ನವ ದೆಹಲಿ: ಜಾಗತಿಕ ಸುದ್ದಿಸಂಸ್ಥೆಯಾಗಿರುವ ರಾಯ್ಟರ್ಸ್ 2020 ರ ವರ್ಷದ ಪೋಟೋ ಪ್ರಶಸ್ತಿಗೆ ಆಯ್ಕೆಯಾಗಿರುವ ಛಾಯಾಚಿತ್ರಗಳ ಪಟ್ಟಿಯನ್ನು ಹೊರಹಾಕಿದೆ. ಈ ಪಟ್ಟಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಹಿಂಸಾಚಾರದ ವೇಳೆ ತೆಗೆದ ಪೋಟೋ ಸಹ ಸ್ಥಾನ ಪಡೆದಿದೆ. ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುತ್ತಿರವ ಫೋಟೋವನ್ನು ದಾನೀಶ್ ಸಿದ್ದಿಕಿ ಎಂಬ ವ್ಯಕ್ತಿ ಪೋಟೋ ಕ್ಲಿಕ್ಕಿಸಿದ್ದರು. ಈ ಪೋಟೋ ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಜಗತ್ತಿಗೆ ಸಾರುವಂತಿತ್ತು. ಅಲ್ಲದೆ, ಈ ಚಿತ್ರ ಹಲವರ ಮನ ಕಲಕಿತ್ತು. ಹೀಗಾಗಿ ಈ ಪೋಟೋವನ್ನು 2020 ವರ್ಷದ ಶ್ರೇಷ್ಠ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಈ ಚಿತ್ರವಷ್ಟೇ ಅಲ್ಲದೆ, ದಾನೀಶ್ ದೆಹಲಿ ಗಲಭೆ ಸಮಯದಲ್ಲಿ 100ಕ್ಕೂ ಅಧಿಕ ಪೋಟೋಗಳನ್ನು ತೆಗೆದಿದ್ದಾರೆ ಈ ಎಲ್ಲಾ ಪೋಟೋಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಅಲ್ಲದೆ, ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಸಾಕ್ಷೀಕರಿಸಿದೆ ಎಂದರೆ ತಪ್ಪಾಗಲಾರದು.
ಅಸಲಿಗೆ ಕೇಂದ್ರ ಸರ್ಕಾರ ಪೌರತ್ವದ ತಿದ್ದುಪಡಿ ಕಾಯ್ದೆಯನ್ನು ಜಾರಿ ತರಲು ಮುಂದಾಗಿತ್ತು. ಸಂಸತ್ನ ಎರಡೂ ಮನೆಯಲ್ಲಿ ಸಿಎಎ ಕಾಯ್ದೆಯನ್ನು ಮಂಡಿಸಿದ್ದ ಕೇಂದ್ರ ಸರ್ಕಾರ ಬಹುಮತದಿಂತ ಅಂಗೀಕಾರವನ್ನೂ ಪಡೆದಿತ್ತು. ಆದರೆ, ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿದೆ ಎಂಬ ಕಾರಣಕ್ಕೆ ಹಲವರು ಈ ಕಾಯ್ದೆಯನ್ನು ವಿರೋಧಿಸಿದ್ದರು.
ಇದನ್ನೂ ಓದಿ: ಏಷ್ಯಾದಲ್ಲೇ ಭ್ರಷ್ಟಚಾರದಲ್ಲಿ ಭಾರತವೇ ನಂ1; ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಸಮೀಕ್ಷಾ ವರದಿ
ಇಡೀ ದೇಶದಾದ್ಯಂತ ಈ ಕಾಯ್ದೆಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿತ್ತು. ಇನ್ನೂ ದೆಹಲಿಯ ಶಹೀನ್ ಭಾಗ್ ಪ್ರಮುಖ ಪ್ರತಿಭಟನಾ ಕೇಂದ್ರವಾಗಿ ಬದಲಾಗಿತ್ತು. ಈ ವೇಳೆ ಹೋರಾಟ ಬಲವಾಗುತ್ತಿದ್ದದ್ದನ್ನು ಮನಗಂಡಿದ್ದ ಬಿಜೆಪಿ ಕಾರ್ಯಕರ್ತರು ಸಿಎಎ ಕಾಯ್ದೆಯನ್ನೂ ಬೆಂಬಲಿಸಿ ಇದೇ ಶಾಹೀನ್ ಭಾಗ್ ಬಳಿ ಅವರೂ ಪ್ರತಿಭಟನೆಗೆ ಮುಂದಾದರು ಈ ವೇಳೆ ಭುಗಿಲೆದ್ದ ಗಲಭೆ ನಂತರ ಹಿಂಸಾಚಾರವಾಗಿ ಬದಲಾದದ್ದು ಎರಡೂ ವಾರಗಳಿಗೂ ಹೆಚ್ಚು ಕಾಲ ದೆಹಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದದ್ದು ಇಂದು ಇತಿಹಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ