Pfizer Vaccine: ಕೊರೋನಾ ವಿರುದ್ಧ ಫಿಜರ್ ಬಯೋಟೆಕ್ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಬ್ರಿಟನ್!

Covid-19 Vaccine: ಫಿಜರ್ ಸಂಸ್ಥೆಯ ಸಿಇಒ ಆಲ್ಬರ್ಟ್ ಬೋರ್ಲಾ ಅವರು ಮಾತನಾಡಿ, ಇಡೀ ಜಗತ್ತು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಯುಕೆ ಈ ನಿರ್ಣಯ ತೆಗೆದುಕೊಂಡಿರುವುದು ಐತಿಹಾಸಿಕ ಕ್ಷಣವಾಗಿದೆ. ನಾವು ಉತ್ತಮ ಗುಣಮಟ್ಟದ ಹಾಗೂ ಸುರಕ್ಷಿತ ಲಸಿಕೆಯನ್ನು ವಿಶ್ವದಾದ್ಯಂತ ನೀಡಲು ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ.

ಲಸಿಕೆ ಚಿತ್ರಣ

ಲಸಿಕೆ ಚಿತ್ರಣ

  • Share this:
    ಜಗತ್ತಿನಲ್ಲಿ ಮೊದಲ ಬಾರಿಗೆ ಬ್ರಿಟನ್ ದೇಶ ಕೋವಿಡ್ -19 ವಿರುದ್ಧ ಫಿಜರ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಅಧಿಕೃತವಾಗಿ ಬಳಕೆ ಮಾಡಲು ಬುಧವಾರ ಅನುಮೋದನೆ ನೀಡಿದೆ. ಮುಂದಿನ ವಾರದಿಂದ ಲಸಿಕೆ ಹಂಚಿಕೆ ನಡೆಯಲಿದೆ.

    ಕೋವಿಡ್-19 ವಿರುದ್ಧ ಫಿಜರ್- ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಬಳಕೆ ಮಾಡಬಹುದು ಎಂದು ಇಂಡಿಪೆಂಡೆಂಟ್ ಮೆಡಿಸನ್ಸ್​ ಆ್ಯಂಡ್ ಹೆಲ್ತ್​ಕೆರ್ ಪ್ರಾಡಕ್ಸ್​ ರೆಗ್ಯುಲೆಟರಿ ಏಜೆನ್ಸಿ (ಎಂಎಚ್​ಆರ್​ಎ) ಮಾಡಿದ ಶಿಫಾರಸ್ಸನ್ನು ಸರ್ಕಾರದ ಬುಧವಾರ ಒಪ್ಪಿಕೊಂಡಿದೆ. ಮುಂದಿನ ವಾರದಿಂದ ಬ್ರಿಟನ್ ದೇಶಾದ್ಯಂತ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ಯುಕೆ ಸರ್ಕಾರ ಹೇಳಿದೆ.


    ಇದನ್ನು ಓದಿ: Sunny Deol: ಬಾಲಿವುಡ್ ನಟ, ಸಂಸದ ಸನ್ನಿ ಡಿಯೋಲ್​ಗೆ ಕೊರೋನಾ ಪಾಸಿಟಿವ್

    ಆರೋಗ್ಯ ಕಾರ್ಯದರ್ಶಿ ಮ್ಯಾಥ್ ಹನ್ಕಾಕ್ ಅವರು ಮಾತನಾಡಿ, ಇದೊಂದು ಸಂತೋಷದ ಸುದ್ದಿ. ಈ ಯೋಜನೆ ಮುಂದಿನ ವಾರದಿಂದಲೇ ಕಾರ್ಯಗತಗೊಳ್ಳಲಿದೆ. ಬ್ರಿಟನ್ ಸರ್ಕಾರ ಲಸಿಕೆಗೆ ಅನುಮೋದನೆ ನೀಡುವ ಮೂಲಕ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

    ಫಿಜರ್ ಸಂಸ್ಥೆಯ ಸಿಇಒ ಆಲ್ಬರ್ಟ್ ಬೋರ್ಲಾ ಅವರು ಮಾತನಾಡಿ, ಇಡೀ ಜಗತ್ತು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಯುಕೆ ಈ ನಿರ್ಣಯ ತೆಗೆದುಕೊಂಡಿರುವುದು ಐತಿಹಾಸಿಕ ಕ್ಷಣವಾಗಿದೆ. ನಾವು ಉತ್ತಮ ಗುಣಮಟ್ಟದ ಹಾಗೂ ಸುರಕ್ಷಿತ ಲಸಿಕೆಯನ್ನು ವಿಶ್ವದಾದ್ಯಂತ ನೀಡಲು ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ.
    Published by:HR Ramesh
    First published: