ಹೊಸ ದಾಖಲೆ ಮಟ್ಟ ತಲುಪಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ


Updated:September 3, 2018, 2:18 PM IST
ಹೊಸ ದಾಖಲೆ ಮಟ್ಟ ತಲುಪಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

Updated: September 3, 2018, 2:18 PM IST
- ನ್ಯೂಸ್18 ಕನ್ನಡ

ನವದೆಹಲಿ(ಸೆ. 03): ರೂಪಾಯಿ ಬೆಲೆ ಪ್ರಪಾತಕ್ಕೆ ಕುಸಿಯುತ್ತಿರುವಂತೆಯೇ ಪೆಟ್ರೋಲ್ ಬೆಲೆ ಗಗನಕ್ಕೇರುವುದು ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 70 ಪೈಸೆಯಷ್ಟು ಏರಿದೆ. ಡೀಸೆಲ್ ಬೆಲೆ ಏರಿಕೆ 1 ರೂಪಾಯಿ ಗಡಿ ದಾಟಿದೆ.

ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 81.82 ರೂಪಾಯಿ ತಲುಪಿದರೆ, ಡೀಸೆಲ್ ಬೆಲೆ 73.52 ರೂ. ಆಗಿದೆ.

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಬರೋಬ್ಬರಿ 86.56 ರೂಪಾಯಿ ಮಟ್ಟಕ್ಕೆ ಏರಿದೆ. ಈ ನಗರದಲ್ಲಿ ಡೀಸೆಲ್ ಬೆಲೆ ಕೂಡ 75 ರೂಪಾಯಿ ಗಡಿ ದಾಟಿದೆ.

ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 79.15 ಮತ್ತು 71.15 ರೂ ತಲುಪಿವೆ.

ರಾಜ್ಯ ಸರಕಾರಗಳ ಪ್ರತ್ಯೇಕ ವ್ಯಾಟ್ ತೆರಿಗೆಯಿಂದಾಗಿ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಿದೆ. ದೆಹಲಿಯಲ್ಲಿ ಕಡಿಮೆ ವ್ಯಾಟ್ ಇರುವುದರಿಂದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಲ್ಲಿ ಕಡಿಮೆ ಇರುತ್ತದೆ. ಮುಂಬೈನಲ್ಲಿ ಅತೀಹೆಚ್ಚು ವ್ಯಾಟ್ ತೆರಿಗೆ ಇದ್ದು, ಅಲ್ಲಿ ಪೆಟ್ರೋಲ್ ಬೆಲೆ ಏರಿಕೆ ತುಸು ಹೆಚ್ಚೇ ಇರುತ್ತದೆ.
Loading...

ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್​ಜಿ, ಪಿಎನ್​ಜಿ ಇತ್ಯಾದಿ ಪೆಟ್ರೋಲಿಯಮ್ ಉತ್ಪನ್ನಗಳ ಬೆಲೆಗಳೂ ಹೆಚ್ಚಳವಾಗಿವೆ.

ಪೆಟ್ರೋಲ್ ಉತ್ಪನ್ನಗಳ ಈ ಪರಿ ಹೆಚ್ಚಳಕ್ಕೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹೆಚ್ಚಳವಾಗುತ್ತಿರುವುದು, ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಪ್ರಮುಖ ಕಾರಣವಾಗಿದೆ. ಕಳೆದ ಒಂದು ತಿಂಗಳಲ್ಲಿ ಪೆಟ್ರೋಲ್ ಬೆಲೆ 2 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...