HOME » NEWS » National-international » PHARMA COMPANIES HAVE SLASHED THE PRICE OF ANTIVIRAL DRUG REMDESIVIR SESR

Remdesivir: ರೆಮಿಡಿಸಿವರ್​ ಔಷಧ ಬೆಲೆ ಇಳಿಕೆ; ಸೋಂಕಿನ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿದ ಕಂಪನಿಗಳು

ಕೋವಿಡ್​ ವಿರುದ್ಧದ ಹೋರಾಟದಲ್ಲಿ ಪ್ರಮುಖ ಆಟಿವೈರಲ್​ ಆಗಿರುವ ಈ ಇಂಜೆಕ್ಷನ್​ ಅನ್ನು ತೀವ್ರ ತೊಂದರೆಗೆ ಒಳಗಾದ ಸೋಂಕಿತರಿಗೆ ನೀಡಲಾಗುತ್ತಿದೆ.

news18-kannada
Updated:April 17, 2021, 10:38 PM IST
Remdesivir: ರೆಮಿಡಿಸಿವರ್​ ಔಷಧ ಬೆಲೆ ಇಳಿಕೆ; ಸೋಂಕಿನ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿದ ಕಂಪನಿಗಳು
ರೆಮಿಡಿಸಿವರ್​ ಔಷಧ
  • Share this:
ನವದೆಹಲಿ (ಏ. 17): ದೇಶದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ, ಸೋಂಕಿತರ ಚಿಕಿತ್ಸೆಗೆ ನೀಡುವ ಆ್ಯಂಟಿ ವೈರಲ್​ ಇಂಜೆಕ್ಷನ್​ ರೆಮಿಡಿಸಿವರ್​ ಕೊರತೆ ಕಂಡು ಬಂದಿತು. ಈ ಇಂಜೆಕ್ಷನ್​ಗೆ ಬೇಡಿಕೆ ಹೆಚ್ಚಾದ ಹಿನ್ನಲೆ ಇದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪರಿಸ್ಥಿತಿಯನ್ನು ಅವಲೋಕಿಸಿದ ಸರ್ಕಾರ ಈ ಇಂಜೆಕ್ಷನ್​ ಬೆಲೆಯನ್ನು ಇಳಿಸುವಂತೆ  ಇಂಜೆಕ್ಷನ್​ ತಯಾರಕರಿಗೆ ಮನವಿ ಮಾಡಿತ್ತು. ಈ ಮನವಿ ಬೆನ್ನಲ್ಲೇ ಕೆಲ ಕಂಪನಿಗಳು ಇದರ ಬೆಲೆ ಕಡಿತಗೊಳಿಸಿದೆ. ಕೇಂದ್ರ ಸಚಿವಾಲಯದ ಉನ್ನತ ಮಟ್ಟದ ಸಭೆ ಬಳಿಕ ಈ ತೀರ್ಮಾನ ಹೊರ ಬಿದ್ದಿದೆ. ಇಂಜೆಕ್ಷನ್​ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಔಷಧ ತಯಾರಕರೊಂದಿಗೆ ಈ ಕುರಿತು ಸಭೆ ನಡೆಸಲಾಗಿತ್ತು.

ಸರ್ಕಾರದ ಮಧ್ಯಸ್ಥಿಕೆವಹಿಸಿದ ಬಳಿಕ ರೆಮಿಡಿವಿಸರ್​ ಇಂಜೆಕ್ಷನ್​ ಬೆಲೆಯನ್ನು ಸ್ವಯಂ ಪ್ರೇರಿತವಾಗಿ ಕಡಿತಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೋವಿಡ್​ ವಿರುದ್ಧದ ಹೋರಾಟದಲ್ಲಿ ಪ್ರಮುಖ ಆಟಿವೈರಲ್​ ಆಗಿರುವ ಈ ಇಂಜೆಕ್ಷನ್​ ಅನ್ನು ತೀವ್ರ ತೊಂದರೆಗೆ ಒಳಗಾದ ಸೋಂಕಿತರಿಗೆ ನೀಡಲಾಗುತ್ತಿದೆ.



ದೇಶದಲ್ಲಿ ಏಳು ಕಂಪನಿಗಳು ಈ ರೆಮಿಡಿಸಿವಿರ್​ ಉತ್ಪಾದಿಸುತ್ತಿವೆ. ಕ್ಯಾಡಿಲಾ ಹೆಲ್ತ್​ ಕೇರ್​, ಡಾ. ರೆಡ್ಡಿಸ್​ ಲ್ಯಾಬೋರೇಟರೀಸ್​ ಮತ್ತು ಸಿಪ್ಲಾ ಈ ರೆಮಿಡಿಸಿವಿರ್​ ಇಂಜೆಕ್ಷನ್​ ಬೆಲೆಯನ್ನು ಕಡಿತಗೊಳಿಸಿದೆ. ಅಷ್ಟೇ ಅಲ್ಲದೇ ಅನೇಕ ಸಂಸ್ಥೆಗಳು ಜೀವ ರಕ್ಷಕವಾಗಿರುವ ಈ ಔಷಧದ ಬೆಲೆಯಲ್ಲಿ ಶೇ 50ರಷ್ಟು ಕಡಿತಗೊಳಿಸಿದೆ.

ಇದನ್ನು ಓದಿ: ರಾಜ್ಯದಲ್ಲಿ ಕೊರೋನಾ ಸ್ಪೋಟ; ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ

ಈ ಔಷಧದ ಬೆಲೆ ಕಡಿತಗೊಳಿಸಿರುವ ಬಗ್ಗೆ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಸದಾನಂದ ಗೌಡ ಅವರು ತಿಳಿಸಿದ್ದಾರೆ. ಸರ್ಕಾರದ ಮಧ್ಯಸ್ಥಿಕೆಯ ಮೇರೆಗೆ ಇದರ ಬೆಲೆಯನ್ನು ಸ್ವಯಂ ಪ್ರೇರಿತವಾಗಿ ಇಳಿಸಲು ಕಂಪನಿಗಳು ಮುಂದಾಗಿವೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಇನ್ನು ಈ ಕುರಿತು ಟ್ವೀಟ್​ ಮಾಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾಗಿರುವ ಮನ್ಸುಖ್​ ಮಾಂಡವಿಯಾ, ಸರ್ಕಾರದ ಹಸ್ತಕ್ಷೇಪದಿಂದಾಗಿ ರೆಮಿಡಿಸಿವಿರ್​ ಇಂಜೆಕ್ಷನ್​ ಬೆಲೆ ಕಡಿಮೆಯಾಗಿದೆ. ಕೋವಿಡ್​ 19 ಸೋಂಕಿನ ವಿರುದ್ಧ ಹೋರಾಡಲು ಸರ್ಕಾರದ ಜೊತೆ ಕೈ ಜೋಡಿಸೊದೊ ಔಷಧ ಕಂಪನಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
Published by: Seema R
First published: April 17, 2021, 10:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories