ಪಿಎಚ್​ಡಿ ಪ್ರಯೋಜನ ಇಲ್ಲ; ಹೈಸ್ಕೂಲ್ ಓದದ ನಾವೇ ಗ್ರೇಟ್: ತಾಲಿಬಾನ್ ಶಿಕ್ಷಣ ಸಚಿವ ಹೇಳಿದ್ದು…

Taliban Support- ಡಿಗ್ರಿ, ಪಿಎಚ್ಡಿ ಮಾಡಿ ಪ್ರಯೋಜನ ಇಲ್ಲ, ನಮ್ಮ ಮುಂದೆ ಆ ಪದವಿ ಏನೂ ಅಲ್ಲ ಎಂದು ತಾಲಿಬಾನ್ ಶಿಕ್ಷಣ ಸಚಿವರು ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೂರಾರು ಮಂದಿ ಅವರನ್ನು ಸಮರ್ಥಿಸಿಕೊಂಡೂ ಇದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ: ನೀವು ಎಷ್ಟೇ ಮಾಸ್ಟರ್ಸ್ ಡಿಗ್ರೀ ತಗೊಳ್ಳಿ, ಏನೇ ಸಂಶೋಧನೆಗಳನ್ನ ಮಾಡಿ, ಅದು ಮುಲ್ಲಾಗಳಿಗೆ (ಧಾರ್ಮಿಕ ವಿದ್ವಾಂಸ) ಸಮ ಅಲ್ಲ. ಯಾವುದೇ ಪದವಿ ಸಂಪಾದಿಸದ ತಾಲಿಬಾನ್ ಮುಖಂಡರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಸಚಿವ ಶೇಖ್ ಮೌಲ್ವಿ ನೂರುಲ್ಲಾ ಮುನಿರ್ ಇತ್ತೀಚೆಗೆ ಹೇಳಿದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ವೃರಲ್ ಆಗಿರುವ ಈ ವಿಡಿಯೋದಲ್ಲಿ, “ಯಾವ ಪಿಎಚ್​ಡಿ ಡಿಗ್ರೀಗಾಗಲೀ, ಮಾಸ್ಟರ್ಸ್ ಡಿಗ್ರೀ ಗಾಗಲೀ ಇವತ್ತು ಬೆಲೆ ಇಲ್ಲ. ಇವತ್ತು ಅಧಿಕಾರದಲ್ಲಿರುವ ಮುಲ್ಲಾಗಳು ಮತ್ತು ತಾಲಿಬಾನಿಗರಲ್ಲಿ ಯಾವ ಪಿಎಚ್​ಡಿಯೂ ಇಲ್ಲ, ಎಂಎ ಇಲ್ಲ, ಅಥವಾ ಹೈಸ್ಕೂಲ್ ಡಿಗ್ರಿಯೂ ಇಲ್ಲ. ಆದರೂ ಎಲ್ಲರಿಗಿಂತ ಅವರು ಶ್ರೇಷ್ಠರಾಗಿದ್ದಾರೆ” ಎಂದು ಶೇಖ್ ಮೋಲ್ವಿ ನೂರುಲ್ಲಾ ಮುನೀರ್ ಹೇಳಿದ್ದಿದೆ.

  ಸಯದ್ ಸುಲೇಮಾನ್ ಅಶ್ನಾ ಎಂಬುವವರು ತಮ್ಮ ಟ್ವಿಟ್ಟರ್​ನಲ್ಲಿ ಈ ವಿಡಿಯೋವನ್ನು ಹಾಕಿದ್ಧಾರೆ. ಅದಕ್ಕೆ ನೂರಾರು ಮಂದಿ ಸ್ಪಂದಿಸಿ ಮಿಶ್ರ ಪ್ರತಿಕ್ರಿಯೆ ನೀಡಿದ್ಧಾರೆ. ಕೆಲವರು ಈ ಹೇಳಿಕೆ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು ತಾಲಿಬಾನ್ ಸಚಿವರ ಬೆಂಬಲಕ್ಕೆ ನಿಂತಿದ್ದಾರೆ. ಉನ್ನತ ಶಿಕ್ಷಣ ಸಚಿವರು ಉನ್ನತ ಶಿಕ್ಷಣಕ್ಕೆ ಬೆಲೆ ಇಲ್ಲ ಎಂದು ಹೇಳುತ್ತಿದ್ದಾರಾಲ್ಲ ಎಂದು ಕಂಗಾಲು ವ್ಯಕ್ತಪಡಿಸಿದರೆ ಅದಕ್ಕೆ ಹತ್ತಾರು ಪ್ರತಿಕ್ರಿಯೆಗಳು ತಾಲಿಬಾನಿಗಳ ಪರವಾಗಿ ಬಂದಿವೆ. ನಿಮ್ಮ ಪ್ರಗತಿಪರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ವ್ಯಕ್ತಿ ದೇಶದಲ್ಲಿ ಐನ್​ಸ್ಟೀನ್​ರನ್ನ ತಯಾರಿಸುತ್ತಿದ್ದನಾ ಎಂದು ಒಬ್ಬಾತ ಪ್ರಶ್ನಿಸಿದ್ದಾನೆ.


  ಈತನ ಮಾತು ಕೇಳಿದರೆ ಪಾಕಿಸ್ತಾನೀಯನಂತೆ ತೋರುತ್ತದೆ ಎಂದು ಒಬ್ಬ ಸಂದೇಹಿಸಿದರೆ, ಹೌದು ಆತ ಪಾಕಿಸ್ತಾನೀ ಮದರಸಾದ ಉತ್ಪಾದನೆ ಎಂದು ಮತ್ತೊಬ್ಬು ಟೀಕಿಸಿದ್ದಾರೆ. ಅಫ್ಘಾನ್ ಮತ್ತು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಬಳಕೆದಾರರೇ ಹೆಚ್ಚಾಗಿ ಪ್ರತಿಕ್ರಿಯಿಸಿದ್ಧಾರೆ. ಇವರ ಪೈಕಿ ಭಾರತೀಯ ವ್ಯಕ್ತಿ ಮಧ್ಯ ಪ್ರವೇಶಿಸಿ, ಭಾರತದಲ್ಲಿ ಆಡಳಿತ ನಡೆಸುವ ನಾಯಕರ ಶಿಕ್ಷಣವನ್ನು ಲೇವಡಿ ಮಾಡಿದ್ದಾರೆ. ಅದಕ್ಕೆ ಮತ್ತೊಬ್ಬ ಭಾರತೀಯ ತಿರುಗೇಟು ಕೊಟ್ಟಿದ್ದು ಕಳೆದ 74 ವರ್ಷದಲ್ಲಿ ಅರ್ಹ ವ್ಯಕ್ತಿಗಳು ಈ ದೇಶವನ್ನ ಮುನ್ನಡೆಸಿದ್ಧಾರೆ ಎಂದಿದ್ದಾನೆ.

  ಉನ್ನತ ಶಿಕ್ಷಣ ಸಚಿವ ಶೇಖ್ ಮೌಲವಿ ನೂರುಲ್ಲಾ ಮುನೀರ್ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಅವರು ಇಸ್ಲಾಮಿಕ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಹದಿಸ್​ನಲ್ಲಿ ಪಂಡಿತರಾಗಿದ್ದಾರೆ. ಅವರು ಸರಿಯಾಗೇ ಹೇಳುತ್ತಾರೆ ಎಂದು ಒಬ್ಬಾತ ಕಮೆಂಟ್ ಮಾಡಿದ್ದಾನೆ. ತಾನು ಅವರನ್ನ ಯೂನಿವರ್ಸಿಟಿಯಲ್ಲಿ ನೋಡಿದ್ಧೇನೆ. ಅವರದ್ದು ತುಂಬಾ ಪ್ರತಿಭಾನ್ವಿತ ವ್ಯಕ್ತಿತ್ವ. ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಜನರು ದೇಶದಲ್ಲಿ ಶಾಂತಿ ಮತ್ತು ಸಿರಿತನ ಖಂಡಿತ ತರುತ್ತಾರೆ ಎಂದು ಇನ್ನೊಬ್ಬ ಹೇಳಿದ್ಧಾನೆ.

  ಇದನ್ನೂ ಓದಿ: Miracle Temple- ದಟ್ಟಕಾಡಿನ ಮಧ್ಯೆ ಗುಪ್ತಲಿಂಗ; ಬಸವಣ್ಣನ ಬಾಯಿಂದ ಬರುವ ನೀರು ಚರ್ಮರೋಗಕ್ಕೆ ಮದ್ದು; ಬೀದರ್​ನಲ್ಲಿ ವಿಸ್ಮಯ ದೇಗುಲ

  ಅವರಿಗೆ ಹೈಸ್ಕೂಲ್ ಡಿಗ್ರೀ ಇಲ್ಲದಿದ್ದರೆ ಅದರಲ್ಲೇನು ತಪ್ಪು? ನಮ್ಮ ಪ್ರಧಾನಿಗೂ ಹೈಸ್ಕೂಲ್ ಡಿಗ್ರೀ ಇಲ್ಲ ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬ ಪ್ರಧಾನಿ ಇಮ್ರಾನ್ ಖಾನ್ ಶಿಕ್ಷಣವನ್ನು ಉಲ್ಲೇಖಿಸಿ ತಾಲಿಬಾನ್ ಸಚಿವರನ್ನ ಸಮರ್ಥಿಸಿಕೊಂಡಿದ್ಧಾನೆ. ಭಾರತದ ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದು, ಭಾರತದಲ್ಲಿ ಸುಶಿಕ್ಷಿತರು ಒಬ್ಬರೂ ಇಲ್ಲ ಎಂದಿದ್ದಾನೆ. ಸಂಸತ್ ಸದಸ್ಯರಲ್ಲಿ ಪಿಎಚ್​ಡಿ ಶೇ. 38, ಮಾಸ್ಟರ್ಸ್ ಶೇ. 53 ಮಾಡಿದವರು ಇದ್ಧಾರೆ. ಎಲ್ಲರೂ ಶಾಲೆಗೆ ಹೋಗಿದ್ಧಾರೆ. ಆದರೆ, ಸುಶಿಕ್ಷಿತರು ಯಾರೂ ಇಲ್ಲ ಎಂದು ಆತ ಲೇವಡಿ ಮಾಡಿದ್ದಾನೆ.

  ತಾಲಿಬಾನ್ ನಾಯಕರು ಬಹಳ ಉನ್ನತ ಮಟ್ಟದ ಶಿಕ್ಷಣ ಹೊಂದಿದವರು. ಅವರ ಮದರಸಾ ಯೂನಿವರ್ಸಿಟಿಯಲ್ಲಿ 21-28 ವರ್ಷ ಕಾಲ ಅಧ್ಯಯನ ನಡೆಸಿದ್ದಾರೆ. ನೈತಿಕ ಮೌಲ್ಯ ಇಲ್ಲದ ಆಧುನಿಕ ಶಿಕ್ಷಣದಿಂದ ಪೈಶಾಚಿಕ ವ್ಯಕ್ತಿತ್ವ ಮಾತ್ರ ರೂಪುಗೊಳ್ಳುತ್ತದೆ ಎಂದು ಡಾ. ಜಿಯಾ ಅಹ್ಮದ್ ಖಾನ್ ಎಂಬುವರು ಅಭಿಪ್ರಾಯಪಟ್ಟಿದ್ಧಾರೆ. ಅದಕ್ಕೆ ಮತ್ತೊಬ್ಬರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಮ್ಮ ಹೆಸರಿನ ಮುಂದೆ ಇರುವ ಡಾಕ್ಟರ್ ಅಕ್ಷರವನ್ನು ದಯವಿಟ್ಟು ಕಿತ್ತುಹಾಕಿ ಎಂದು ಟೀಕಿಸಿದ್ದಾರೆ.

  ಅಫ್ಘಾನಿಸ್ತಾನ ದೇಶವನ್ನು ಇಪ್ಪತ್ತು ವರ್ಷಗಳ ಬಳಿಕ ತಾಲಿಬಾನ್ ವಶಕ್ಕೆ ತೆಗೆದುಕೊಂಡಿದ್ದು ಸರ್ಕಾರ ರಚನೆ ಮಾಡಿದ್ದಾರೆ. ಇಸ್ಲಾಮ್ ಧರ್ಮದ ನಿಯಮಗಳು ಮತ್ತು ಶರಿಯಾ ಕಾನೂನುಗಳ ಪ್ರಕಾರವಾಗಿ ಆಡಳಿತ ನಡೆಸುವುದಾಗಿ ಅವರು ಹೇಳಿದ್ದಾರೆ. ಶರಿಯಾ ಪ್ರಕಾರ ಸಿಗುವ ಎಲ್ಲಾ ಸ್ವಾತಂತ್ರ್ಯವನ್ನು ಮಹಿಳೆಯರಿಗೆ ನೀಡಲಾಗುವುದು. ಅವರು ಯೂನಿವರ್ಸಿಟಿಗೆ ಹೋಗಿ ಶಿಕ್ಷಣ ಕಲಿಯಬಹುದು. ಆದರೆ, ಹಿಜಾಬ್ ಇತ್ಯಾದಿ ಕಡ್ಡಾಯವಾಗಿ ಧರಿಸಬೇಕು. ಮಹಿಳೆಯರಿಗೆಂದೇ ಪ್ರತ್ಯೇಕ ಕೊಠಡಿಯಲ್ಲಿ ಪಾಠ ಕೇಳಬೇಕು ಎಂಬಿತ್ಯಾದಿ ಕಂಡೀಷನ್ಸ್ ಅನ್ನ ತಾಲಿಬಾನ್ ನಾಯಕರು ಹಾಕಿದ್ಧಾರೆ.
  Published by:Vijayasarthy SN
  First published: