EPFO : ಈ ಹೊಸಾ ನಿಯಮ ಪಾಲಿಸದಿದ್ರೆ ಮುಂದಿನ ತಿಂಗಳಿಂದ ಪಿಎಫ್ ಹಣ ಸಿಗುವುದಿಲ್ಲ

Employees Provident Fund: ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದರೋ ಇಲ್ಲವೋ ಎಂಬುದನ್ನ ಖಚಿತಪಡಿಸಿಕೊಳ್ಳುವುದು ಹಾಗೂ ಆಧಾರ್ ಲಿಂಕ್ ಮಾಡಿಸುವುದು ಅವರ ಉದ್ಯೋಗದಾತರ ಜವಾಬ್ದಾರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Employees Provident Fund:  ಉದ್ಯೋಗಿಗಳ ಭವಿಷ್ಯ ನಿಧಿ (EPF) ಹೊಂದಿರುವವರು ತಮ್ಮ ಆಧಾರ್ ಕಾರ್ಡ್ ಅನ್ನು ಪ್ರಾವಿಡೆಂಟ್ ಫಂಡ್ (PF) ಖಾತೆಗಳೊಂದಿಗೆ ಸೆಪ್ಟೆಂಬರ್ 1 ರ ಮೊದಲು ಲಿಂಕ್ ಮಾಡಬೇಕು  ಎಂದು ಕಾರ್ಮಿಕ ಇಲಾಖೆ ಆದೇಶ ನೀಡಿದೆ. ಉದ್ಯೋಗಿಗಳು ತಮ್ಮ ಪಿಎಫ್ ಕೊಡುಗೆ ಮತ್ತು ಇತರ ಪ್ರಯೋಜನಗಳನ್ನು  ಹಾಗೂ ಸೌಲಭ್ಯವನ್ನು ಪಡೆಯಲು ಇದು ಅವಶ್ಯಕ ಎಂದು ಇಲಾಖೆ ಸ್ಪಷ್ಟಪಡಿಸಿದೆ.  ಈ ಹಿಂದಿ 2021ರ ಜೂನ್ 1 ಕ್ಕೆ ಗಡುವು  ನೀಡಲಾಗಿತ್ತು. ಆದರೆ ಇದೀಗ ಅದನ್ನು ಮುಂದೂಡಲಾಗಿದ್ದು,  ಸೆಪ್ಟೆಂಬರ್ ಒಂದರ ತನಕ ಸಮಯ ನೀಡಲಾಗಿದೆ. ಇನ್ನು ಈ ಹೊಸ ನಿಯಮವನ್ನು ಜಾರಿಗೆ ತರಲು ಕಾರ್ಮಿಕ ಸಚಿವಾಲಯ ಸಾಮಾಜಿಕ ಭದ್ರತೆ ಕೋಡ್ನ ಸೆಕ್ಷನ್ 142 ಅನ್ನು ತಿದ್ದುಪಡಿ ಮಾಡಿದೆ. ಸೆಕ್ಷನ್ 142 ರ ಪ್ರಕಾರ ಉದ್ಯೋಗಿ ಅಥವಾ ಅಸಂಘಟಿತ ಕೆಲಸಗಾರ ಅಥವಾ ಇತರ ಯಾವುದೇ ವ್ಯಕ್ತಿಯ ಗುರುತನ್ನ ಆಧಾರ್ ಸಂಖ್ಯೆಯ ಮೂಲಕ  ನೀಡಲು ಅವಕಾಶ ಮಾಡಿಕೊಡುತ್ತದೆ. ಪಿಎಫ್ಗೆ ಸಂಬಂಧಿಸಿದ  ಸೌಲಭ್ಯ ಮತ್ತು ಸೇವೆಯನ್ನು ಈ ಕೋಡ್ ಅಡಿಯಲ್ಲಿ ಪಡೆಯಬಹುದು.


ಯುಎಎನ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ. 1 ಸೆಪ್ಟೆಂಬರ್ 2021 ರಿಂದ, ಆಧಾರ್ ಲಿಂಕ್ ಮಾಡದ ಉದ್ಯೋಗಿಗಳಿಗೆ ಪಿಎಫ್ ಪಾವತಿಯಾಗುವುದಿಲ್ಲ ಎಂದು ಡೆಲಾಯಿಟ್ ಇಂಡಿಯಾದ ಪಾಲುದಾರ ಸರಸ್ವತಿ ಕಸ್ತೂರಿ ರಂಗನ್ ಹೇಳಿದ್ದಾರೆ. ಇನ್ನು ಆಧಾರ್ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ಕೇವಲ ಪಿಎಫ್ ಮಾತ್ರವಲ್ಲದೇ ಅದರ ಅಡಿಯಲ್ಲಿ ಬರುವ ಯಾವುದೇ ಸೌಲಭ್ಯವನ್ನು ಉದ್ಯೋಗಿಗಳಿಗೆ ನೀಡಲಾಗುವುದಿಲ್ಲ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: ಕೋವಿಶೀಲ್ಡ್​-ಕೋವಾಕ್ಸಿನ್​ ಲಸಿಕೆಗಳ ಮಿಶ್ರಣ ಅತ್ಯಂತ ಪರಿಣಾಮಕಾರಿ; ಅಧ್ಯಯನದಲ್ಲಿ ಬಯಲು

ಈ ಸಾಮಾಜಿಕ ಭದ್ರತೆ ಸಂಹಿತೆ, 2020  ಎಲ್ಲ ಸಂಘಟಿತ/ಅಸಂಘಟಿತ ಅಥವಾ ಯಾವುದೇ ಇತರ ವಲಯಗಳಲ್ಲಿನ ಎಲ್ಲಾ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ಗುರಿಯೊಂದಿಗೆ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮತ್ತು ಕ್ರೋಡಿಕರಿಸುವ ಶಾಸನವಾಗಿದೆ.

ಈ ಸಂಹಿತೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲವಾದರೂ, ಕೋಡ್ನ ಸೆಕ್ಷನ್ 142 ಅನ್ನು ಜಾರಿಗೆ ತರುವಂತೆ  ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಜೂನ್ 3 ರಂದು ಆದೇಶಿಸಿದೆ. ಇದು ನೋಂದಣಿ  ಮಾಡಿಕೊಳ್ಳಲು ಬಯಸುವ ಉದ್ಯೋಗಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯ ಹಾಗೂ ಈ ಮೂಲಕ ಅದರ ಅಡಿಯಲ್ಲಿ ಬರುವ ಪ್ರಯೋಜನಗಳು ಅಥವಾ ವಿವಿಧ ಯೋಜನೆಗಳ ಅಡಿಯಲ್ಲಿ ಯಾವುದೇ  ಹಣವನ್ನು ಸ್ವೀಕರಿಸಬಹುದು.

ಇದನ್ನೂ ಓದಿ: ದೆಹಲಿಯಲ್ಲಿ ಕೊರೋನಾ ನಿಯಮ ಉಲ್ಲಂಘನೆ ದಂಡ: ಜೂನ್‌ನಲ್ಲಿ 25 ಕೋಟಿ, ಜುಲೈನಲ್ಲಿ 36 ಕೋಟಿ ಸಂಗ್ರಹ

ಈಗಾಗಲೇ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು, ಮತ್ತೆ ಹೆಚ್ಚಿನ ಗಡುವು ನೀಡಲಾಗುವುದಿಲ್ಲ ಎಂದು ಇಲಾಖೆ ಎಚ್ಚರಿಸಿದೆ. ಇಪಿಎಫ್‌ಒ ಅಧಿಸೂಚನೆಯನ್ನು ಹೊರಡಿಸಿದೆ. ಅಲ್ಲದೇ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದರೋ ಇಲ್ಲವೋ ಎಂಬುದನ್ನ ಖಚಿತಪಡಿಸಿಕೊಳ್ಳುವುದು ಹಾಗೂ ಆಧಾರ್ ಲಿಂಕ್ ಮಾಡಿಸುವುದು ಅವರ ಉದ್ಯೋಗದಾತರ  ಅಂದರೆ ಕೆಲಸ ನೀಡಿರುವ ಕಂಪನಿಯವರ ಜವಾಬ್ದಾರಿಯಾಗಿದೆ ಎಂದು ಇಲಾಖೆ ಹೇಳಿದೆ.

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: