ವಾಹನ ಸವಾರರಿಗೆ ಕಹಿಸುದ್ದಿ: ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಏರಿಕೆ!

ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರದಿಂದ ವಾಹನ ಸವಾರರು ನಿರಾಳರಾಗಿದ್ದರು. ಎರಡು ದಿನಗಳ ಹಿಂದೆಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣ ಇಳಿಕೆಯಾಗಿತ್ತು. ದೇಶದ ಪ್ರಮುಖ ಮಹಾನಗರಗಳಲ್ಲಿಯೇ ಪೆಟ್ರೋಲ್ ದರ 5 ರಿಂದ 7 ರೂಗಳವರೆಗೂ ಕಡಿಮೆಯಾಗಿತ್ತು. ಇಂದಿನ ಏರಿಕೆಯಿಂದಾಗಿ ತೈಲೋತ್ಪನ್ನಗಳ ಬೆಲೆ ವಾಹನ ಸವಾರರು ಪರದಾಡುವಂತಾಗಿದೆ.

Ganesh Nachikethu | news18
Updated:January 22, 2019, 4:00 PM IST
ವಾಹನ ಸವಾರರಿಗೆ ಕಹಿಸುದ್ದಿ: ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಏರಿಕೆ!
ಪೆಟ್ರೋಲ್​​ ಬಂಕ್​​
Ganesh Nachikethu | news18
Updated: January 22, 2019, 4:00 PM IST
ನವದೆಹಲಿ(ಜ.22): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಬ್ಯಾರೆಲ್‌ಗೆ ರೂಗಳಾಗಿ ಏರಿಕೆಯಾಗಿದೆ. ಹೀಗಾಗಿ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಏರಿಕೆಯಾಗಿದೆ. ಕಳೆದ ಮೂರು ತಿಂಗಳಿನಿಂದ ಸತತವಾಗಿ ಪೆಟ್ರೋಲ್​​-ಡೀಸೆಲ್ ದರ ಇಳಿಕೆಯಾಗುತ್ತಿದೆ ಆದರೆ,ಇಂದು ಏರಿಕೆಯಾಗಿದ್ದು ಪೆಟ್ರೋಲ್‌ ಲೀಟರ್‌ಗೆ ₹ 73.66,  ಡೀಸೆಲ್‌ ದರ68.10 ರೂ. ಆಗಿದೆ.

ಇನ್ನು ರಾಷ್ಟ್ರ ರಾಜಧಾನಿ ದೆಹಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 71.36 ರೂ. ಮತ್ತು ಡೀಸೆಲ್‌ ದರ 65.49 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ದರ 74.03 ರೂ. ಮತ್ತು ಡೀಸೆಲ್‌ ದರ 69.66 ರೂ, ಕೋಲ್ಕತಾದಲ್ಲಿ ಪೆಟ್ರೋಲ್‌ ದರ 73.40 ರೂ. ಮತ್ತು ಡೀಸೆಲ್‌ ದರ 67.71 ರೂ, ಮುಂಬೈನಲ್ಲಿ ಪೆಟ್ರೋಲ್‌ ದರ 76.94 ರೂ. ಮತ್ತು ಡೀಸೆಲ್‌ ದರ 69.05 ರೂಗಳಾಗಿದ್ದು, ತುಸು ಏರಿಕೆಯಾಗಿದೆ.

ಇದನ್ನೂ ಓದಿ: Shivakumara Swamiji Passes Away LIVE: 15 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಶ್ರೀಗಳಿಗೆ ಅಂತಿಮ ನಮನ; ತುಮಕೂರಿಗೆ ಬಂದಿಳಿದ ನಿರ್ಮಲಾ ಸೀತಾರಾಮನ್​​

ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರದಿಂದ ವಾಹನ ಸವಾರರು ನಿರಾಳರಾಗಿದ್ದರು. ಎರಡು ದಿನಗಳ ಹಿಂದೆಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣ ಇಳಿಕೆಯಾಗಿತ್ತು. ದೇಶದ ಪ್ರಮುಖ ಮಹಾನಗರಗಳಲ್ಲಿಯೇ ಪೆಟ್ರೋಲ್ ದರ 5 ರಿಂದ 7 ರೂಗಳವರೆಗೂ ಕಡಿಮೆಯಾಗಿತ್ತು. ಇಂದಿನ ಏರಿಕೆಯಿಂದಾಗಿ ತೈಲೋತ್ಪನ್ನಗಳ ಬೆಲೆ ವಾಹನ ಸವಾರರು ಪರದಾಡುವಂತಾಗಿದೆ.

--------------

First published:January 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...