• Home
  • »
  • News
  • »
  • national-international
  • »
  • PFIಗೆ ಶಾಕ್ ಮೇಲೆ ಶಾಕ್; ಕೇರಳ, ತಮಿಳುನಾಡು ಸರ್ಕಾರದಿಂದಲೂ ಬ್ಯಾನ್

PFIಗೆ ಶಾಕ್ ಮೇಲೆ ಶಾಕ್; ಕೇರಳ, ತಮಿಳುನಾಡು ಸರ್ಕಾರದಿಂದಲೂ ಬ್ಯಾನ್

ಕೇರಳ ಸಿಎಂ ಮತ್ತು ತಮಿಳುನಾಡು ಸಿಎಂ

ಕೇರಳ ಸಿಎಂ ಮತ್ತು ತಮಿಳುನಾಡು ಸಿಎಂ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಫೇಸ್‌ಬುಕ್ ಪುಟ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸಹ ಇನ್ನು ಮುಂದೆ ಲಭ್ಯವಿರುವುದಿಲ್ಲ.

  • Share this:

ತಿರುವನಂತಪುರಂ: ಕೇಂದ್ರ ಗೃಹ ಸಚಿವಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (PFI) ನಿಷೇಧಿಸಿದ ಒಂದು ದಿನದ ನಂತರ ತಮಿಳುನಾಡು (Tamil Nadu Government)  ಮತ್ತು ಕೇರಳ ಸರ್ಕಾರಗಳು (Kerala Government) ಸಹ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನುಬಾಹಿರ ಎಂದು ಘೋಷಿಸಿ ಆದೇಶ ಹೊರಡಿಸಿವೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಈ ಸಂಘಟನೆಯ ಹಲವಾರು ನಾಯಕರ ಟ್ವಿಟರ್ ಖಾತೆಯನ್ನು (PFI Twitter Down) ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಿಂದ ತೆಗೆದುಹಾಕಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಫೇಸ್‌ಬುಕ್ ಪುಟ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸಹ ಇನ್ನು ಮುಂದೆ ಲಭ್ಯವಿರುವುದಿಲ್ಲ.


ಸಂಸ್ಥೆಯ ಖಾತೆ, @PFIofficial, ಸುಮಾರು 81,000 ಅನುಯಾಯಿಗಳನ್ನು ಹೊಂದಿತ್ತು. ಟ್ವಿಟರ್​ನಲ್ಲಿ ಪಿಎಫ್​ಐ ಅಧ್ಯಕ್ಷ OMA ಸಲಾಮ್ ಕೇವಲ 50,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿದ್ದರು. ಸುಮಾರು 85,000 ಅನುಯಾಯಿಗಳನ್ನು ಹೊಂದಿದ್ದ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಅವರ ಹ್ಯಾಂಡಲ್‌ಗಳನ್ನು ತಡೆಹಿಡೆಯಲಾಗಿದೆ. ನಿಷೇಧಕ್ಕೂ ಮುನ್ನ ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ನಡೆಸಿದ ದಾಳಿಗಳಲ್ಲಿ ಬಂಧಿತರಾದ 200ಕ್ಕೂ ಹೆಚ್ಚು PFI ನಾಯಕರಲ್ಲಿ ಇವರಿಬ್ಬರೂ ಸೇರಿದ್ದಾರೆ.


ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಡಿ ನಿಷೇಧ
"ಭಯೋತ್ಪಾದನಾ ಚಟುವಟಿಕೆಗಳು" ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ PFI ಮತ್ತು ಅದರ ಸಹವರ್ತಿಗಳನ್ನು ಐದು ವರ್ಷಗಳ ಕಾಲ ಕೇಂದ್ರವು ಬುಧವಾರ ನಿಷೇಧಿಸಿದೆ.


ನಿಷೇಧದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಉದ್ದೇಶಿಸಿರುವ PFI, ಈ ಆರೋಪಗಳನ್ನು ನಿರಾಕರಿಸಿದೆ. ಆದರೆ ಸರ್ಕಾರದ ಕ್ರಮದ ನಂತರ ತನ್ನ ಘಟಕಗಳನ್ನು  ವಿಸರ್ಜಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ನಿಷೇಧಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಸೇರಿವೆ.


ಎಸ್​​ಡಿಪಿಐ ಕಚೇರಿ ಮೇಲೂ ದಾಳಿ
ಶಿವಮೊಗ್ಗದ ಎಸ್​​ಡಿಪಿಐ ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಪೊಲೀಸರು ಹಾಗೂ ತಹಶೀಲ್ದಾರ್ ಐವರು ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮೊಬೈಲ್ ಸೇರಿದಂತೆ, ಹಲವು ದಾಖಲಾತಿಗಳು ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ: Chief of Defence Staff: ಸೇನಾ ಪಡೆಗಳ ನೂತನ ಮುಖ್ಯಸ್ಥರ ನೇಮಕ, ಬಿಪಿನ್ ರಾವತ್ ಸ್ಥಾನ ತುಂಬಿದ ಅನಿಲ್ ಚೌಹಾಣ್


ನಗರದ ಬೈಪಾಸ್ ರಸ್ತೆಯಲ್ಲಿರುವ ಎಸ್​ಡಿಪಿಐ ಕಚೇರಿ ಬೀಗ ಒಡೆದು ಒಳಗೆ ನುಗ್ಗಿದ ಅಧಿಕಾರಿಗಳು, ಕಚೇರಿಯಲ್ಲಿದ್ದ ಕೆಲವು ಪಾಂಪ್ಲೆಟ್ ವಶಕ್ಕೆ ಪಡೆದು ವಾಪಸ್​ ಆಗಿದ್ದಾರೆ. ಬುಧವಾರ ತಡರಾತ್ರಿ ನಡೆದ ಪೊಲೀಸರು ಉಡುಪಿ (Udupi) ಜಿಲ್ಲೆಯ ವಿವಿಧೆಡೆ ಪಿಎಫ್ಐ (PFI) ಮತ್ತು ಎಸ್​ಡಿಪಿಐ ಸಂಘಟನೆಗೆ ಸೇರಿದ ಹಲವು ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ ಜಿಲ್ಲೆಯಲ್ಲಿ PFI ನ ಯಾವುದೇ ಕಚೇರಿ ಇಲ್ಲ. ಹಾಗಾಗಿ SDPI ಕಚೇರಿಯಲ್ಲಿಯೇ PFI ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ಹಿನ್ನೆಲೆ SDPI ಕಚೇರಿಯಲ್ಲಿಯೇ ಇವರ ಚಟುವಟಿಕೆಗಳು ನಡೆಯುತ್ತಿದ್ದವು.


ಇದನ್ನೂ ಓದಿ: PFI Ban: ಪಿಎಫ್‌ಐ ನಿಷೇಧ ಪರಿಹಾರವಲ್ಲ, RSS ಕೂಡಾ ಬ್ಯಾನ್ ಮಾಡಲಿ: ಕಾಂಗ್ರೆಸ್ ಸಂಸದ ಸುರೇಶ್


ಈ ಹಿನ್ನೆಲೆ ಉಡುಪಿಯ ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡ, ಹೂಡೆ, ಗಂಗೊಳ್ಳಿ ಕಚೇರಿ ಮೇಲೆ ದಾಳಿ ನಡೆದಿದೆ. ಎಸ್​ಡಿಪಿಐ ನಾಯಕರಾದ ಬಶೀರ್ ಮತ್ತು ನಜೀರ್ ಮನೆ ಮೇಲೆ ದಾಳಿ ನಡೆಸಿದ್ದರು. ಬೀಗ ಹಾಕಿದ ಹಿನ್ನೆಲೆ ಪೊಲೀಸರು ವಾಪಸ್ ಆಗಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: