Lumpy Virus: ಲಂಪಿ ವೈರಸ್​ಗೆ ಸಾವಿರಾರು ಜಾನುವಾರುಗಳು ಬಲಿ? ಫೋಟೋ ವೈರಲ್, ಅಧಿಕಾರಿಗಳು ಹೇಳಿದ್ದೇನು?

ಲವು ತಿಂಗಳಿನಿಂದ ಈ ರಾಜ್ಯಗಳಲ್ಲಿ ಭೀಕರವಾಗಿ ಹಬ್ಬಿರುವ ಈ ಕಾಯಿಲೆಗೆ ಸಾಕ್ಷಿಯಾಗಿ ಆನ್‌ ಲೈನ್‌ ನಲ್ಲಿ ಫೋಟೋವೊಂದು ವೈರಲ್‌ ಆಗಿದೆ. ರಾಜಸ್ಥಾನದ ಬಿಕಾನೇರ್‌ನ ಹೊರಗಿನ ಮೈದಾನದಲ್ಲಿ ಸಾವಿರಾರು ಸತ್ತ ಜಾನುವಾರುಗಳನ್ನು ಎಸೆದಿರುವ ಬಗ್ಗೆ ತೋರಿಸಲಾಗಿರುವ ಫೋಟೋ ಸದ್ಯ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಲಂಪಿ ವೈರಸ್‌ನಿಂದ ಉಂಟಾದ ಚರ್ಮದ ಕಾಯಿಲೆಯಿಂದ ಹಸುಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. 

ಸತ್ತು ಬಿದ್ದ ಸಾವಿರಾರು ಜಾನುವಾರಗಳ ಫೋಟೋ

ಸತ್ತು ಬಿದ್ದ ಸಾವಿರಾರು ಜಾನುವಾರಗಳ ಫೋಟೋ

  • Share this:
ಸಾಂಕ್ರಾಮಿಕ, ಗುಣಪಡಿಸಲಾಗದ ಲಂಪಿ ವೈರಸ್‌ನಿಂದ (Lumpy Virus) ಉಂಟಾದ ಚರ್ಮ ರೋಗವು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ (Gujarat) ಸಾವಿರಾರು ಜಾನುವಾರುಗಳನ್ನು ಬಲಿ ಪಡೆದುಕೊಳ್ಳುತ್ತಿದೆ. ಕೆಲವು ತಿಂಗಳಿನಿಂದ ಈ ರಾಜ್ಯಗಳಲ್ಲಿ ಭೀಕರವಾಗಿ ಹಬ್ಬಿರುವ ಈ ಕಾಯಿಲೆಗೆ ಸಾಕ್ಷಿಯಾಗಿ ಆನ್‌ ಲೈನ್‌ ನಲ್ಲಿ ಫೋಟೋವೊಂದು ವೈರಲ್‌ ಆಗಿದೆ. ರಾಜಸ್ಥಾನದ (Rajasthan) ಬಿಕಾನೇರ್‌ನ ಹೊರಗಿನ ಮೈದಾನದಲ್ಲಿ ಸಾವಿರಾರು ಸತ್ತ ಜಾನುವಾರುಗಳನ್ನು ಎಸೆದಿರುವ ಬಗ್ಗೆ ತೋರಿಸಲಾಗಿರುವ ಫೋಟೋ ಸದ್ಯ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಲಂಪಿ ವೈರಸ್‌ನಿಂದ ಉಂಟಾದ ಚರ್ಮದ ಕಾಯಿಲೆಯಿಂದ (skin disease) ಹಸುಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಬಿಕಾನೆರ್‌ನಲ್ಲಿ ಪ್ರತಿದಿನ 250ಕ್ಕೂ ಹೆಚ್ಚು ಹಸುಗಳು ಈ ರೋಗದ ಕಾರಣ ಸಾಯುತ್ತಿವೆ (Death) ಎಂದು ಹೇಳುವ ವಿವಿಧ ಸುದ್ದಿವಾಹಿನಿಗಳು ಈ ಫೋಟೋಗಳನ್ನು ಪ್ರಸಾರ ಮಾಡಿವೆ. 

ಈ ಬಗ್ಗೆ ಜಿಲ್ಲಾಡಳಿತ ಹೇಳಿದ್ದೇನು?
"ಈ ಪ್ರದೇಶವು ಸತ್ತ ಪ್ರಾಣಿಗಳನ್ನು ವಿಲೇವಾರಿ ಮಾಡಲು ಗುರುತಿಸಲಾದ ವಲಯವಾಗಿದೆ. ನಗರ ವ್ಯಾಪ್ತಿಯಲ್ಲಿ ಸಾಯುವ ಪ್ರಾಣಿಗಳ ಮೃತದೇಹವನ್ನು ಇಲ್ಲಿಗೆ ತಂದು, ಚರ್ಮವನ್ನು ತೆಗೆದುಹಾಕಿ ಮತ್ತು ಅಸ್ಥಿಪಂಜರವನ್ನು ಒಣಗಿಸಲು ಬಿಡಲಾಗುತ್ತದೆ. ನಂತರ ಗುತ್ತಿಗೆದಾರರು ಈ ಮೂಳೆಗಳನ್ನು ಮಾರಾಟ ಮಾಡಲು ತೆಗೆದುಕೊಳ್ಳುತ್ತಾರೆ. ಈ ಪ್ರದೇಶದಲ್ಲಿ ಸುಮಾರು 1,000 ಪ್ರಾಣಿಗಳ ಶವಗಳು ಯಾವಾಗಲೂ ಕಂಡುಬರುತ್ತವೆ. ವೈರಲ್‌ ಆಗುತ್ತಿರುವ ಫೋಟೋ ಈ ಪ್ರದೇಶದ್ದಾಗಿದೆ" ಎಂದು ಬಿಕಾನೆರ್ ಜಿಲ್ಲಾಧಿಕಾರಿ ಭಗವತಿ ಪ್ರಸಾದ್ ಕಲಾಲ್ ಸ್ಪಷ್ಟನೆ ನೀಡಿದ್ದಾರೆ. ಫೋಟೋ ಕ್ಲಿಕ್ಕಿಸಿದ ಮೈದಾನವು ರಣಹದ್ದುಗಳ ಸಂರಕ್ಷಿತ ಪ್ರದೇಶವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:  Street Dog: ಬೀದಿ ನಾಯಿಗೆ ಅನ್ನ ಹಾಕ್ತೀರಾ? ಹಾಗಿದ್ರೆ ಅದು ಜನರಿಗೆ ಕಚ್ಚಿದರೆ ನೀವೇ ಹೊಣೆ!

"ವೈರಸ್‌ನಿಂದ ಹರಡಿರುವ ಕಾಯಿಲೆಯಿಂದ ಸಾಯುವ ಪ್ರಾಣಿಗಳನ್ನು ಇಲ್ಲಿಗೆ ತರಲಾಗುವುದಿಲ್ಲ. ಅಂತಹ ಶವಗಳಿಗೆ ನಾವು ಬೇರೆ ಪ್ರದೇಶಗಳನ್ನು ಗೊತ್ತುಪಡಿಸಿದ್ದೇವೆ. ಇಂತಹ ಪ್ರಾಣಿಗಳನ್ನು ನೆಲದಡಿಯಲ್ಲಿ ಹೂಳಲಾಗುತ್ತದೆ" ಎಂದು ಜಿಲ್ಲಾಧಿಕಾರಿ ಕಲಾಲ್ ಹೇಳಿದರು.

10,04,943 ಪ್ರಾಣಿಗಳು ಲಂಪಿ ವೈರಸ್ ಗೆ ಬಲಿ
ರಾಜಸ್ಥಾನ ಸರ್ಕಾರವು ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದಾದ್ಯಂತ 10,04,943 ಪ್ರಾಣಿಗಳಿಗೆ ಲಂಪಿ ವೈರಸ್ ಚರ್ಮ ರೋಗ ಬಾಧಿಸಿದೆ. ಈ ಪೈಕಿ 84,369 ಜಾನುವಾರುಗಳು ಬಿಕಾನೇರ್‌ ಗೆ ಸೇರಿದ್ದಾಗಿವೆ. ಈ ರೋಗದಿಂದ ನಗರದಲ್ಲಿ 2,573 ಜಾನುವಾರುಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.ಪ್ರಾಣಿಗಳ ಆಮದು ನಿಷೇಧ
ರಾಜಸ್ಥಾನದಲ್ಲಿ ಲಂಪಿ ವೈರಸ್ ಚರ್ಮ ರೋಗ ಹರಡುತ್ತಿರುವ ಕಾರಣ, ನೆರೆಯ ಮಧ್ಯಪ್ರದೇಶವು ರಾಜಸ್ಥಾನದಿಂದ ಪ್ರಾಣಿಗಳ ಆಮದನ್ನು ನಿಷೇಧಿಸಿದೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ದೇಪಾಲ್‌ಪುರ ಗ್ರಾಮದಲ್ಲಿ ಎರಡು ಹಸುಗಳಿಗೆ ಲಂಪಿ ವೈರಸ್ ಸೋಂಕು ತಗುಲಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಏನಿದು ಲಂಪಿ ವೈರಸ್​​ ಕಾಯಿಲೆ?
ಆಫ್ರಿಕಾದಲ್ಲಿ ಹುಟ್ಟಿಕೊಂಡ ಈ ರೋಗ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿತ್ತು. ಸೊಳ್ಳೆ, ನೊಣ ಇತ್ಯಾದಿಗಳ ಕಚ್ಚುವಿಕೆ ಅಥವಾ ನೇರ ಸಂಪರ್ಕದಿಂದ ಅಥವಾ ಕಲುಷಿತ ಆಹಾರ ಅಥವಾ ನೀರಿನ ಮೂಲಕ ಜಾನುವಾರಗಳಿಗೆ ಹರಡುತ್ತದೆ. ವೈರಸ್‌ ತಗುಲಿದ ಪ್ರಾಣಿಗಳಲ್ಲಿ ಚರ್ಮದ ಮೇಲೆ ಸಿಡುಬು, ತೀವ್ರ ಜ್ವರ ಮತ್ತು ಮೂಗು ಸೋರುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ರೋಗಕ್ಕೆ ಯಾವುದೇ ಚಿಕಿತ್ಸೆಗಳು ಇರಲಿಲ್ಲ.

ಇದನ್ನೂ ಓದಿ: Pune: ಬೀದಿ ನಾಯಿಗಳ ರಕ್ಷಣೆಗೆ ವಿಶಿಷ್ಟ ಕತ್ತು ಪಟ್ಟಿ ತಯಾರಿಸಿದ ಯುವಕ!

ಆದರೆ ಇತ್ತೀಚೆಗೆ ಆಗಸ್ಟ್ 10 ರಂದು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲಂಪಿ-ಪ್ರೊವಾಕ್ ಎಂಬ ಲಸಿಕೆಯನ್ನು ಬಿಡುಗಡೆ ಮಾಡಿ ಜಾನುವಾರುಗಳನ್ನು ವೈರಸ್‌ ನಿಂದ ರಕ್ಷಿಸಿದ್ದಾರೆ. ಲಸಿಕೆಯನ್ನು ನ್ಯಾಷನಲ್ ಎಕ್ವೈನ್ ರಿಸರ್ಚ್ ಸೆಂಟರ್, ಹಿಸಾರ್ (ಹರಿಯಾಣ) ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಇಜ್ಜತ್‌ನಗರ (ಬರೇಲಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
Published by:Ashwini Prabhu
First published: