HOME » NEWS » National-international » PFIZER SAYS FINAL TRIAL RESULTS SHOW ITS COVID 19 VACCINE IS 95 EFFECTIVE SESR

Pfizer: ಕೊರೋನಾಗೆ ಫಿಜರ್​ ಶೇ 95ರಷ್ಟು ಪರಿಣಾಮಕಾರಿ ಲಸಿಕೆ; ತುರ್ತು ಅನುಮೋದನೆ ಪಡೆಯಲು ಸಿದ್ಧತೆ

ಜರ್ಮನ್​ ಪಾಲುದಾರಿಕೆಯಲ್ಲಿ ಈ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಇದು ಪರಿಣಾಮಕಾರಿಯಾಗಿದೆ, ಇದು ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಸಬಹುದಾಗಿದೆ

news18-kannada
Updated:November 18, 2020, 7:29 PM IST
Pfizer: ಕೊರೋನಾಗೆ ಫಿಜರ್​ ಶೇ 95ರಷ್ಟು ಪರಿಣಾಮಕಾರಿ ಲಸಿಕೆ; ತುರ್ತು ಅನುಮೋದನೆ ಪಡೆಯಲು ಸಿದ್ಧತೆ
ಲಸಿಕೆ ಚಿತ್ರಣ
  • Share this:
ಬಯೋನ್ ಟೆಕ್​ ಕಂಪನಿ ತಯಾರಿಸಿರುವ ಫಿಜರ್​ ಕೋವಿಡ್​-19 ಲಸಿಕೆಯ ಸಂಪೂರ್ಣ ಪ್ರಯೋಗಿಕ ಅಧ್ಯಯನ ನಡೆಸಿದ್ದು, ಇದು ಶೇ 95 ರಷ್ಟು ಪರಿಣಾಮಕಾರಿಯಾಗಿದೆ ಎಂದು ತೋರಿಸಿದೆ. ಅಲ್ಲದೇ ಲಸಿಕೆಯ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಕೆಲವೇ ದಿನಗಳಲ್ಲಿ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕೆ ಅಮೆರಿಕ ನಿಯಂತ್ರಕರಿಗೆ ಅರ್ಜಿ ಸಲ್ಲಿಸುವುದಾಗಿ ಕಂಪನಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಅಮೆರಿಕ ಮೂಲದ ಫಿಜರ್ ಸಂಸ್ಥೆ​ ಸಿಇಒ ಆಲ್ಬರ್ಟ್​ ಬೌರ್ಲಾ, ಕಳೆದ ಎಂಟು ತಿಂಗಳಿನಿಂದ ಕೊರೋನಾ ವಿರುದ್ಧದ ಹೋರಾಟದ ಪ್ರಮುಖ ಹೆಜ್ಜೆ ಇದಾಗಿದ್ದು, ಈ ಸೋಂಕನ್ನು ಶೀಘ್ರದಲ್ಲಿಯೇ ಅಂತ್ಯಗೊಳಿಸಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. ಜರ್ಮನ್​ ಪಾಲುದಾರಿಕೆಯಲ್ಲಿ ಈ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಇದು ಪರಿಣಾಮಕಾರಿಯಾಗಿದೆ, ಇದು ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಸಬಹುದಾಗಿದೆ. 65 ವರ್ಷ ಮೇಲ್ಪಟ್ಟವರಲ್ಲಿ ಈ ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೇ 94ರಷ್ಟು ಪರಿಣಾಮಕಾರಿಯಾಗಿ ಇದು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಯೋಗಿಕ ಪ್ರಯೋಗದ ಫಲಿತಾಂಶದಲ್ಲಿ ಲಸಿಕೆ ಶೇ 20 ರಷ್ಟು ಹೆಚ್ಚು ಪರಿಣಾಮಕಾರಿ ಎಂದು ತೋರಿಸಿದ ವಾರದೊಳಗೆ ಈ ಕುರಿತು ಅಂತಿಮ ವಿಶ್ಲೇಷಣೆಗೆ ಬರಲಾಗುವುದು. ಮೆಸೆಂಜರ್​ ಆರ್​ಎನ್​ಎ ಎಂದು ಪರಿಚಿತವಾಗಿರುವ ಹೊಸ ತಂತ್ರಜ್ಞಾಮದೊಂದಿಗೆ ಅಭಿವೃದ್ಧಿಪಡಿಸಿದ ಎರಡು ಲಸಿಕೆಗಳಿಂದ ಉತ್ತಮ ವರದಿ ನೀರಿಕ್ಷಿಸಲಾಗಿದ್ದು, ಇದು ಕೂಡ ಸೋಂಕನ್ನು ಕೊನೆಗೊಳಿಸುವ ಭರವಸೆ ಮೂಡಿಸಿದೆ.

ಇದನ್ನು ಓದಿ: ಬಿಜೆಪಿ ನಾಯಕಿ ಖುಷ್ಭೂ ಸುಂದರ್​ ಕಾರು ಅಪಘಾತ; ದೇವರೇ ನಿಮ್ಮನ್ನು ಕಾಪಾಡಿದ ಎಂದ ಸಿಟಿ ರವಿ

ಇನ್ನು ಈ ಲಸಿಕೆಯನ್ನು ಭಾರತದ ಬಳಕೆಗೆ ನಿರಾಕರಿಸಲಾಗಿದೆ. ಕಾರಣ ಇದನ್ನು ಮೈನಸ್​ 70 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ ಸಂಗ್ರಹಿಸಿಡಬೇಕು. ಇದು ಭಾರತದಲ್ಲಿ ದೊಡ್ಡ ಸವಾಲ್​ಆಗಿದೆ. ಈ ಹಿನ್ನಲೆ ಈ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್​ 19 ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಡಾ. ವಿಕೆ ಕೇಲ್​ ಈ ಕುರಿತು ಮಾತನಾಡಿದ್ದು, ಭಾರತೀಯ ಜನಸಂಖ್ಯೆಗೆ ಅಗತ್ಯವಿರುವಷ್ಟು ಪ್ರಮಾಂದ ಫಿಜರ್​ ಲಸಿಕೆ ಲಭ್ಯವಿಲ್ಲ. ಆದರೆ, ಸರ್ಕಾರವೂ ಈ ಕುತಿತ ಸಾಧ್ಯತೆಗಳನ್ನು ಪರಿಈಶಲಿಸಿ, ನಿಯಂತ್ರಕರ ಅನುಮೋದನೆಗಳನ್ನು ಪಡೆದು ಅದರ ಸಂಗ್ರಹಣೆ ಮತ್ತು ವಿತರಣೆಗೆ ಕಾರ್ಯತಂತ್ರ ರೂಪಿಸುತ್ತದೆ ಎಂದಿದ್ದಾರೆ.

ಇದನ್ನು ಶೇಖರಿಸಲು ಮೈನಸ್​ 70 ಡಿಗ್ರಿ ಸೆಲ್ಸಿಯಸ್​ ಕಡಿಮೆ ತಾಪಮಾನದಲ್ಲಿ ಲಸಿಕೆ ಸಂಗ್ರಹಿಸಲು ಕೋಲ್ಡ್​ ಚೈನ್​ಗಳ ವ್ಯವಸ್ಥೆ ನಿರ್ಮಿಸುವುದು ಕೂಡ ಸವಾಲ್​ ಆಗಿದೆ. ಇದನ್ನು ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸುವ ಕುರಿತು ಕಾರ್ಯತಂತ್ರ ರಚಿಸಲಾಗುವುದು ಎಂದರು
Published by: Seema R
First published: November 18, 2020, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories