HOME » NEWS » National-international » PF TAX RULES CHECK EPFO RULES THAT WILL AFFECT YOUR EPF PROVIDENT FUND CONTRIBUTION FROM 1ST APRIL THIS YEAR STG LG

ಪಿಎಫ್ ಬಳಕೆದಾರರ ಗಮನಕ್ಕೆ: ಏಪ್ರಿಲ್ 1ರಿಂದ ತೆರಿಗೆ ನಿಯಮಗಳು ಬದಲಾವಣೆ

ಏಪ್ರಿಲ್ 1ರಿಂದ ಒಬ್ಬರ ಪಿಎಫ್ ಯೋಜನೆಗಳ ಮೇಲೆ ವಿಧಿಸುವ ಆದಾಯ ತೆರಿಗೆ ನಿಯಮಗಳು ಬದಲಾವಣೆ ಆಗಲಿವೆ. ಏಪ್ರಿಲ್ 1ರಿಂದ 2021-22ರ ಆರ್ಥಿಕ ವರ್ಷದಲ್ಲಿ ಒಬ್ಬರ ಪಿಎಫ್ ಕೊಡುಗೆಗೆ 2.5 ಲಕ್ಷ ರೂ.ಗಿಂತ ಕಡಿಮೆ ವಂತಿಗೆ ನೀಡುವವರಿಗೆ ತೆರಿಗೆ ವಿನಾಯಿತಿ ಸಿಗಲಿದೆ.

news18-kannada
Updated:February 22, 2021, 3:14 PM IST
ಪಿಎಫ್ ಬಳಕೆದಾರರ ಗಮನಕ್ಕೆ: ಏಪ್ರಿಲ್ 1ರಿಂದ ತೆರಿಗೆ ನಿಯಮಗಳು ಬದಲಾವಣೆ
ಪ್ರಾತಿನಿಧಿಕ ಚಿತ್ರ
  • Share this:
ಭವಿಷ್ಯ ನಿಧಿ (ಪಿಎಫ್)ಗೆ ಆರ್ಥಿಕ ವರ್ಷವೊಂದರಲ್ಲಿ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ವಂತಿಗೆ ನೀಡುವವರಿಗೆ 2021-22ರ ಹಣಕಾಸಿನ ವರ್ಷದ ವೇಳೆ ಜೇಬಿಗೆ ಕತ್ತರಿ ಬೀಳಲಿದೆ. 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ವಂತಿಗೆ ನೀಡುವವರಿಗೆ ಮುಂದಿನ ಹಣಕಾಸು ವರ್ಷ ಗಳಿಸುವ ಬಡ್ಡಿಗೆ ತೆರಿಗೆ ವಿನಾಯಿತಿ ಲಭಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಮಂಡಿಸಿದ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಹಾಗಾಗಿ ಈ ಹೊಸ ಪಿಎಫ್ ತೆರಿಗೆ ನಿಯಮವೂ 2021-22ರ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ. ಆದರಿಂದ 2021ರ ಏಪ್ರಿಲ್ 1ರಿಂದ ಪಿಎಫ್ ಮತ್ತು ಇಪಿಎಫ್ ಖಾತೆ ಮೇಲೆ ವಿಧಿಸುವ ಆದಾಯ ತೆರಿಗೆ ನಿಯಮಗಳು ಬದಲಾವಣೆ ಆಗಲಿವೆ.

ಹೆಚ್ಚಿನ ಆದಾಯ ಹೊಂದಿದವರಿಗೆ ಶಾಕ್

ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹೆಚ್ಚಿನ ಆದಾಯವಿರುವ ಉದ್ಯೋಗಿಗಳೂ ತೆರಿಗೆ ವಿನಾಯಿತಿ ಪಡೆಯುತ್ತಿರುವುದನ್ನು ಗಮನಿದ್ದೇವೆ. ಹಾಗಾಗಿ ಪಿಎಫ್​​ಗೆ ವಾರ್ಷಿಕ 2.5 ಲಕ್ಷ ರೂ. ಮಿತಿಯೊಳಗೆ ವಂತಿಗೆ ನೀಡುವ ಉದ್ಯೋಗಿಗಳಿಗೆ ಮಾತ್ರ ಈ ಸೌಲಭ್ಯ ಮುಂದುವರಿಸಲು ಸರ್ಕಾರ ನಿರ್ಧರಿಸುತ್ತದೆ ಎಂದಿದ್ದರು.ಇದೀಗ ಈ ನಿಯಮವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರಿಂದ ಹೆಚ್ಚಿನ ಆದಾಯ ಹೊಂದಿದವರಿಗೆ ತೆರಿಗೆ ಬೀಳಲಿದೆ.

ಅಪಾರ್ಟ್​​ಮೆಂಟ್ಸ್​ ಸೇರಿ ದೊಡ್ಡ ಕಟ್ಟಡಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ ಕಡ್ಡಾಯ; ಡಿಸಿಎಂ ಅಶ್ವಥ್ ನಾರಾಯಣ

ಏಪ್ರಿಲ್ 1ರಿಂದ ಒಬ್ಬರ ಪಿಎಫ್ ಯೋಜನೆಗಳ ಮೇಲೆ ವಿಧಿಸುವ ಆದಾಯ ತೆರಿಗೆ ನಿಯಮಗಳು ಬದಲಾವಣೆ ಆಗಲಿವೆ. ಏಪ್ರಿಲ್ 1ರಿಂದ 2021-22ರ ಆರ್ಥಿಕ ವರ್ಷದಲ್ಲಿ ಒಬ್ಬರ ಪಿಎಫ್ ಕೊಡುಗೆಗೆ 2.5 ಲಕ್ಷ ರೂ.ಗಿಂತ ಕಡಿಮೆ ವಂತಿಗೆ ನೀಡುವವರಿಗೆ ತೆರಿಗೆ ವಿನಾಯಿತಿ ಸಿಗಲಿದೆ. ಆದರೆ, ಪಿಎಫ್​​​​ಗೆ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚು ವಂತಿಗೆ ನೀಡುವವರಿಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಇನ್ನು, ವರ್ಷದಲ್ಲಿ ಗಳಿಸಿದ ಆದಾಯವನ್ನು ನೋಡಿ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ.

'ಉದ್ಯೋಗಿಯ ವೇತನದ 12 ಪ್ರತಿಶತದಷ್ಟು ಪಿಎಫ್ಗೆ ಹೂಡಿಕೆ'ಬಜೆಟ್ ಮಂಡನೆ ವೇಳೆ ಈ ನಿರ್ಧಾರದಿಂದ ಕೆಲವು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮರ್ಥಿಸಿಕೊಂಡಿದ್ದರು. ಏಕೆಂದರೆ ಹೆಚ್ಚಿನ ಆದಾಯ ಗಳಿಸುವ ವ್ಯಕ್ತಿಗಳು ಈ ನಿಯಮದಡಿ ಬರುವುದಿಲ್ಲ. ಪಿಎಫ್ ಅನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಈ ನಿರ್ಧಾರವು ಹೆಚ್ಚು ಗಳಿಸುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನು, ಒಬ್ಬ ಉದ್ಯೋಗಿಯ ಮೂಲ ವೇತನದ 12 ಪ್ರತಿಶತವನ್ನು ಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
Published by: Latha CG
First published: February 22, 2021, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories