ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಇಳಿಕೆ: ಇಲ್ಲಿದೆ ದರದ ಪಟ್ಟಿ

ಎರಡು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ 19 ರಿಂದ 24 ಪೈಸೆಯಷ್ಟು ಇಳಿಕೆಯಾಗಿತ್ತು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 21 ಪೈಸೆ ಯಷ್ಟು ಇಳಿಕೆಯಾಗಿ, ಪೆಟ್ರೋಲ್‌ ದರ ಲೀಟರ್‌ಗೆ 70.60 ರೂ ಗೆ ಆಗಿತ್ತು

Ganesh Nachikethu
Updated:December 25, 2018, 8:30 PM IST
ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಇಳಿಕೆ: ಇಲ್ಲಿದೆ ದರದ ಪಟ್ಟಿ
ಪೆಟ್ರೋಲ್​​
  • Share this:
ನವದೆಹಲಿ(ಡಿ.25): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯಾಗಿದೆ. ಪೆಟ್ರೋಲ್​​-ಡೀಸೆಲ್​​ ದರದಲ್ಲಿ 20 ಪೈಸೆ ಮತ್ತೆ ಇಳಿಕೆ ಕಂಡಿದ್ದು, ವಾಹನ ಸವಾರರಿಗೆ ಮತ್ತಷ್ಟು ನಿರಾಳ ಸಿಕ್ಕಿದಂತಾಗಿದೆ. ಇಂದು ಪೆಟ್ರೋಲ್ ದರದಲ್ಲಿ 20 ಪೈಸೆಯಷ್ಟು ಇಳಿಕೆಯಾಗಿದ್ದು, ಭಾರತದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​​ ಲೀಟರ್​​ಗೆ 69.79 ರೂ, ಮುಂಬೈನಲ್ಲಿ 75.41 ರೂ, ಚೆನ್ನೈ 72.41 ರೂ, ಕೋಲ್ಕತ್ತದಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ಗೆ 71.89 ರೂ.ಗೆ ಇಳಿಕೆಯಾಗಿದೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ 19 ರಿಂದ 24 ಪೈಸೆಯಷ್ಟು ಇಳಿಕೆಯಾಗಿತ್ತು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 21 ಪೈಸೆ ಯಷ್ಟು ಇಳಿಕೆಯಾಗಿ, ಪೆಟ್ರೋಲ್‌ ದರ ಲೀಟರ್‌ಗೆ 70.60 ರೂ ಗೆ ಆಗಿತ್ತು. ಹಾಗೆಯೇ ಡೀಸೆಲ್ ದರದಲ್ಲಿ 1 ಪೈಸೆಯಷ್ಟು ಇಳಿಕೆಯಾಗಿದ್ದು ಡೀಸೆಲ್‌ ದರ 64.33 ರೂಗೆ ಲಭ್ಯವಾಗುತ್ತಿತ್ತು.

ಇದನ್ನೂ ಓದಿ: ಭೂ-ಕಬಳಿಕೆ ಕಹಾನಿ: ಅಮಾಯಕರಿಗೆ ಸೇರಿದ 310 ಎಕರೆ ಭೂ ಒತ್ತುವರಿಗೆ ಮುಂದಾಗಿತ್ತಂತೆ ಹರಿಖೋಡೆ ಕುಟುಂಬ..!

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 21 ಪೈಸೆ ಇಳಿಕೆಯೊಂದಿಗೆ 69.86 ರೂ, ಮತ್ತು ಡೀಸೆಲ್‌ ದರ 18 ಪೈಸೆ ಇಳಿಕೆಯೊಂದಿಗೆ 63.83 ರೂ ಗಳಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್‌ ದರ 75.45 ರೂ (21 ಪೈಸೆ ಇಳಿಕೆ), ಡೀಸೆಲ್ ಬೆಲೆ 66.76 ರೂ (19 ಪೈಸೆ ಇಳಿಕೆ) ಆಗಿತ್ತು.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್: ಕೆಎಲ್ ರಾಹುಲ್ ಸೇರಿ ಮೂವರಿಗೆ ಖೊಕ್; ಕರ್ನಾಟಕದ ಮೊತ್ತೊಬ್ಬ ಆಟಗಾರನಿಗೆ ಸ್ಥಾನ

ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 71.93 ರೂ (20 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 65.56 ರೂ (18 ಪೈಸೆ ಇಳಿಕೆ) ಗಳಾಗಿವೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 72.45 ರೂ. (21 ಪೈಸೆ ಇಳಿಕೆ), ಡೀಸೆಲ್‌ ಬೆಲೆ 67.35 ರೂ (19 ಪೈಸೆ ಇಳಿಕೆ) ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇಂದಿನ ಬೆಲೆ 3,243 ರೂ ಆಗಿದೆ ಎನ್ನಲಾಗಿತ್ತು.

---------------------ಬೆಳಗಾವಿಯಲ್ಲಿ ಶುರುವಾಗಿದೆ ಬಿಜೆಪಿ ಸಂಸದರ ಬೀದಿ ಜಗಳ
First published:December 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ