ದೆಹಲಿ(ಜೂ.17): ಅಫ್ಘಾನಿಸ್ತಾನದಿಂದ (Afghanistan) ಯಾವಾಗ ಅಮೆರಿಕದ ಸೇನೆ (American Army) ಮರಳಿ ಹೋಯಿತೋ ಆಗ ತಾಲೀಬಾನ್ (Taliban) ತಾಂಡವ ಶುರುವಾಗಿದೆ. ಅಫ್ಘಾನಿಸ್ತಾನದ ಜನ ಬದುಕಲು ದಿಕ್ಕಿಲ್ಲದೆ ಓಡಿ ಹೋಗುತ್ತಿದ್ದಾರೆ. ತಾಲೀಬಾನ್ ಆಡಳಿತದಲ್ಲಿ ನರಕದ ದಿನಗಳನ್ನು ಕಳೆಯುತ್ತಿರುವ ಜನರು ಖುಷಿಯನ್ನೇ ಮರೆತಿದ್ದಾರೆ. ಹಾಸ್ಯ ಕಲಾವಿದರು, ಪತ್ರಕರ್ತರೂ (Journalists), ನಟರೂ, ಕಲಾವಿದರ ಸ್ಥಿತಿಯನ್ನೂ ವಿವರಿಸಬೇಕಿಲ್ಲ. ತಾಲೀಬಾನ್ ವಿರೋಧಿಸುವ ವಿಚಾರಗಳಿಗೆ ಯಾವುದಕ್ಕೂ ಈಗ ಅಫ್ಘಾನಿಸ್ತಾನದಲ್ಲಿ ಜಾಗವಿಲ್ಲ. ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಅಫ್ಘಾನಿಸ್ತಾನದ ಟಿವಿ ಆ್ಯಂಕರ್ (TV Anchor) ಬೀದಿಗಳಲ್ಲಿ ಆಹಾರವನ್ನು (Street Food) ಮಾರಾಟ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಮಾಧ್ಯಮ ನಿರೂಪಕರಾಗಿದ್ದ ಮೂಸಾ ಮೊಹಮ್ಮದಿ ಅವರ ಜೀವನೋಪಾಯಕ್ಕಾಗಿ ಆಹಾರವನ್ನು ಮಾರಾಟ ಮಾಡುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಹಕ್ಮಲ್, “ಮೂಸಾ ಮೊಹಮ್ಮದಿ ಅವರು ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದರು. ಈಗ ಅವರ ಕುಟುಂಬವನ್ನು ಪೋಷಿಸಲು ಯಾವುದೇ ಆದಾಯವಿಲ್ಲ. ಮತ್ತು ಸ್ವಲ್ಪ ಹಣವನ್ನು ಗಳಿಸಲು ಬೀದಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ #ಆಫ್ಘನ್ನರು ಬಡತನವನ್ನು ಅನುಭವಿಸುತ್ತಾರೆ ಎಂದು ಬರೆದಿದ್ದಾರೆ.
ಕೆಲಸ ನೀಡಿ ಮಾನವೀಯತೆ ಮೆರೆದ ಅಹ್ಮದುಲ್ಲಾ ವಾಸಿಕ್
ವೈರಲ್ ಫೋಟೋ ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನ ಸೆಳೆಯಿತು, ಅವರು ತಮ್ಮ ಇಲಾಖೆಯಲ್ಲಿ ಮಾಜಿ ಟಿವಿ ನಿರೂಪಕ ಮತ್ತು ವರದಿಗಾರರನ್ನು ನೇಮಿಸಲು ಬಯಸುವುದಾಗಿ ಟ್ವೀಟ್ ಮಾಡಿದ್ದಾರೆ.
Journalists life in #Afghanistan under the #Taliban. Musa Mohammadi worked for years as anchor & reporter in different TV channels, now has no income to fed his family. & sells street food to earn some money. #Afghans suffer unprecedented poverty after the fall of republic. pic.twitter.com/nCTTIbfZN3
— Kabir Haqmal (@Haqmal) June 15, 2022
ಇದನ್ನೂ ಓದಿ: Assam Flood: ಅಸ್ಸಾಂನಲ್ಲಿ ಪ್ರವಾಹ, ಭೂಕುಸಿತ! ಇಲ್ಲಿವೆ ಕೆಲವು ಚಿತ್ರಗಳು
ತಾಲಿಬಾನ್ ದೇಶವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನವು ಭೀಕರ ಆರ್ಥಿಕ, ರಾಜಕೀಯ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಗಮನಿಸಬೇಕು.
ಬಹಳಷ್ಟು ಮಾಧ್ಯಮಗಳ ಮೇಲೆ ದಾಳಿ
ವರದಿಗಳ ಪ್ರಕಾರ, ತಾಲೀಬಾನಿಗಳು ಹಲವಾರು ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನೇಕ ಪತ್ರಕರ್ತರು, ವಿಶೇಷವಾಗಿ ಮಹಿಳೆಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Vet Doctor: ಪ್ರಾಣಿಗೆ ಹುಷಾರಿಲ್ಲ ಎಂದು ಪಶುವೈದ್ಯನ ಕರೆದೊಯ್ದು ಮದುವೆ ಮಾಡಿಸಿದ ಜನ
ರಾಯಿಟರ್ಸ್ ಪ್ರಕಾರ, 2021 ರ ಕೊನೆಯ ನಾಲ್ಕು ತಿಂಗಳಲ್ಲಿ ಅಫ್ಘಾನಿಸ್ತಾನದ ತಲಾ ಆದಾಯವು ಮೂರನೇ ಒಂದು ಭಾಗದಷ್ಟು ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ