High Court Judge ವಿರುದ್ಧ ಕೇಸರಿಕರಣದ ಆರೋಪ ಮಾಡಿದ್ದ PFI ಮುಖಂಡ! ಪೊಲೀಸರಿಂದ ಆರೋಪಿ ಅರೆಸ್ಟ್
ಕೇರಳದ ಪಿಎಫ್ಐ ಮುಖಂಡ ಯಾಹಿನ್ ತಂಗಾಲ್ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ . ಆತ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ. ಇದೇ ಕಾರಣಕ್ಕೆ ಆತ ಜೈಲು ಪಾಲಾಗಿದ್ದಾನೆ.
ಕೇರಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front Of India) ಸಂಘಟನೆ ನಾಯಕನೊಬ್ಬ (Leader) ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳ (Kerala High Court Judge) ವಿರುದ್ಧ ವಿವಾದಾತ್ಮಕ ಹೇಳಿಕೆ (Controversial Statement) ನೀಡಿ, ಇದೀಗ ಜೈಲು (Jail) ಪಾಲಾಗಿದ್ದಾನೆ. ಕೇರಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮುಖಂಡ ಯಾಹಿಯಾ ತಂಗಾಲ್ (Yahya Thangal) ವಿವಾದ ಸೃಷ್ಟಿಸಿದ್ದರು. ನ್ಯಾಯಮೂರ್ತಿಗಳು ಬಿಜೆಪಿ (BJP), ಆರ್ಎಸ್ಎಸ್ (RSS) ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಅರ್ಥದಲ್ಲಿ ಆರೋಪಿಸಿದ್ದ ಯಾಹಿಯಾ ತಂಗಾಲ್, ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳು ಕೇಸರಿ ಬಣ್ಣದ ಒಳ ಉಡುಪು (Innerwear) ಹಾಕುತ್ತಾರೆ ಅಂತ ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು (Police), ಆತನನ್ನು ಅರೆಸ್ಟ್ (Arrest) ಮಾಡಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಕ
ಕಳೆದ ವಾರ ಪಿಎಫ್ಐ ಅಲಪ್ಪುಳದಲ್ಲಿ ನಡೆದ ಮೆರವಣಿಗೆಯಲ್ಲಿ ಬಾಲಕನೊಬ್ಬ ಹಿಂದೂ ಮತ್ತು ಕ್ರೈಸ್ತರು ಅಂತ್ಯಕ್ರಿಯೆಗಳಿಗೆ ಸಿದ್ಧರಾಗುವಂತೆ ಘೋಷಣೆ ಕೂಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಅದರ ಬಗ್ಗೆ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಮೆರವಣಿಗೆಯ ಆಯೋಜಕರನ್ನೇ ಹೊಣೆಯಾಗಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು. ಇದೇ ಕಾರಣಕ್ಕೆ ಯಾಹಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ನ್ಯಾಯಮೂರ್ತಿಗಳ ಖಾಸಗಿ ವಿಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ
ನಿನ್ನೆ ಕೇರಳದ ಅಲಪ್ಪುಳದಲ್ಲಿ ನಡೆದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಯಾಹಿನ್ ತಂಗಾಲ್, ನ್ಯಾಯಾಲಯಗಳು ಈಗ ಬಹಳ ಸುಲಭವಾಗಿ ಆಘಾತಕ್ಕೆ ಒಳಗಾಗುತ್ತಿವೆ. ನಮ್ಮ ಅಲಪ್ಪುಳ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೇಳಿದ ಬಳಿಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಆಘಾತ ಉಂಟಾಗುತ್ತಿದೆ. ಇದಕ್ಕೆ ಕಾರಣ ಏನೆಂದು ನಿಮಗೆ ಗೊತ್ತೇ? ಏಕೆಂದರೆ ಅವರ ಒಳ ಉಡುಪು ಕೇಸರಿ. ಅದು ಕೇಸರಿ ಬಣ್ಣದ್ದು ಆಗಿರುವುದರಿಂದ, ಅವರು ಬಹಳ ಬೇಗ ಕೆರಳುತ್ತಾರೆ. ಯಾಕೆಂದ್ರೆ ಅದು ಅವರಿಗೆ ಸುಡುವ ಅನುಭವವಾಗುತ್ತದೆ. ಅದು ಅವರಿಗೆ ಕಸಿವಿಸಿ ಉಂಟುಮಾಡುತ್ತದೆ" ಎಂದು ಹೇಳಿಕೆ ನೀಡಿದ್ದ.
ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಪೊಲೀಸರು, ಯಾಹಿನ್ ತಂಗಾಲ್ನನ್ನು ಇಂದು ಬಂಧಿಸಿದ್ದಾರೆ. ಇಂದು ಮುಂಜಾನೆ ತ್ರಿಶೂರ್ನ ಪೆರುಂಪಿಲಾವ್ನಲ್ಲಿರುವ ಮನೆಯಿಂದ ಬಂಧಿಸಲಾಯಿತು. ನಂತರ ಅವರನ್ನು ಅಲಪ್ಪುಳಕ್ಕೆ ಕರೆದೊಯ್ಯಲಾಯಿತು ಅಂತ ಕೇರಳದ ಮಾಧ್ಯಮಗಳು ವರದಿ ಮಾಡಿವೆ.
“ಕೇರಳ ಸೌದಿ ಅರೆೇಬಿಯಾದಂತೆ ಕಾಣಿಸುತ್ತಿದೆ”
ಮತ್ತೊಂದೆಡೆ ಕೇರಳ ಕೇರಳದ ಕೆಲವು ಜಿಲ್ಲೆಗಳು ಸೌದಿ ಅರೇಬಿಯಾದಂತೆ ಭಾಸವಾಗುತ್ತಿವೆ. ಅಲ್ಲಿ ದೇಶ ವಿರೋಧಿ ಚಿಂತನೆಗಳು ವ್ಯಾಪಕವಾಗಿ ಹರಡುತ್ತಿವೆ’ ಎಂದು ಬಿಜೆಪಿ ರಾಜ್ಯಸಭಾ ಸಂಸದ ಕೆ.ಜೆ. ಅಲ್ಫೋನ್ಸ್ ಕಣ್ಣಂತಾನಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೇರಳದಲ್ಲಿ ಇಸ್ಲಾಂ ಧರ್ಮದ ಕಡೆಗಿನ ಜನರ ಒಲವು ಹೆಚ್ಚಾಗುತ್ತಿದೆ. ಇದು ಅತ್ಯಂತ ದುಃಖಕರ ಸಂಗತಿ. ನೀವು ಕೇರಳದ ಕೆಲವು ಜಿಲ್ಲೆಗಳಿಗೆ ಹೋದರೆ, ಸೌದಿ ಅರೇಬಿಯಾದಲ್ಲಿದ್ದಂತೆ ಭಾಸವಾಗುತ್ತದೆ. ಜನರ ವರ್ತನೆಗಳಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ವಿಶೇಷವಾಗಿ ಅವರು ಧರಿಸುವ ಉಡುಪು ದೇಶ ವಿರೋಧಿ ಚಿಂತನೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು ಅಲ್ಪಸಂಖ್ಯಾತರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಇನ್ನು ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿದಂತೆ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಅಲ್ಫೋನ್ಸ್ ತಿಳಿಸಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ