ಮಹಿಳೆಗೆ ಸಾರ್ವಜನಿಕವಾಗಿ ಲಿಪ್ ಕಿಸ್ ಮಾಡಿ ವಿವಾದಕ್ಕೀಡಾದ ಫಿಲಿಪೈನ್ಸ್​​ ಅಧ್ಯಕ್ಷ!


Updated:June 5, 2018, 1:24 PM IST
ಮಹಿಳೆಗೆ ಸಾರ್ವಜನಿಕವಾಗಿ ಲಿಪ್ ಕಿಸ್ ಮಾಡಿ ವಿವಾದಕ್ಕೀಡಾದ ಫಿಲಿಪೈನ್ಸ್​​ ಅಧ್ಯಕ್ಷ!

Updated: June 5, 2018, 1:24 PM IST
ನ್ಯೂಸ್ 18 ಕನ್ನಡ

ಮನಿಲಾ(ಜೂ.05): ದಕ್ಷಿಣ ಕೊರಿಯಾದ ಅಧಿಕೃತ ಪ್ರವಾಸದಲ್ಲಿರುವ ಫಿಲಿಪೈನ್ಸ್​​ ಅಧ್ಯಕ್ಷ ರೊಡ್ರಿಗೋ ದುತೆರ್ತೆ ಮಹಿಳೆಯೊಬ್ಬಳಿಗೆ ಲಿಪ್ ಕಿಸ್ ಮಾಡಿ ವಿವಾದಕ್ಕೊಳಗಾಗಿದ್ದಾರೆ. ದುತೆರ್ತೆಯವರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಚಾರ ಅಪಹಾಸ್ಯಕ್ಕೀಡಾಗಿದೆ. ಆದರೆ ಈ ವಿಚಾರ ಮಹಿಳಾ ಸಂಘಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದನ್ನು ಅಸಭ್ಯ ವರ್ತನೆ ಎಂದು ದೂರಿಕೊಂಡಿದ್ದಾರೆ.

ಈ ಘಟನೆಯ ದೃಶ್ಯಾವಳಿಗಳು ಭಾನುವಾರ ರಾತ್ರಿಯಿಂದ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಅಗುತ್ತಿವೆ. ವೇದಿಕೆಯಲ್ಲಿದ್ದ ದುತೆರ್ತೆ ಪ್ರೇಕ್ಷಕರ ನಡುವೆ ಇದ್ದ ಓರ್ವ ಮಹಿಳೆಯನ್ನು ಕರೆದು ಪುಸ್ತಕದ ಬದಲಾಗಿ ತನಗೆ ಲಿಪ್ ಕಿಸ್​ ಕೊಡುವಂತೆ ಕೇಳಿಕೊಂಡಿದ್ದಾರೆ. ದುತರ್ತೆಯನ್ನು ವ್ಯಕ್ತಿಗತವಾಗಿ ನೋಡಿದ ಆ ಮಹಿಳೆ ಬಹಳಷ್ಟು ಉತ್ಸಾಹದಿಂದಿದ್ದಳು. ಹೀಗಾಗಿ ತಾನು ವಿವಾಹಿತಳು ಎಂದು ಸ್ಪಷ್ಟಪಡಿಸಿದ ಆಕೆ ದುತರ್ತೆಗೆ ಲಿಪ್ ಕಿಸ್​ ನೀಡಲು ಒಪ್ಪಿಗೆ ನೀಡಿದ್ದಾಳೆ.


Loading...

ಇನ್ನು ತನ್ನೆದುರಿಗಿದ್ದ ಸುಮಾರು 3000 ಮಂದಿಯನ್ನುದ್ದೇಶಿಸಿ ಮಾತನಾಡಿದ ದುತರ್ತೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಂತೆ ಕೇಳಿಕೊಂಡಿದ್ಧಾರೆ. ಇದು ಕೇವಲ 'ತಮಾಷೆ'ಯಷ್ಟೇ ಎಂದಿದ್ದಾರೆ. ಫಿಲಿಪೈನ್ಸ್​ನ ಸಾರ್ವಜನಿಕ ನ್ಯೂಸ್ ಏಜೆನ್ಸಿಯೊಂದು ಕಿಸ್ ಮಾಡಿದ ಮಹಿಳೆಯ ಚಿಕ್ಕದೊಂದು ಸಂದರ್ಶವನ್ನೂ ಮಾಡಿದೆ. ತನ್ನ ಹೆಸರು 'ಬಿ ಕಿಮ್' ಎಂದು ಪರಿಚಯಿಸಿಕೊಂಡಿರುವ ಮಹಿಳೆ ಕಿಸ್ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ಇದು ನನ್ನ ಮೇಲೆ ಹಾಗೂ ದುತರ್ತೆಯವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ದುತೆರ್ತೆ ಈ ಹಿಂದೆ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆಘಾತಕಅರಿ ಹೇಳಖಿಕೆಯನ್ನು ನೀಡಿದ್ದರು. ಇದನ್ನು ಹೊರತುಪಡಿಸಿ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮಗಳು ಚೆಲ್ಸಿಯಾ ಕ್ಲಿಂಟನ್​ ಕುರಿತಾಗಿಯೂ ವಿವಾದಾತ್ಮಕ ಹೇಳಿಕ ನೀಡಿದ್ದರು. ಹೀಗಿದ್ದರೂ ತವರುನಾಡಿನಲ್ಲಿ ಇವರ ಪ್ರಸಿದ್ಧಿ ಮಾತ್ರ ಕೊಂಚವೂ ಕಳೆಗುಂದಿಲ್ಲ.
First published:June 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...