‌ ನೀಡುವುದಾ? ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ” ಎಂದು ಮ್ಯಾಕೆಚ್ನಿ ಹೇಳಿದ್ಧಾರೆ.
First published: