Brahmos Missile: ಫಿಲಿಪೀನ್ಸ್​ ಸೈನ್ಯದ ಶಕ್ತಿ ಹೆಚ್ಚಿಸಲು ಭಾರತ ಬ್ರಹ್ಮೋಸ್ ಕ್ಷಿಪಣಿಗಳು ಸಿದ್ಧ

ಭಾರತ ಸರ್ಕಾರದೊಂದಿಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದ್ದು ಈ ಒಪ್ಪಂದವು ಮೂರು ವಿದ್ಯುತ್ ಕೋಶಗಳ ಪೂರೈಕೆ ಕ್ಷಿಪಣಿ ನಿರ್ವಾಹಕರು ಹಾಗೂ ಬಳಕೆದಾರರಿಗೆ ಸೂಕ್ತ ತರಬೇತಿ ಹಾಗೂ ಅಗತ್ಯ ಸಮಗ್ರ ಸರಕು ನೆರವನ್ನೂ ಒಳಗೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುರಾಣ ಕತೆಗಳಲ್ಲಿ ನಡೆಯುವ ಯುದ್ಧಗಳಲ್ಲಿ ಬ್ರಹ್ಮಾಸ್ತ್ರವನ್ನು ಕೊಟ್ಟ ಕೊನೆಯಲ್ಲಿ ಮಾತ್ರ ಪ್ರಯೋಗಿಸಲಾಗುತ್ತಿತ್ತು. ಯಾಕೆಂದರೆ, ಅದು ಇಡೀ ಜಗತ್ತನ್ನೇ ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿರುವ ಅಸ್ತ್ರವಾಗಿತ್ತು. ಇದೇ ಪರಿಕಲ್ಪನೆಯೊಂದಿಗೆ ಭಾರತ ಮಹಾತ್ವಾಕಾಂಕ್ಷೆಯಿಂದ ತಯಾರಿಸಿರುವ ಅಣು ಬಾಂಬ್ (Atomic Bomb) ಹೊತ್ತುಯ್ಯುವ ಸಾಮರ್ಥ್ಯವಿರುವ ಕ್ಷಿಪಣಿ 'ಬ್ರಹ್ಮೋಸ್'.(Brahmos missile) ಸದ್ಯ ಈ ಕ್ಷಿಪಣಿಗೆ ಶುಕ್ರದೆಸೆ ಕುದುರಿದ್ದು, ಫಿಲಿಪೈನ್ಸ್ ಸರ್ಕಾರವು ಬರೋಬ್ಬರಿ 375 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತದಿಂದ ಖರೀದಿಸಲು ಮುಂದಾಗಿದೆ. ಈ ವಿಷಯವನ್ನು ಖುದ್ದು ಫಿಲಿಪೈನ್ಸ್ ಸರ್ಕಾರದ (Philippines Government) ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ದೃಢಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ತಾನು ಇತ್ತೀಚೆಗೆ " ಸ್ವೀಕಾರ ಸೂಚನೆ" ಅಥವಾ ಭಾರತದ ಕ್ಷಿಪಣಿ ಪೂರೈಕೆ(India's Missile Supply) ಪ್ರಸ್ತಾಪವನ್ನು ಒಪ್ಪಿಕೊಂಡಿದ್ದೇನೆ. ಈ ಕ್ಷಿಪಣಿಗಳನ್ನು ಫಿಲಿಪೈನ್ಸ್ ನೌಕಾಪಡೆಯ ಬಂದರು ನೆಲೆಯಲ್ಲಿ ಹಡಗು ನಿರೋಧಕ ಕ್ಷಿಪಣಿ ನಿಯೋಜಿಸುವ ಯೋಜನೆಯ ಭಾಗವಾಗಿ ಖರೀದಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಪ್ರಮುಖ ರಫ್ತುದಾರ
ಶುಕ್ರವಾರ ಈ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿರುವ ಫಿಲಿಪೈನ್ಸ್ ಸರ್ಕಾರ, ಭಾರತ-ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ 375 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸುತ್ತಿರುವುದಾಗಿ ಪ್ರಕಟಿಸಿದೆ. ಈ ಬೆಳವಣಿಗೆಯಿಂದ ರಕ್ಷಣಾ ಸಲಕರಣೆಗಳ ವಲಯದಲ್ಲಿ ಪ್ರಮುಖ ರಫ್ತುದಾರನಾಗಲು ಭಾರತ ನಡೆಸುತ್ತಿರುವ ಪ್ರಯತ್ನಗಳು ಬಿರುಸುಗೊಳ್ಳುವ ಸಾಧ್ಯತೆ ಇದೆ.

ಈ ರಕ್ಷಣಾ ಒಪ್ಪಂದದಿಂದ ಚೀನಾದೊಂದಗಿನ ಫಿಲಿಪೈನ್ಸ್ ಸಂಬಂಧವು ಸುಧಾರಿಸುವ ಸಾಧ್ಯತೆ ಕಡಿಮೆ ಇದೆ. ಕಾರಣ, ಚೀನಾವು ದಕ್ಷಿಣ ಚೀನಾ ಸಾಗರದ ಮೇಲೆ ಪ್ರಭುತ್ವ ಸಾಧಿಸಲು ಆಕ್ರಮಣಕಾರಿ ವರ್ತನೆಯನ್ನು ಪ್ರದರ್ಶಿಸುತ್ತಿದ್ದು, ಫಿಲಿಪೈನ್ಸ್‌ನೊಂದಿಗಿನ ಅದರ ಸಂಬಂಧ ಹಿಂದೆಂದಿಗಿಂತ ಹೆಚ್ಚು ಬಿಗಡಾಯಿಸುವಂತೆ ಮಾಡಿದೆ. ಫಿಲಿಪೈನ್ಸ್ ಬಂದರು ನೆಲೆಯಲ್ಲಿ ನಿಯೋಜಿಸಲ್ಪಟ್ಟಿರುವ ನೌಕಾಪಡೆಯು ಬ್ರಹ್ಮೋಸ್ ಕ್ಷಿಪಣಿಯನ್ನು ಹಡಗು ನಿರೋಧಕ ಕ್ಷಿಪಣಿಯನ್ನಾಗಿ ಬಳಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: Explainer: ಭಾರತದ ಕ್ಷಿಪಣಿ ಸಾಮರ್ಥ್ಯವೇನು..? ಚೀನಾ ಹಾಗೂ ಪಾಕಿಸ್ತಾನ ಯಾವ ಸ್ಥಾನಗಳಲ್ಲಿವೆ ಗೊತ್ತಾ..?

ಒಪ್ಪಂದಕ್ಕೆ ಅನುಮೋದನೆ
ಭಾರತ ಸರ್ಕಾರದೊಂದಿಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದವು ಮೂರು ವಿದ್ಯುತ್ ಕೋಶಗಳ ಪೂರೈಕೆ, ಕ್ಷಿಪಣಿ ನಿರ್ವಾಹಕರು ಹಾಗೂ ಬಳಕೆದಾರರಿಗೆ ಸೂಕ್ತ ತರಬೇತಿ ಹಾಗೂ ಅಗತ್ಯ ಸಮಗ್ರ ಸರಕು ನೆರವನ್ನೂ ಒಳಗೊಂಡಿದೆ" ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಲೊರೆಂಜಾನಾ ಮಾಹಿತಿ ನೀಡಿದ್ದಾರೆ. ಬ್ರಹ್ಮೋಸ್ ಖರೀದಿ ಒಪ್ಪಂದ ಪ್ರಸ್ತಾವನೆಯು 2017ರಷ್ಟು ಹಿಂದೆಯೇ ರೂಪುಗೊಂಡಿತ್ತಾದರೂ, ಫಿಲಿಪೈನ್ಸ್ ಅಧ್ಯಕ್ಷರ ಕಾರ್ಯಾಲಯವು 2020ರ ಹಾರಿಜಾನ್ 2 ಆದ್ಯತಾ ಯೋಜನೆಗಳಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ನೀಡಿತು" ಎಂದೂ ಅವರು ತಿಳಿಸಿದ್ದಾರೆ.

ಯೋಜನೆ ರದ್ದಾಗಿತ್ತು
ಫಿಲಿಪೈನ್ಸ್ ಸರ್ಕಾರವು ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲಿರುವ ದೇಶಗಳ ಪೈಕಿ ಮೊತ್ತಮೊದಲನೆಯದಾಗಲಿದೆ ಎಂದು ಡಿಸೆಂಬರ್ 2019ರಲ್ಲೇ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿತ್ತು. 2021ರ ಆರಂಭದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಭಾರತಕ್ಕೆ ಭೇಟಿ ನೀಡುವ ಪ್ರಸ್ತಾವನೆ ಇದ್ದಾಗಲೇ ಈ ಒಪ್ಪಂದಕ್ಕೆ ಸಹಿ ಬೀಳಬೇಕಿತ್ತು. ಆದರೆ, ಈ ಯೋಜನೆಯು ವಿಶ್ವದಾದ್ಯಂತ ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ ಪರಿಣಾಮ ರದ್ದುಗೊಂಡಿತ್ತು.

ಇದನ್ನೂ ಓದಿ: China Warship: ಪಾಕಿಸ್ತಾನಕ್ಕೆ ಅತಿದೊಡ್ಡ, ಅತ್ಯಾಧುನಿಕ ಯುದ್ಧನೌಕೆಯನ್ನು ಒದಗಿಸಿದ ಚೀನಾ

ಡಿಸೆಂಬರ್ 31ರಂದು "ಸ್ವೀಕಾರ ಸೂಚನೆ"ಗೆ ಲೊರೆಂಜಾನಾ ಸಹಿ ಮಾಡಿದ್ದು, ಬ್ರಹ್ಮೋಸ್ ಖರೀದಿ ಒಪ್ಪಂದ ಮೌಲ್ಯ 374.962 ಮಿಲಿಯನ್ ಡಾಲರ್ ಆಗಿದೆ. ಕಳೆದ ತಿಂಗಳು ಫಿಲಿಪೈನ್ಸ್ ಸರ್ಕಾರ ಈ ಶಸ್ತ್ರಾಸ್ತ್ರ ವ್ಯವಸ್ಥೆಗೆ ವಿನಿಯೋಗಿಸಲು 2.8 ಬಿಲಿಯನ್ ಪೆಸೋಸ್ (55.5 ಮಿಲಿಯನ್ ಡಾಲರ್) ಅನ್ನು ಒದಗಿಸಿದೆ. ಖರೀದಿ ಪ್ರಕ್ರಿಯೆಯ ಭಾಗವಾಗಿ ಫಿಲಿಪೈನ್ಸ್ ನೌಕಾಪಡೆಯ ತಂಡವೊಂದು ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿತ್ತು. ಈ ಅತ್ಯಾಧುನಿಕ ವ್ಯೂಹಾತ್ಮಕ ರಕ್ಷಣಾ ಸಾಮರ್ಥ್ಯವನ್ನು ಫಿಲಿಪೈನ್ಸ್‌ನ ಸಶಸ್ತ್ರಗಳ ಪಡೆಗಳ ಪೈಕಿ ಫಿಲಿಪೈನ್ಸ್ ನೌಕಾಪಡೆ ಮೊದಲಿಗೆ ಹೊಂದಲಿದೆ" ಎಂದು ಲೊರೆಂಜಾನಾ ತಿಳಿಸಿದ್ದಾರೆ.
Published by:vanithasanjevani vanithasanjevani
First published: