ದಾಖಲೆಯ ಏರಿಕೆ ಕಂಡ ಇಂಧನ ಬೆಲೆ; ಮುಂಬೈನಲ್ಲಿ ಪೆಟ್ರೋಲ್ 87.89​, ಡೀಸೆಲ್​ 77.09 ರೂ.ಗೆ ಮಾರಾಟ

news18
Updated:September 9, 2018, 1:38 PM IST
ದಾಖಲೆಯ ಏರಿಕೆ ಕಂಡ ಇಂಧನ ಬೆಲೆ; ಮುಂಬೈನಲ್ಲಿ ಪೆಟ್ರೋಲ್ 87.89​, ಡೀಸೆಲ್​ 77.09 ರೂ.ಗೆ ಮಾರಾಟ
news18
Updated: September 9, 2018, 1:38 PM IST
ನ್ಯೂಸ್​18 ಕನ್ನಡ

ನವದೆಹಲಿ (ಸೆ. 9): ಪೆಟ್ರೋಲ್​ ಬೆಲೆ ಇಂದು ದಾಖಲೆಯ ಏರಿಕೆ ಕಂಡಿದ್ದು, ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 87.89 ರೂ. ಮತ್ತು ಡೀಸೆಲ್​ 77.09 ರೂ. ದಾಖಲಾಗಿದೆ.

ಇಂಧನ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದರಿಂದ ಬಡ ಮತ್ತು ಮಧ್ಯಮವರ್ಗದವರ ಮೇಲಿನ ಹೊರೆ ಹೆಚ್ಚಾಗುತ್ತಲೇ ಇದೆ. ನವದೆಹಲಿಯಲ್ಲಿ ಪೆಟ್ರೋಲ್​ಗೆ 80.50 ರೂ., ಡೀಸೆಲ್​ಗೆ 72.61 ರೂ. ಮಾರಾಟವಾಗುತ್ತಿದೆ. ಕೋಲ್ಕತದಲ್ಲಿ ಪೆಟ್ರೋಲ್​ 83.39 ರೂ., ಡೀಸೆಲ್​ 75.46 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್​ 83.66 ಮತ್ತು ಡೀಸೆಲ್ ದರ 76.75 ಇದೆ.

ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ದೆಹಲಿಯಲ್ಲಿ ಪೆಟ್ರೋಲ್​ ದರ 10.41 ರೂ. ಹೆಚ್ಚಾಗಿದೆ. ಡೀಸೆಲ್​ ದರ 12.81 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ದರ 83.22 ರೂ. ಮತ್ತು ಡೀಸೆಲ್​ 75.03 ರೂ. ದಾಖಲಾಗಿತ್ತು.

ಇಂಧನ ದರದ ಹೆಚ್ಚಳವನ್ನು ವಿರೋಧಿಸಿ ನಾಳೆ ಕಾಂಗ್ರೆಸ್​ ಪಕ್ಷ ದೇಶಾದ್ಯಂತ ಭಾರತ್​ ಬಂದ್​ ಆಯೋಜಿಸಿದೆ.  ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದಿಂದ ಮೋದಿ ಅವರ ಭರವಸೆಯ ಅಚ್ಚೇ ದಿನ್​ ಎಂದರೆ ಇದೇನೋಡಿ ಎಂದು ಪೆಟ್ರೋಲ್​ ದರದ ಪಟ್ಟಿಯನ್ನು ಹಾಕಿ ಕೇಂದ್ರ ಸರ್ಕಾರವನ್ನು ಅಣಕಿಸಲಾಗುತ್ತಿದೆ.

 
Loading...
ಇಂಡಿಯನ್​ ಆಯಿಲ್ ಕಾರ್ಪೋರೇಷನ್​ ಪ್ರಕಾರ ಪೆಟ್ರೋಲ್​ ಬೆಲೆ ಏರುತ್ತಲೇ ಇದೆ. ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚುತ್ತಿವೆ. ಅದರ ಜೊತೆಗೆ ಡಾಲರ್​ ಎದುರು ರೂಪಾಯಿ ಮೌಲ್ಯ ಇಳಿಮುಖವಾಗಿರುವುದ ಕೂಡ ಇಂಧನ ಬೆಲೆ ಏರಿಕೆಗೆ ಮತ್ತೊಂದು ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626